ಸಚಿವ ಜಮಿರ್ ಅಹ್ಮದಖಾನ್ ಹುಟ್ಟುಹಬ್ಬ: ನೋಟ್‌ಬುಕ್ ಪೆನ್ನು ವಿತರಣೆ
Minister Zamir Ahmad Khan's birthday: Notebook and pen distribution
ಸಚಿವ ಜಮಿರ್ ಅಹ್ಮದಖಾನ್ ಹುಟ್ಟುಹಬ್ಬ: ನೋಟ್‌ಬುಕ್ ಪೆನ್ನು ವಿತರಣೆ
ಸಿಂದಗಿ 02: ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಚಿವ ಜಮಿರ್ ಅಹ್ಮದಖಾನ್ ಅವರ ಹುಟ್ಟು ಹಬ್ಬವನ್ನು ಸಾಮಾಜಿಕ ಸೇವೆಯ ಮೂಲಕ ಆಚರಣೆ ಮಾಡಲಾಗುತ್ತಿದೆ ಎಂದು ಕನ್ನಡಪರ ಹೋರಾಟಗಾರ ಸದ್ದಾಂ ಆಲಗೂರ ಹೇಳಿದರು.
ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮದ ಪರಮಾನಂದ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಸಚಿವ ಜಮೀರ್ ಅಹಮ್ಮದ್‌ಖಾನ್ ಅವರ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಬಳಗದ ವತಿಯಿಂದ ವಿಕಲಚೇತನ ಮಕ್ಕಳಿಗೆ ನೋಟ್‌ಬುಕ್ ಪೆನ್ನುಗಳನ್ನು ವಿತರಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಬೇಕು. ಅವರ ಅಭಿಮಾನಿ ಬಳಗವು ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ಸಿದ್ಧ ಎಂದರು.
ಪತ್ರಕರ್ತ ಇಸ್ಮಾಯಿಲ್ ಶೇಖ್ ಪ್ರಾಸ್ತಾವಿಕ ಮಾತನಾಡಿದರು. ಮುಖಂಡ ಮಡಿವಾಳ ನಾಯ್ಕೋಡಿ ಸ್ವಾಗತಿಸಿದರು. ಪೈಗಂಬರ್ ಬುಕ್ಕದ್, ರಹೀಮ್ ಬೆನಕನಹಳ್ಳಿ, ಶ್ರೀಶೈಲ ಹಿಪ್ಪರಗಿ, ರಫೀಕ್ ಮುಲ್ಲಾ, ಅಪ್ಪು ದೇಸಾಯಿ, ರಸೀಧ್ ಕುಮಸಗಿ, ರಜಾಕ್ ಪಟೇಲ್, ಇಸ್ಮಾಯಿಲ್ ಹಳ್ಳಿಮನಿ, ದತ್ತಾತ್ರೇಯ ಕಲಕೇರಿ, ಸಲಿಂ ಅಸಂತಾಪುರ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 