ಅಕ್ಯುಪಂಕ್ಚರ್ ಸೇವೆಗೆ ಮೋಯಿನ್ ಖಾನ್ಗೆ ’ಮಹಾ ಅಕ್ಯುಪಂಕ್ಚರ್ ರತ್ನ’ ಪ್ರಶಸ್ತಿ

ಅಕ್ಯುಪಂಕ್ಚರ್ ಸೇವೆಗೆ ಮೋಯಿನ್ ಖಾನ್ಗೆ ’ಮಹಾ ಅಕ್ಯುಪಂಕ್ಚರ್ ರತ್ನ’ ಪ್ರಶಸ್ತಿ Moin Khan awarded 'Maha Acupuncture Ratna' for service to acupuncture

 ಕೊಪ್ಪಳ 20: ಆಯುಷ್ ಅಂತರರಾಷ್ಟ್ರೀಯ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಮಹಾರಾಷ್ಟ್ರ ರಾಜ್ಯದ ಓರಂಗಾಬಾದ್ನ ಯಶವಂತರಾವ್ ಚವಾಣ್ ನಾಟ್ಯಗೃಹದಲ್ಲಿ ಜುಲೈ 19ರಂದು ನಡೆದ ಸಮಾರಂಭದಲ್ಲಿ ಕೊಪ್ಪಳದ ಗ್ರೀನ್ ಲೈಫ್ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಅಕ್ಯುಪಂಕ್ಚರ್ ತಜ್ಞ ಮೋಯಿನ್ ಖಾನ್ ಅವರಿಗೆ ’ಮಹಾ ಅಕ್ಯುಪಂಕ್ಚರ್ ರತ್ನ  ಪ್ರದಾನ ಮಾಡಿ ಸನ್ಮಾನಿಸಲಾಯಿತು.  

ಅಕ್ಯುಪಂಕ್ಚರ್ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ಆರೋಗ್ಯ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷ ನಿತಿನ್ ರಾಜೇ ಪಾಟೀಲ, ಹಿರಿಯ ನ್ಯಾಯವಾದಿ ಹಾಗೂ ಸಮಾಜದ ಮುಖಂಡ ನಜೀರ್ ಖಾಜಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮುಂಬೈ ಹೈಕೋರ್ಟ್ನ ನ್ಯಾಯವಾದಿಗಳು, ಅಧಿಕಾರಿಗಳು ಹಾಗೂ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅಕ್ಯುಪಂಕ್ಚರ್ ತಜ್ಞರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.  

ಮೋಯಿನ್ ಖಾನ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ್ಠದಿಷಿಹ್ಠಿದ್ಠ್ಲೀ್ಪಷ್ಛ್ದ, ಗಣ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅವರ ಚಿಕಿತ್ಸೆಯಿಂದ ಆರೋಗ್ಯ ಲಾಭ ಪಡೆದಿರುವ ಅನೇಕರು ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಆರೋಗ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದ್ದಾರೆ.