ಎಸ್‌.ಸಿ, ಎಸ್‌.ಟಿ ಕಲ್ಯಾಣಕ್ಕೆ ಮೀಸಲಿಟ್ಟ ಹಣ ದುರ್ಬಳಕೆ; ಗಡ್ಡಂ ತಿಮ್ಮಪ್ಪ

Misappropriation of funds earmarked for SC, ST welfare; Gaddam Thimmappa

ಎಸ್‌.ಸಿ, ಎಸ್‌.ಟಿ ಕಲ್ಯಾಣಕ್ಕೆ ಮೀಸಲಿಟ್ಟ ಹಣ ದುರ್ಬಳಕೆ; ಗಡ್ಡಂ ತಿಮ್ಮಪ್ಪ

ಬಳ್ಳಾರಿ 28: ಎಸ್‌.ಸಿ, ಎಸ್‌.ಟಿ ಕಲ್ಯಾಣಕ್ಕೆ ಮೀಸಲಿದ್ದ ಖಅಖಕ-ಖಿಖಕ ಯೋಜನೆಯ  ಪರಿಶಿಷ್ಟ ಪಂಗಡ ಹಣದ  ದುರ್ಬಳಕೆ ಮಾಡುತ್ತಿರುದನ್ನು ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಪತ್ರ ಸಲ್ಲಿಸಿದರು.  ಇದೇ ವೇಳೆಯಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವಸೇನೆ, ಜಿಲ್ಲಾ ಘಟಕ ಅಧ್ಯಕ್ಷರಾದ ಗಡ್ಡಂ ತಿಮ್ಮಪ್ಪ ರವರು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದ  ದಲಿತರ ಅಭಿವೃದ್ಧಿಗೆ ಮೀಸಲಿಟ್ಟದ ಹಣವನ್ನು ಸ್ವಪ್ರತಿಷ್ಠೆಯ ಕಾರ್ಯಕ್ರಮಗಳಿಗೆ ಬಳಸಿರುವುದು ಈಗ ಜನಜಾಗೃತವಾಗಬೇಕಿದೆ. 

ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರವು ಎಸ್‌.ಸಿ, ಎಸ್‌.ಟಿ ಕಲ್ಯಾಣಕ್ಕೆ ಮೀಸಲಿದ್ದ ಖಅಖಕ-ಖಿಖಕ ಯೋಜನೆಯ ಮೊತ್ತ ರೂ.25.426.68 ಕೋಟಿಗಳಷ್ಟು ಹಣದ ದುರ್ಬಗಳಿಗೆ ವಾಲ್ಮೀಕಿ ಎಲ್ಲಾ ನಿಗಮದಲ್ಲಾದ ಭಷ್ಟಾಚಾರ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಬಂಧುಗಳ ನಿದ್ದೆಗೆಡಿಸಿದೆ. ಸರ್ಕಾರದ ಮತ್ತೊಮ್ಮೆ ಬಜೆಟ್ ಮಂಡಿಸಲು ಹೊರಟಿರುವ ಈ ಗಳಿಗೆಯಲ್ಲಿ  ಇರುವ ದುರುದ್ದೇಶದಿಂದ ವಂಚನೆಗೊಳಗಾದ ಸಮಾಜದ ಬಂಧುಗಳನ್ನು ಜಾಗೃತಗೊಳಿಸಬೇಕಿದೆ. ಈ ವಿಷಯದ ಕುರಿತು ಮುಖ್ಯಂತ್ರಿಗಳು ಈ ವಿಷಯದ ಬಗ್ಗೆ ಜಾಗೃತಿಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಂತ ಉಗ್ರವಾದ  ಹೋರಾಟವವನ್ನು ಹಮ್ಮಿಕೊಳ್ಳಲಾಗುವುದೆಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಮಾತನ್ನು ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಕೆ.ಹನುಮಂತಪ್ಪ ಗೌರವಾದ್ಯಕ್ಷರು, ಪಿ ಆದಿಮೂರ್ತಿ ಕಾರ್ಯದರ್ಶಿ, ಕೃಷ್ಣ ನಗರಧ್ಯಕ್ಷರು, ಸದಸ್ಯರು ಹಾಗೂ  ವಾಲ್ಮೀಕಿ ಸಮುದಾಯದ ಹಿರಿಯರು ಇತರರು ಆಗಮಿಸಿದ್ದರು.