ಕುಡಿಯುವ ನೀರಿಗೆ ಕ್ಲೋರಿನೇಷನ್ ಮತ್ತು ಪರಿಸರ ಸ್ವಚ್ಛತಾ ಕಾರ್ಯ ಮಾಡಿ ಗ್ರಾಮ ಪಂಚಾಯತ್
ಗದಗ 29: ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಮತ್ತು ಅಡವಿಸೋಮಾಪೂರ ಆಯುಸ್ಮಾನ್ ಆರೋಗ್ಯ ಮಂದಿರ ದಿಂದ ಅಡವಿಸೋಮಾಪೂರ ಗ್ರಾಮದಲ್ಲಿ ಮೇ 1 2025 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಇರುವ ಕಾರಣ ಗ್ರಾಮ ಮತ್ತು ತಾಂಡೆಗಳಲ್ಲಿ ಸಾಂಕ್ರಾಮಿಕ ರೋಗಗಳ ಬರದಂತೆ ಮುನ್ನೇಚ್ಚರಿಕೆಗಾಗಿ ಕುಡಿಯುವ ನೀರಿಗೆ ಕ್ಲೋರಿನೇಷನ್ ಮಾಡಿ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಬೇಕು, ಕ್ಲೋರಿನೇಷನ್ ಮಾಡಿಸದೆ ಇದ್ದರೆ ವಿಷಮಿಶ್ರೀತ ನೀರು ಇದ್ದರೆ ಜ್ವರ ಟೈಪರ್ಡ .ಮತ್ತು ವಾಂತಿಭೇಧಿ ಪ್ರಕರಣಗಳು ಕಾಣಿಸಿಕೊಳ್ಳ ಬಹುದು ಆದ್ದರಿಂದ ಕ್ಲೋರೀನೇಷನ್ ಮಾಡಿಸುವುದು ಮತ್ತು ನೀರು ಪೂರೈಕೆಯ ಪೈಪೂಲೈನ್ ದುರಸ್ಥಿ ಇದ್ದರೆ ಕೂಡಲೇ ಸರಿ ಪಡಿಸಲು ಎಸ್.ಎಸ್.ಲಿಂಗದಾಳ ಆರೋಗ್ಯ ನೀರೀಕ್ಷಣಾಧಿಕಾರಿಗಳು ಮನವಿ ಮಾಡಿರುತ್ತಾರೆ
ಸಾರ್ವಜನಿಕರಿಗೆ ಯಾವುದೇ ಸಾಂಕ್ರಾಮಿಕ ರೋಗಗಳು ಬರದಂತೆ ಮತ್ತು ಆರೋಗ್ಯ ಸಮಸ್ಯೆಗಳು ಉಲ್ಬಣ ಆಗದಂತೆ ಮುಂಜಾಗ್ರತ ಕಾರ್ಯಗಳನ್ನು ಮಾಡುವುದು ಮುಖ್ಯವಾಗಿದ್ದರಿಂದ .ಗಟರ ಸ್ವಚ್ಛತೆ ಮಡುವುದು. ಕೀಟನಾಶಕ ಪೌಢರ ಸಿಂಪಡಣೆ ಮಾಡುವುದು. ನೀರು ಸರಬರಾಜು ಪೈಪುಲೈನುಗಳು ಏನಾದರು ಲಿಕೇಜ ಇದ್ದರೆ ಸರಿಪಡಿಸುವುದ. ಓವರ ಹೆಡ್ ಟ್ಯಾಂಕ್ ಸುಣ್ಣಬಣ್ಣ ಹಚ್ಚುವುದು ಮತ್ತು ಕ್ಲೋರಿನೇಷನ್ ಮಾಡಿ ನೀರು ಸರಬುರಾಜು ಮಾಡುವುದು. ಆರೋಗ್ಯ ಇಲಾಖೆಯಿಂದ ಈಗಾಗಲೇ ನಾವು ಮನೆ ಮನೆ ಬೇಟಿ ಮಾಡಿ ಸರ್ವಾಜನಿಕರಲ್ಲಿ ಮಾಹಿತಿಯನ್ನು ನೀಡಿರುತ್ತೇವೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವನ್ನು ಮೂಡಿಸಿರುತ್ತೇವೆ. ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ನಾವು ಲಾರಾ್ವ ಸಮಿಕ್ಷೆ ಮಾಡಿ ನೀರಿನ ಪರಿಕರಗಳಲ್ಲಿ ಲಾರಾ್ವ ಉತ್ಪತ್ತಿಯಾಗದಂತೆ ನೋಡಿಕೊಳ್ಳಲು ತಿಳಿಸಿರುತ್ತೇವೆ. ನೀರಿನ ಮೂಲಗಳ ಪರೀಕ್ಷೆ ಜಿಲ್ಲಾ ಸಮೀಕ್ಷಾ ಘಟಕಕ್ಕೆ ಇಂದು ಪರೀಕ್ಷೆಗೆ ಕಳುಹಿಸಿದ್ದೇ, ಅದ್ದರಿಂಂದ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ನೀರು ಎಲ್ಲೂ ಸಂಗ್ರವಾಗಿ ನೀಲ್ಲದಂತೆ ತಾವು ಸೇವಾ ಕಾರ್ಯವನ್ನು ಮಾಡಲು ವಿನಂತಿಸಿಕೊಳ್ಳುತ್ತೇವೆ
ಅಡವಿಸೋಮಾಪೂರ ಗ್ರಾಮದ ಚಹಾ ಅಂಗಡಿ ಹೊಟಲ್‌ಗಳಲ್ಲಿ ಸ್ವಚ್ಛತೆಗೆ ಗಮನಹರಿಸಲು ಅವರಿಗೆ ನೋಟಿಸ್ ನೀಡಿ ಜಾಗೃತಿಯನ್ನು ಮೂಡಿಸುವುದು. ಪಂಚಾಯತಿಯ ವ್ಯಾಪ್ತಿಯ ಒವರ ಹೆಡ್ ಟ್ಯಾಂಕ್ ಸುಣ್ಣಬಣ್ಣ ಹಚ್ಚುವುದು ಮತ್ತು ಕ್ಲೋರಿನೇಷನ್ ಮಾಡಿ ನೀರು ಸರಬುರಾಜು ಮಾಡುವುದು. ತಗ್ಗು ಪ್ರದೇಶದಲ್ಲಿ ತಿಪ್ಪೆಗುಂಡ್ಡಿಯಲ್ಲಿ ನೀರು ನಿಲ್ಲದಂತೆ ನೋಡಿ ಕೊಳ್ಳುವುದು ಎಂದು ಎಸ್.ಎಸ್.ಲಿಂಗದಾಳ ಆರೋಗ್ಯ ನೀರೀಕ್ಷಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ