ಮಾಯಾಕ್ಕಾದೇವಿ ಜಾತ್ರೆ: ಪೂರ್ವ ಭಾವಿ ಸಭೆ

ಆನಂದ ಕೋಳಿಗುಡ್ಡೆ 

ಲೋಕದರ್ಶನ ವರದಿ

ಚಿಂಚಲಿ 13: ದಕ್ಷಣ ಭಾರತದಲ್ಲಿ ಒಂದು ತಿಂಗಳವರೆಗೆ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಬರುವ ಭಕ್ತರಿಗೆ ಯಾವುದೇ ಕುಡಿಯುವ ನೀರಿನ, ಬೆಳಕಿನ ಸೂಕ್ತವಾದ ವ್ಯವಸ್ಥೆ, ಸೂಕ್ತವಾದ ಪೋಲಿಸ್ ಬಂದೋಬಸ್ತಿ ಹಾಗೂ ಘಟಪ್ರಭಾ ಎಡದಂಡೆ ಕಾಲುವೆಯಿಂದ ನೀರು ಹರಿಸುವ ಸೂಕ್ತವಾದ ನೀರಾವರಿ ಇಲಾಖೆಯೊಂದಿಗೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.

ಸೋಮವಾರ ನಡೆದ ಜಾತ್ರಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ದೇವಿಯ ಜಾತ್ರೆಗೆ ಬರುವ ಭಕ್ತರಿಗೆ ಅನಾನುಕೂಲವಾಗಂತೆ ಪಟ್ಟಣದ ಸಾರ್ವಜನಿಕರು ಮತ್ತು ಇಲಾಖೆಯವರು ಸಹಕಾರ ನೀಡಬೇಕು ಮತ್ತು ಜಾತ್ರಾ ಸಂದರ್ಭದಲ್ಲಿ ಮದ್ಯದಂಗಡಿಗಳು ಬಂದ್ ಮಾಡುವ ಬಗ್ಗೆ ತಾಲೂಕಾಡಳಿತ ಅಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸಹಕರಿಸಬೇಕೆಂದರು.

ಜಾತ್ರೆಯಲ್ಲಿ ಯಾವುದೇ ತರಹದ ಕುಡಿಯುವ ನೀರಿನ ಬಗ್ಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪಟ್ಟಣದ ಸುತ್ತ ಮುತ್ತಲಿನ ರಿಪೇರಿಯಲ್ಲಿರುವ  ಕೈ ಪಂಪುಗಳನ್ನು ರಿಪೇರಿ ತಕ್ಷಣ ಮಾಡಬೇಕು ಮತ್ತು ಹೊಸ ಪಂಪಸೇಟ್ನ್ನು  ಪಟ್ಟಣ ಪಂಚಾಯತಿಯಲ್ಲಿ ಶಿಲ್ಕು ಇಡಬೇಕು. ಜಾತ್ರೆ ಮುಗಿಯುವರೆಗೆ ಕೈಪಂಪು ರಿಪೇರಿ ಮಾಡುವ ಮೇಸ್ತ್ರಿಯನ್ನು ಪಟ್ಟಣದಲ್ಲಿ ವಾಸವಾಗಿರಬೇಕು. ರಸ್ತೆ ಮೇಲೆ ಟ್ರ್ಯಾಕ್ಟರ ಮೂಲಕ ನೀರು ಸಿಂಪಡಿಸುವದು ಹಾಗೂ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಲು ತಾಲೂಕಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ಶಾಸಕರು ಸೂಚಿಸಿದರು.

ದನ ಕರಗಳಿಗೆ ಕಾಲುಬೆನೆ ಪ್ರಾರಂಭವಾಗಿರುವುದರಿಂದ ಪಟ್ಟಣದಲ್ಲಿರುವ ದನ ಕರಗಳಿಗೆ ಮುಂಜಾಗೃತೆ ಕ್ರಮವಾಗಿ ಲಸಿಕೆಗಳನ್ನು ಪ್ರಾರಂಭಿಸಿ ಮತ್ತು ಹೊರ ಗ್ರಾಮಗಳಿಂದ ಜಾತ್ರೆಗೆ ಬರುವ ದನ ಕರಗಳಿಗೆ ಲಸಿಕೆ ಕಡ್ಡಾಯವಾಗಿ ಲಸಿಕೆ ಹಾಕುವ ವ್ಯವಸ್ಥೆಗಳು ವಿವಿಧ ಸ್ಥಳಗಳಲ್ಲಿ ವ್ಯವಸ್ಥೆ ಕ್ರಮ ತಗೆದುಕೊಳ್ಳಬೇಕು. ಜಾತ್ರೆಯ ಸಮಯದಲ್ಲಿ ದನಗಳಿಗೆ ಪೂರ್ಣ 7 ದಿನಗಳವರೆಗೆ ನೀರಿನ ವ್ಯವಸ್ಥೆಗಾಗಿ ಸ್ಥಳ ಸ್ಥಳಗಳಲ್ಲಿ ಗಂಗಾಳ ಇಡಬೇಕು ಮತ್ತು ದನಗಳು ಕುಡುವ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛತೆ ಮಾಡುವ ಬಗ್ಗೆ ತಾಲೂಕಾ ಪಶು ವೈದ್ಯಾಧಿಕಾರಿಗಳೊಂದಿಗೆ ಚಚರ್ಿಸಿದರು.

 ಜಾತ್ರೆಯ ಕಾಲಕ್ಕೆ ಸ್ವಚ್ಛತೆಯನ್ನು ಕಾಪಾಡಲು ಕುಡಿಯುವ ನೀರಿನ ಸ್ವಚ್ಛತೆ, ಕ್ಲೊರೇಶನ್ ಮಾಡಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಮತ್ತು ಔಷಧಿಗಳನ್ನು ಮುಂಚಿತವಾಗಿ ಹೆಚ್ಚಿಗೆ ತರಿಸಿಕೊಳ್ಳಬೇಕು ಮತ್ತು ಆರೋಗ್ಯ ಇಲಾಖೆ ಆರೋಗ್ಯ ವ್ಯವಸ್ಥೆ ಕುರಿತು ಟಿಸಿಎಲ್ ಪಾವಡರ ತರಿಸಿಕೊಳ್ಳಬೇಕು ಅಂಬುಲೆನ್ಸ್ 2 ರಿಂದ 3 ಗಾಡಿಗಳನ್ನು ಇರುವಂತೆ ವ್ಯವಸ್ಥೆ ಮಾಡಬೇಕು ಮತ್ತು ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳನ್ನು ನೇಮಿಸಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿರು.

ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತಾಧಿಗಳು ಬರುವದರಿಂದ ಚಿಂಚಲಿ-ಕುಡಚಿ ರಾಯಬಾಗ, ಚಿಂಚಲಿ ರೈಲ್ವೆ ಸ್ಟೇಶನ್ ರಸ್ತೆ ಬದಿಗೆ ಇದ್ದ ಕಂಠಿಗಳನ್ನು ಕಡಿಸಿ ಮತ್ತು ರಸ್ತೆ ಎರಡು ಬದಿಗೆ ಗರಸು ಹಾಕಿಸಿ ರಸ್ತೆ ರಿಪೇರಿ ಮಾಡಬೇಕು ಎಇಇ/ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸಭೆಯಲ್ಲಿ ತಿಳಿಸಿದರು.

ಜಾತ್ರೆಯ ಅವಧಿಯಲ್ಲಿ ಶಾಂತತಾಭಂಗವಾಗದಂತೆ ನೋಡಿಕೊಳ್ಳಬೇಕು ಮತ್ತು ಜಾತ್ರೆಯ ಸ್ಥಳದ ಸುತ್ತಮುತ್ತಲೂ ಜೂಜಾಟ ಬಂದ ಮಾಡಸಿ ಆ ಜನರನ್ನು ಜಾತ್ರೆಯಿಂದ ಹೊರಗೆ ಹಾಕಬೇಕು ಮತ್ತು ಜಾತ್ರೆಯಲ್ಲಿ ಯಾವುದೇ ಕಳ್ಳತನ ಆಗದಂತೆ ನೋಡಿಕೊಳ್ಳಬೇಕು ಮತ್ತು ರೈತರು ಗ್ರಾಮದ ಸುತ್ತ ಜಮೀನಿನಲ್ಲಿ ಬೆಳೆಗಳನ್ನು ತಗೆದು ಭಕ್ತ ಜನರಿಗೆ ಅನುಕೂಲ ಮಾಡಬೇಕು ಹಾಗೂ ವಿವಿಧ ಸ್ಥಳಗಳಲ್ಲಿ ಪೋಲಿಸ್ ಚೌಕಿ ಹಾಕಿ ಜಾತ್ರೆಯಲ್ಲಿ ಪೋಲಿಸ್ರನ್ನು ಬಂದೋಬಸ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಲು ಮೇಲಾಧಿಕಾರಿಗಳಿಗೆ ಕೊರಲು ಸಭೆಯಲ್ಲಿ ತಿಳಿಸಿದರು. ವಾಹನಗಳು ಜಾತ್ರೆಯ ಒಳಗೆ ಮತ್ತು ಹೊರಗೆ ಹೋಗುವಸಲುವಾಗಿ ಕೆಎಸ್ಆರ್ಟಿಸಿ ಮತ್ತು ಎಮ್ಎಸ್ಆರ್ಟಿಸಿ ಬಸ್ಸುಗಳು ಟ್ರಾಫಿಕ್ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಾತ್ರೆಯ ಎರಡು ದಿನ ಮುಂಚಿತವಾಗಿ ಪಟ್ಟಣಕ್ಕೆ ಘಟಪ್ರಭಾ ಎಡದಂಡೆ ಕಾಲುವೆಯಿಂದ ನೀರನ್ನು ಹರಿಸಬೇಕು ಎಂದು ಸಾರ್ವಜನಿಕರು ಹೇಳಿದರು. ಅಧಿಕಾರಿಗಳು ಈ ಬಾರಿ ಜಾತ್ರೆಗೆ ವಿಶೇಷವಾಗಿ 5 ದಿನಗಳವರೆಗೆ ನೀರು ಹರಿಸುವುದ್ದಾಗಿ ಹೇಳಿದರು. 

ಪಪಂ ಆಡಳಿತಾಧಿಕಾರಿ ಚಂದ್ರಕಾಂತ ಭಜಂತ್ರಿ  ಮಾತನಾಡಿ, ತಾಲೂಕಿನ ಅಧಿಕಾರಿಗಳು ಪ್ರಾಮಾಣಿಕವಾಗಿ ತಕತ್ಯರ್ವಗಳನ್ನು ಮಾಡಬೇಕು ಎಂದರು.

ಸಾರ್ವಜನಿಕರು ಸೂವ್ಯವಸ್ಥಿತವಾಗಿ ನಡೆಯುವ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದುಕೊಂಡು ಅದಕ್ಕೆ ಸೂಕ್ತವಾದ ಪರಿಹಾರವನ್ನು ಸೂಕ್ಷ್ಮವಾಗಿ ಬಗೆ ಹರಿಸಬಹುದು ಎಂದು ರಾಯಬಾಗ ತಹಶಿಲ್ದಾರ ಹಾಗೂ ಚಿಂಚಲಿ ಪಟ್ಟಣ ಪಂಚಾಯತ ಆಡಳಿತಾಧಿಕಾರಿ ಚಂದ್ರಕಾಂತ ಭಜಂತ್ರಿ ಹೇಳಿದರು.

ದೇವಸ್ಥಾನದ ಟ್ರೇಸ್ಟ ಕಮೀಟಿ ಅಧ್ಯಕ್ಷ  ಜೆ.ಆರ್.ಜಾಧವ, ಪ. ಪಂ ಸದಸ್ಯ ಜಾಕೀರ ತರಡೆ, ಕದ್ದು ಜಾಧವ, ಅಂಕುಶ ಜಾಧವ, ಮಹಾದೇವ ಪಡೋಳಕರ, ನಾನಾಸಾಹೇಬ ಸೌಂದಲಗಿ, ಪಂ ಪಂಚಾಯತ ಸದಸ್ಯರಾದ ಸಂಜು ಬಾಬು ಮೈಶಾಳೆ, ರಾಜು. ಶಿಂದೆ, ಮೈಸೂರ ಕೊಂಬೆನ್ನವರ, ಅಪ್ಪಾಸಾಬ ಸೌಂದಲಗಿ, ಮಲ್ಲಪ್ಪ ಕಮತೆ, ಸುಭಾಷ ಕೋರೆ, ರಾವಸಾಬ ತಾಲೂಕಾ ಆಡಳಿತ ಅಧಿಕಾರಿಗಳು ಪಪಂ ಮುಖ್ಯಾಧಿಕಾರಿ ಪೂಜಾರಿ, ರಮೇಶ ಹಾರೂಗೇರಿ, ಸುಭಾಷ ಮಲಾಜೂರೆ, ತುಕಾರಾಮ ಟೋಣೆ, ಅಜೀತ ಪಾಟೀಲ, ವಸಂತ ಕರಾಕಾಯಿ, ಹಾಗೂ ಸದಸ್ಯ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು. ಲಕ್ಷ್ಮಣ ಕೋಳಿಗುಡ್ಡೆ ಸ್ವಾಗತಿಸಿ ಎಸ್.ಎ ತುರಮುದ್ದಿ ನಿರೂಪಿಸಿ ವಂದಿಸಿದರು.