ಬೆಂಗಳೂರು, ಆ 9 ಮಹಾರಾಷ್ಟ್ರದಿಂದ ಬೆಳಗಾವಿಗೆ ಈ ಬಾರಿ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ತಾಲೂಕಿನಲ್ಲಿ ಬಹಳಷ್ಟು ಹಾನಿಯುಂಟಾಗಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಅಶೋಕ್ ಪಟ್ಟಣ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ 4 ರಿಂದ 10 ಟಿಎಂಸಿ ನೀರು ಬಿಡಲಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚು ನೀರು ಬಿಡಲಾಗಿದೆ. ರಾಮದುರ್ಗದಲ್ಲಿ ಮಳೆ ತುಂಬಾ ಹೆಚ್ಚಾಗಿತ್ತು. ಇಂತಹ ಸಂದರ್ಭದಲ್ಲಿ ಹೆಚ್ಚಿನ ನೀರು ಬಿಟ್ಟ ಪರಿಣಾಮ ಜನರಿಗೆ ತೊಂದರೆಯಾಗಿದೆ ಎಂದರು.
ಈಗಾಗಲೇ ನಾಲೆ ಅಗಲೀಕರಣ ಮಾಡಿರುವುದರಿಂದ ಹೆಚ್ಚಿನ ತೊಂದರೆಯಾಗುವುದು ತಪ್ಪಿದೆ.
ಹಲವಾರು ಕಡೆ ಗಂಜಿಕೇಂದ್ರ ತೆರೆದಿದ್ದಾರೆ. ತಾವು ನಾಲ್ಕು ದಿನಗಳಿಂದ ಗಲಾಟೆ ಮಾಡಿದ್ದರಿಂದ ಗುರುವಾರ ಏಪ್ ಲಿಫ್ಟ್ ಮಾಡಿದ್ದಾರೆ. ಹಲವಾರು ಜನರು ದೇವಸ್ಥಾನ, ಮರಗಳ ಮೇಲೆ ಇದ್ದಾರೆ. ಹಳ್ಳಿಗಳಿಗೆ ತುಂಬಿರುವ ನೀರು ತೆರವಾಗಲೂ ಇನ್ನೂ ಒಂದು ವಾರ ಬೇಕು ಎಂದರು.