ಕನ್ನಡ ಸಾಹಿತ್ಯಕ್ಕೆ ಮಠಗಳ ಕೊಡುಗೆ ಅಪಾರ: ಶೆಲ್ಲಿಕೇರಿ


ಗುಳೇದಗುಡ್ಡ 22:   ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಮಠಗಳ ಕೊಡುಗೆ ಅಪಾರವಾಗಿರುವುದು ಕಂಡು ಬರುತ್ತದೆ. ಕನ್ನಡ ನಮ್ಮೆಲ್ಲರ ಉಸಿರಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆ, ನೆಲ ಜಲದ ವಿಷಯ ಬಂದಾಗ ಒಂದಾಗಿ ಕನ್ನಡ ತಾಯಿಯ ಸೇವೆಗೆ ಪಣತೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು. 

    ಅವರು ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳ 36ನೇ ವಾರ್ಷಿಕ ಪುಣ್ಯರಾಧನೆಯ ಶರಣ ಸಂಗಮ ಸಮಾರಂಭದ ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲದ ಉಳಿವಿಗಾಗಿ ಮತ್ತು ಭಾಷಾಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ. ಕನ್ನಡ ಸೇವೆಗೆ ತಾವು ಸದಾ ಸಿದ್ಧ. ಜಿಲ್ಲೆಯಾದ್ಯಂತ ಸಂಘಟಕರು, ಕಲಾವಿದರು, ಪತ್ರಕರ್ತರು ಒಳಗೊಂಡು ಎಲ್ಲರೂ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಕನ್ನಡವನ್ನು ಉಳಿಸಿ ಅದರ ಪರಿಪೂರ್ಣ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪಡಿಷತ್ತು ಸದಾ ಮುಂದಾಳತ್ವ ವಹಿಸಿಕೊಂಡು ಕಾರ್ಯನಿರ್ವಹಿಸಲಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. 

     ಕೊಣ್ಣೂರಿನ ಆಯುರ್ವೇದ ವೈದ್ಯರಾದ ಡಾ.ಹನಮಂತ ಮಳಲಿ ಅವರು ಭಾರತೀಯ ಸಂಸ್ಕೃತಿ ಮತ್ತು ಆರೋಗ್ಯ ಕುರಿತು ಮಾತನಾಡಿ, ಶರಣ ಪರಂಪರೆಯ ಮೂಲಕ ನಮ್ಮ ಭಾರತ ಜಗತ್ತಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಕಲಿಸಿದೆ. ಮಕ್ಕಳಲ್ಲಿ ಒಳಗೊಂಡು ಸಮಾಜದಲ್ಲಿ ಆದರ್ಶ ವಿಚಾರ ಮೂಡಿಸುವ ನಿಟ್ಟಿನಲ್ಲಿ ಮಠಗಳ ಕಾರ್ಯ ಶ್ಲಾಘನೀಯ ಎಂದರು. 

     ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ಅಥಣಿಯ ಶ್ರೀಪ್ರಭು ಬಸವ ಶ್ರೀಗಳು, ಚಿತ್ರದುರ್ಗದ ಶ್ರೀಇಮ್ಮಡಿ ಕಲ್ಯಾಣ ಶ್ರೀಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಶ್ರೀಗುರುಬಸವ ದೇವರು, ನಾಗೇಶಪ್ಪ ಪಾಗಿ, ಮಲ್ಲಿಕಾರ್ಜುನ ರಾಜನಾಳ, ಸಂಗಮೇಶ ಹುನಗುಂದ, ಶಿವಾನಂದ ಜವಳಿ, ಗಿರಿಶ ಮೇದಾರ, ಬಾಬುರಾವ ಭಾವಿಕಟ್ಟಿ, ಚನ್ನಪ್ಪ ದಾಡಮೋಡೆ, ಸೋಮಶೇಖರ ಕಲಬುರ್ಗಿ, ಧರಿಯಪ್ಪ ಗಾಣಿಗೇರ, ದೀಪಾ ಬಂಕಾಪೂರ ಇದ್ದರು.