ಹಾಸ್ಟೆಲ್ ಕಾರ್ಮಿಕರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ
ಬಳ್ಳಾರಿ 23 ಏಪ್ರಿಲ್, 2025 ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಾಸ್ಟೆಲ್ ಕಾರ್ಮಿಕರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ-ಂಋಖಿಗಅ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ (ರಿ)ದಿಂದ-ಹಲವು ವರ್ಷಗಳಿಂದ ಸೇವೆಯಲ್ಲಿರುವ ಹಾಸ್ಟೆಲ್ ‘ಡಿ’ ಗ್ರೂಪ್ ನೌಕರರ ಸೇವೆ ಖಾಯಂಗೊಳಿಸಿ!-ಹೊರಗುತ್ತಿಗೆ ಪದ್ದತಿ ರದ್ದುಪಡಿಸಿ! ಇಲಾಖೆಯಿಂದ ನೇರ ವೇತನ ಪಾವತಿಸಿ!-ಕನಿಷ್ಠ ವೇತನ ಮಾಸಿಕ ರೂ.ರೂ.35,950- ನಿಗದಿಪಡಿಸಿ! ,ಹಾಸ್ಟೆಲ್ ಕಾರ್ಮಿಕರ ರಾಜ್ಯ ಮಟ್ಟದ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಂಋಖಿಗಅ ಕಛೇರಿಯಲ್ಲಿ ರಾಜ್ಯ ಮಟ್ಟದ ಪ್ರತಿಭಟನೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಾ.ಪ್ರಮೋದ್, ಕಾರ್ಯದರ್ಶಿ ಸುರೇಶ್.ಜಿ, ಮುಖಂಡರಾದ ಮುರಳಿಕೃಷ್ಣ, ಚೇತನ್, ಲಕ್ಷ್ಮೀ, ಅಶ್ವಿನಿ, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್)ದ ಅಡಿಯಲ್ಲಿ ರಾಜ್ಯದಾದ್ಯಂತ ಇರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆ/ಕಾಲೇಜು ಹಾಗೂ ಇತ್ಯಾದಿ ಆಶ್ರಮ ಶಾಲೆ, ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದಿಂದ ಮಂಜೂರಾಗಿ ಖಾಲಿ ಇರುವ ಮುಖ್ಯ ಅಡಿಗೆಯವರು, ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ಸ್ವಚ್ಛತೆ ಮತ್ತು ಜವಾನ ಸೇರಿದಂತೆ ಹಲವು ‘ಡಿ’ ಗ್ರೂಪ್ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರ ಹಲವು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಂಋಖಿಗಅ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ (ರಿ) ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.ಈ ಕೆಳಗಿನ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್ 23, 2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಬೃಹತ್ ಹೋರಾಟದಲ್ಲಿ ರಾಜ್ಯದ ಎಲ್ಲಾ ಹಾಸ್ಟೆಲ್ ‘ಡಿ’ ಗ್ರೂಪ್ ನೌಕರರು ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘವು ಮನವಿ ಮಾಡುತ್ತದೆ.ಪ್ರಮೂಖ ಹಕ್ಕೊತ್ತಾಯಗಳು ಸರ್ಕಾರದ ವಿವಿಧ ವಿದ್ಯಾರ್ಥಿ ವಸತಿನಿಲಯಗಳು ಮತ್ತು ವಸತಿ ಶಾಲೆ/ಕಾಲೇಜ್, ಆಶ್ರಮ ಶಾಲೆಗಳಲ್ಲಿ ಅಡಿಗೆಯವರು, ಅಡಿಗೆ ಸಹಾಯಕರು, ಕಾವಲುಗಾರರು ಸೇರಿ ಇನ್ನಿತರ ಖಾಲಿ ‘ಡಿ’ ಗ್ರೂಪ್ ಹುದ್ದೆಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಅವೇ ಹುದ್ದೆಗಳಲ್ಲಿ ಖಾಯಂಗೊಳಿಸಬೇಕು.ನೌಕರರನ್ನು ಶೋಷಣೆ ಮಾಡುತ್ತಿರುವ ಹೊರಗುತ್ತಿಗೆ ಪದ್ದತಿಯನ್ನು ರದ್ದುಪಡಿಸಬೇಕು ಮತ್ತು ಸರ್ಕಾರದಿಂದಲೇ ನೇರವಾಗಿ ವೇತನ ಪಾವತಿಸಬೇಕು. ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ವೇತನವನ್ನು ಮಾಸಿಕ ರೂ.35,950/- ಗಳಿಗೆ ಪರಿಷ್ಕರಣೆ ಮಾಡಬೇಕು. ಕೈಗವಸು, ಏಪ್ರಾನ್, ಹತ್ತಿ ಬಟ್ಟೆಯ ಸಮವಸ್ತೊ ಸೇರಿದಂತೆ ಇತರೆ ಸುರಕ್ಷಾ ಸಾಮಾಗ್ರಿಗಳನ್ನು ಉಚಿತವಾಗಿ ಒದಗಿಸಬೇಕು. ವಾರದ ರಜೆ, ಗಳಿಕೆಯ ರಜೆ, ಸಾಂದಭಿಕ ರಜೆಗಳನ್ನು ಒದಗಿಸಬೇಕು ಮತ್ತು ಸರ್ಕಾರಿ ರಜಾ ದಿನಗಳಂದು ಕೆಲಸ ಮಾಡುವ ನೌಕರರಿಗೆ ನಿಯಮದಂತೆ ದುಪ್ಪಟ್ಟು ವೇತನ ನೀಡಬೇಕು. ಹಾಸ್ಟೇಲ್/ವಸತಿ ಶಾಲೆಯ ಮಂಜುರಾತಿ ಹುದ್ದೆಗಳ ಸಂಖ್ಯೆಗೆ ತಕ್ಕಂತೆ ಅಡುಗೆ ಸಿಬ್ಬಂಧಿಯವರನ್ನು ನೇಮಕ ಮಾಡಿಕೊಳ್ಳಬೇಕು. ಎಲ್ಲರಿಗೂ ವೇತನ ಚೀಟಿ, ನೇಮಕಾತಿ ಪತ್ರ, ಗುರುತಿನ ಚೀಟಿ, ಇಎಸ್‌ಐ ಕಾರ್ಡ್ಗಳನ್ನು ನೀಡಬೇಕು. ಅಡಿಗೆ ನೌಕರರ ಸಂಖ್ಯೆಯನ್ನು ಕಡಿತ ಮಾಡಿರುವ ಸಮಾಜ ಕಲ್ಯಾಣ ಇಲಾಖೆಯ ಆದೇಶವನ್ನು ಕೂಡಲೇ ಹಿಂಪಡೆಯಬೇಕು.8) ಎಲ್ಲಾ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಮಂಜೂರಾತಿ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಲ್ಲಿ, ಹೆಚ್ಚುವರಿ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ನೌಕರರನ್ನು ನೇಮಿಸಬೇಕು.9) 2017ರ ನಂತರ ಮಂಜೂರಾದ ವಸತಿ ಶಾಲೆ/ಕಾಲೇಜ್‌ಗಳಿಗೆ ಹಿಂದಿನಂತೆ 11 ಜನ ಸಿಬ್ಬಂದಿಯನ್ನು ಒದಗಿಸಬೇಕು. ರಾಜ್ಯದಾದ್ಯಂತ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಆಶ್ರಮ ಶಾಲೆಗಳಿಗೆ ಕೊರತೆಯಾಗಿರುವ ನಾಲ್ಕು ತಿಂಗಳ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮೆಟ್ರಿಕ್ ಪೂರ್ವ ಹಾಗೂ ವಸತಿ ಶಾಲೆ/ಕಾಲೇಜ್ ಕಾರ್ಮಿಕರಿಗೆ ವರ್ಷಪೂರ್ತಿ ವೇತನ ಪಾವತಿಸಬೇಕು.12) ರಾತ್ರಿ ಕಾವಲುಗಾರರಿಗೆ ವಾರದ ರಜೆಯನ್ನು ಮಂಜೂರು ಮಾಡಬೇಕು. ಸಫಾಯಿ ಕರ್ಮಚಾರಿಯನ್ನು ನೇಮಿಸಿಕೊಳ್ಳಬೇಕು. ಅಡುಗೆ ಸಿಬ್ಬಂಧಿಯಿಂದ ಶೌಚಾಯಲ, ಬಾತ್‌ರೂಂ ಗಳನ್ನು ಸ್ವಚ್ಛಗಳಿಸಬಾರದು. ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣ ನೀಡಿ ಕಾರ್ಮಿಕರ ವೇತನ ಪಾವತಿ ನಿಲ್ಲಿಸಬಾರದು. ಮಂಜೂರಾತಿ ಹುದ್ದೆಗಳಿಗೆ ತಕ್ಕಂತೆ ವೇತನ ಪಾವತಿಸಬೇಕು. ಎಲ್ಲಾ ಹಾಸ್ಟೆಲ್‌ಗಗಳಿಗೆ ಸಮರ್ಕವಾಗಿ ವಾರ್ಡ್ನ ರವರನ್ನು ನೇಮಿಸಬೇಕು.