ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಸಚಿವ ಸ್ಥಾನ ಕೊಡಬಾರದು : ವಿ.ಎಸ್.ಉಗ್ರ್ಪ ಅಭಿಮತ
Ministerial posts should not be given to undeserving individuals based on caste: V.S. Ugrappa's view
ಕಾರವಾರ 12 : ಜಾತಿ ಸಮುದಾಯ ಆಧಾರದಲ್ಲಿ ಸಚಿವ ಸ್ಥಾನ ಕೊಡಬೇಡಿ. ಸಚಿವ ಹುದ್ದೆ ಅವರ್ಪನ ಆಸ್ತಿಯಲ್ಲ. ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಸಚಿವ ಕೊಡಬಾರದು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿ.ಎಸ್.ಉಗ್ರ್ಪ ಅಭಿಪ್ರಾಯಪಟ್ಟರು. ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಒಂದೇ ಮುಖಕ್ಕೆ ಸಚಿವ ಸ್ಥಾನ ನೀಡಲಾಗುತ್ತಿದೆ. ಇದರ ಬದಲಾಗಿ ಹೊಸ ಮುಖಗಳಿಗೆ ಸಹ ಅವಕಾಶ ನೀಡಬೇಕು ಸರ್ಕಾರಕ್ಕೆ ಸಲಹೆ ನೀಡಿದರು. ಕಾರವಾರದಲ್ಲಿ ರವಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವಾಗ ಜಾತಿ ಮತ್ತು ಧರ್ಮ ಪ್ರಧಾನವಾಗಬಾರದು.
ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಸಚಿವ ಸ್ಥಾನ ಕೊಡಬಾರದು. ಅಯೋಗ್ಯರು, ಅಪ್ರಾಮಾಣಿಕರು, ಕ್ರಿಮಿನಲ್ಸ್, ಭ್ರಷ್ಟರು ಮಂತ್ರಿಗಳಾಗುವ ಬದಲು, ನಾಲ್ಕಾರು ಜನ ವಿದ್ಯಾವಂತರು, ಜನಸೇವೆಯ ಅರ್ಥ ತಿಳಿದವರು , ವಿಚಾರವಂತರು ಮಂತ್ರಿಗಳಾದರೆ , ಆ ದೇಶ ಉದ್ಧಾರ ಆಗುತ್ತದೆ. ಜಾತಿ, ಧರ್ಮ ಎನ್ನುವವರಿಗೆ ಮಂತ್ರಿಗಿರಿ ನಿಮ್ಮಪ್ಪನ ಮನೆ ಆಸ್ತಿ ಅಲ್ಲ ಎಂದು ಹೇಳಬೇಕಿದೆ.
ಸರ್ಕಾರ ಪಕ್ಷದ್ದು, ಕಾರ್ಯಕರ್ತರದ್ದು, ಜನರದ್ದು. ಈ ರಾಜ್ಯ ಉಳುಸುವಂತಹ ದಮ್ಮು, ಗತ್ತು, ಬದ್ಧತೆ ಯಾರಿಗೆ ಇದೆಯೋ, ಅಂಥವರನ್ನ ಗುರುತಿಸಿ ಸಚಿವರನ್ನಾಗಿ ಮಾಡುವ ಬದ್ಧತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಇದೆ ಎಂದು ಉಗ್ರ್ಪ ಹೇಳಿದರು. ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಅದೇ ಮುಖಗಳಿಗೆ ಸಚಿವ ಸ್ಥಾನ ನೀಡುತ್ತಾರೆ. ಅದೇ ಮುಖಗಳಿಗೆ ಅಧಿಕಾರ ಕೊಟ್ಟರೇ ಏನು ಆಗುತ್ತೆ? ಹೊಸ ಮುಖಗಳಿಗೆ ಅವಕಾಶ ಕೊಡಬೇಕು. ಹೊಸ ಮುಖಗಳಿಗೆ ಅವಕಾಶ ನೀಡಿ ಪಕ್ಷ ಸಂಘಟನೆ ಮಾಡಬೇಕು.
ಹತ್ತು ವರ್ಷ, ಹದಿನೈದು ವರ್ಷ ಸಚಿವ ಸ್ಥಾನವನ್ನು ಕೆಲವರು ಅನುಭವಿಸಿದ್ದಾರೆ. ಟಾಪ್ ವ್ಯಕ್ತಿಗಳನ್ನ ಬಿಟ್ಟು, ಮಿಕ್ಕವರನ್ನು ಪಕ್ಷದ ಸಂಘಟನೆಗೆ ಕಳುಹಿಸಬೇಕು. ಯಾರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೋ ಅಂಥವರಿಗೆ, ಯುವಕರು, ಅನುಭವಸ್ಥರಿಗೆ ಸಚಿವ ಸ್ಥಾನ ನೀಡಿದರೆ, ಪಕ್ಷದ ಇಮೇಜ್ ಮತ್ತಷ್ಟು ಎತ್ತರಕ್ಕೆ ಹೋಗುತ್ತದೆ ಎಂದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 