ಮಾಂಜರಿ: ಇಟ್ಟಿಗೆ ಉತ್ಪಾದನೆ ಕಾರ್ಯ ಪ್ರಾರಂಭ

ಲೋಕದರ್ಶನ ವರದಿ

ಮಾಂಜರಿ: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸುಮಾರು 70 ರಿಂದ 80 ಇಟ್ಟಿಗೆ ನಿಮರ್ಿಸುವ ಕೆಂದ್ರಗಳಿದ್ದು, ಕನರ್ಾಟಕ ಮತ್ತು ಮಹಾರಾಷ್ಟ್ರದ ಜನತೆ ಇಲ್ಲಿಂದಲೆ ಇಟ್ಟಿಗೆ ಗಳನ್ನು ಖರೀದಿಸುತ್ತಾರೆ, ಕಳೆದ ಜೂನ ತಿಂಗಳಿಂದ ಅಕ್ಟೋಬರ ತಿಂಗಳವರೆಗೆ ಬಂದ್ ಆಗಿದ್ದ ಇಟ್ಟಿಗೆ ಉತ್ಪಾದನೆ ಕಾರ್ಯ ದೀಪಾವಳಿಯ ಮೂರ್ತದ ಮೇಲೆ ಪ್ರಾರಂಭಗೊಂಡಿದ್ದು, ಕಾಮರ್ಿಕರಿಂದ ಕೃಷ್ಣಾ ನದಿಯದಂಡೆ ತುಂಬಿದಂತೆ ಕಾಣುತ್ತದೆ.  

ಇಂದು ಪ್ರತಿಯೊಂದು ವಸ್ತುವಿನ ಬೆಲೆ ದುಬಾರಿಯಾಗುತ್ತಲೇ ಇದೆ, ಇಟ್ಟಿಗೆ ನಿಮರ್ಿಸಲು ಬೇಕಾಗುವ ಬಗ್ಯಾಸ, ಭೂದಿ, ಮತ್ತು ಕಲ್ಲಿದ್ದಲು ಬೆಲೆ ಜಾಸ್ತಿಯಾಗಿರುವುದರಿಂದ, ತಯಾರಿಸಲು ಬೇಕಾಗಿರುವ ಮಣ್ಣಿನ ಕೊರತೆ, ಇಟ್ಟಿಗೆ ತಯಾರಿಕ ಕಾಮರ್ಿಕರಿಗೆ ಹೆಚ್ಚಿದ ವೇತನ, ಇಟ್ಟಿಗೆ ಸಾಗಾನೆಯ ವೆಚ್ಚ ಹಾಗೂ ಹವಾಮಾನ ವೈಫಲ್ಯದಿಂದಾಗಿ ಇಟ್ಟಿಗೆ ತಯಾರಿಸುವ ಉದ್ಯಮಿಗಳು ತೊಂದರೆಗಳನ್ನು ಅನುಭವಿಸುವ ಪ್ರಸಂಗ ಬಂದೊದಗಿದೆ.

ಚಿಕ್ಕೋಡಿ ತಾಲೂಕಿನ ಕೃಷ್ಣಾನದಿಯ ಹತ್ತಿರದ ಮಾಂಜರಿ ಗ್ರಾಮ ಇಟ್ಟಿಗೆ ಉದ್ಯಮಕ್ಕೆ ಕನರ್ಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಪ್ರಸಿದ್ದಿ ಹೊಂದಿದೆ. ಸಾವಿರಾರು ಕೂಲಿಕಾಮರ್ಿಕರು ತಮ್ಮ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಪ್ರತಿಯೊಂದು ಇಟ್ಟಿಗೆ ನಿಮರ್ಾಣ ಕೇಂದ್ರಗಳು ಸುಮಾರು 2 ಲಕ್ಷ ಇಟ್ಟಿಗೆಗಳನ್ನು ನಿಮರ್ಿಸುತ್ತಾರೆ, ಮಾಂಜರಿ ಗ್ರಾಮದಲ್ಲಿ ನವೆಂಬರ ತಿಂಗಳಿಂದ ಮೇ ತಿಂಗಳ ವರಗೆ ಸುಮಾರು 1.50 ಕೋಟಿ ಇಟ್ಟಿಗೆಗಳನ್ನು ನಿಮರ್ಿಸುತ್ತಾರೆ.

ದೀಪಾವಳಿ ಹಬ್ಬದ ದಿನದಿಂದಲೆ ಇಟ್ಟಿಗೆ ನಿಮರ್ಾಣದ ಕಾರ್ಯ ಭರದಿಂದ ಸಾಗುತ್ತಿತ್ತು, ಇಟ್ಟಿಗೆ ನಿಮರ್ಿಸಲು ಬೇಕಾಗುವ ಬಗ್ಯಾಸ, ಭೂದಿ, ಮತ್ತು ಕಲ್ಲಿದ್ದಲು ಮುಂತಾದ ವಸ್ತುಗಳನ್ನು ಶೆಖರಣೆ ಮಾಡುತ್ತಿದ್ದಾರೆ. 

ಯಡೂರ, ಕಲ್ಲೋಳ, ಅಂಕಲಿ, ಸಿದ್ದಾಪುರವಾಡಿ, ನಸಲಾಪೂರ ಮುಂತಾದ ಗ್ರಾಮಗಳಲ್ಲಿನ ಇಟ್ಟಿಗೆ ಭಟ್ಟಿಗಳು ಸಹ ಸಂಕಷ್ಟದಲ್ಲಿವೇ. ಇಂದು ಸರಕಾರದ ವಿವಿಧ ಯೋಜನೆಗಳ ಮಂಜೂರಾದ ಮನೆಗಳನ್ನು ಕಟ್ಟಲು ಫಲಾನುಭವಿಗಳು ಹೆಚ್ಚಿನ ಪ್ರಮಾಣದಲ್ಲಿ ಮುಂದಾಗುತ್ತಿದ್ದಾರೆ. ಆದರೆ ಉಸುಕಿನ ಕೊರತೆ ಮತ್ತು ಅನುದಾನ ವಿಳಂಬದಿಂದಾಗಿ ಹಿಂಜರಿಯುತ್ತಿದ್ದಾರೆ. ಕಚ್ಚಾ ವಸ್ತುಗಳ ಬೆಲೆ ದುಬಾರಿ, ವೇತನ ದುಬಾರಿ, ಸಾಗಾಣಿಕೆಯ ಹೆಚ್ಚಿದ ವೇಚ್ಚ ಮುಂತಾದವುಗಳು ಇಟ್ಟಿಗೆ ತಯಾರಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.