ನೇಹಾ ಹಿರೇಮಠ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ತಾಳಿಕೋಟಿ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ ಹಿರೇಮಠ ಇವರ ಅಮಾನವೀಯ ಹತ್ಯೆಯನ್ನು ಖಂಡಿಸಿ ಪಟ್ಟಣದ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ  ಶ್ರೀ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. 

ಈ ಸಂದರ್ಭದಲ್ಲಿ ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಹಾಗೂ ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಮಾತನಾಡಿ ಇವತ್ತು ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ ಸೋದರಿ ನೇಹಾ ಹಿರೇಮಠ ಅವರ ಅಮಾನವೀಯ ಕೊಲೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಇಂಥ ಹೀನ ಕೃತ್ಯ ಎಸಗಿದ ದುಷ್ಟರನ್ನು ಅತ್ಯುಗ್ರ ಶಿಕ್ಷೆಗೆ ಒಳಪಡಿಸಬೇಕಾದ ಸರ್ಕಾರ ಇದೊಂದು ಸಹಜ ಘಟನೆಯಾಗಿದೆ ಎಂದು ಹೇಳುತ್ತಿರುವುದು ನಾಚಿಕೆಯ ವಿಷಯವಾಗಿದೆ ಇವರು ಅಧಿಕಾರದಲ್ಲಿ ಮುಂದುವರೆಯಲು ಲಾಯಕ್ಕಿಲ್ಲ ಇವರ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗಲು ಸಾಧ್ಯವಿಲ್ಲ ಇನ್ನು ಮುಂದೆ ಹಿಂದುಗಳು ತಮ್ಮ ರಕ್ಷಣೆಗೆ ತಾವೇ ಸಿದ್ದರಾಗಬೇಕು ಎಂದರು. ಬಿಜೆಪಿ ಜಿಲ್ಲಾಅಧ್ಯೆಕ್ಷ ಆರ್‌. ಎಸ್ ಪಾಟೀಲ (ಕೂಚಬಾಳ) ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳ ಮೇಲೆ ನಿರಂತರ ದಾಳಿ ಆಗುತ್ತಿದೆ ಈ ಮೊದಲು ಕಾಂಗ್ರೆಸ್ ಸರ್ಕಾರ ಇದ್ದಾಗ ಸುಮಾರು 20 ಹಿಂದೂ ಯುವಕರ ಕೊಲೆಯನ್ನು ಮಾಡಲಾಯಿತು ಈಗ ಮುಗ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಅಮಾನುಷವಾಗಿ ಕೊಲ್ಲಲಾಗಿದೆ ಅವರ ಇಡೀ ಕುಟುಂಬ ಸಂಕಷ್ಟದಲ್ಲಿದೆ ಅವರನ್ನು ಧೈರ್ಯ ತುಂಬಬೇಕಾದ ಮುಖ್ಯಮಂತ್ರಿಗಳು ಹಾಗೂ ಸಚಿವರು ಘಟನೆಯನ್ನು ಆಕಸ್ಮಿಕ ವೆಂದು ಹೇಳುತ್ತಿರುವುದು ನಾಚಿಕೆಯ ವಿಷಯವಾಗಿದೆ ಇದು ಅವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ ಇದೊಂದು ವ್ಯವಸ್ತಿತವಾದ ಷಡ್ಯಂತರವಾಗಿದೆ ಇದರ ಹಿಂದೆ ಇರುವಂತಹ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ನೇಹಾ ಕುಟುಂಬಕ್ಕೆ ನ್ಯಾಯಒದಗಿಸಬೇಕು. ಕೊಲೆಗೈದ ದುಷ್ಕರ್ಮಿಯನ್ನು ಗಲ್ಲಿಗೇರಿಸಬೇಕು ಎಂಬುದು ನಮ್ಮ ಅಗ್ರಹವಾಗಿದೆ ಎಂದರು. ಜಂಗಮ ಸಮಾಜದ ಗಣ್ಯರಾದ ಸದಾಶಿವಯ್ಯ ಅರಕೇರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಿಂದ ಬೃಹತ್ ಮೆರವಣಿಗೆಯೊಂದಿಗೆ ಅಂಬೇಡ್ಕರ ಸರ್ಕಲ್‌. ಅಂಬಾಭವಾನಿ ಮಂದಿರ. ಕತ್ರಿ ಬಜಾರ. ಶಿವಾಜಿ ಸರ್ಕಲ ಹಾಗೂ ಮಹಾರಾಣಾ ಪ್ರತಾಪಸಿಂಹ ಸರ್ಕಲ ಮಾರ್ಗವಾಗಿ ತಹಸಿಲ್ದಾರ ಕಾರ್ಯಾಲಯಕ್ಕೆ ತಲುಪಿ ಅಲ್ಲಿ ಉಪ ತಹಸಿಲ್ದಾರ ಶ್ರೀಮತಿ ಜೆ.ಆಯ್‌.ತುಬಕಿ ಇವರಿಗೆ ಮನವಿ ಸಲ್ಲಿಸಿದರು.ನಾವದಗಿಯ ಶ್ರೀಗಳು ಸಮ್ಮುಖವನ್ನು ವಹಿಸಿದ್ದರು.

ಈ ಸಮಯದಲ್ಲಿ ಗಣ್ಯರಾದ ರಾಜಶೇಖರ ಹಿರೇಮಠ. ಕಾಶಿಬಾಯಿ ಅಮ್ಮನವರು.ಭಂಟನೂರ ಕಾಳಿಕಮಠ ಅಮ್ಮನವರು. ಶ್ರೀಗುರು ಹಿರೇಮಠ. ಪುರಸಭೆ ಸದಸ್ಯ ಜೈ ಸಿಂಗ ಮೂಲಿಮನಿ.ರಾಘವೇಂದ್ರ ವಿಜಾಪೂರ.ಶಿವಮ್ಮಾಬಿರಾದಾರ. ಕಾಶೀನಾಥ ಅರಳಿಚಂಡಿ. ಗಜದಂಡಯ್ಯ ಹಿರೇಮಠ.ಅಶ್ವೀನ ಬೇದರಕರ.ಬೇಡ ಜಂಗಮ ಸಮಾಜ ಹಾಗೂ ಹಿಂದೂ ಪರಸಂಘಟನೆಗಳ ಪದಾಧಿಕಾರಿಗಳು ಇದ್ದರು.