ಕಾಯಿಪಲ್ಲೆ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಮನಗೂಳಿ ಚಾಲನೆ
Managuli inaugurates vegetable market construction work
ಲೋಕದರ್ಶನ ವರದಿ
ಆಲಮೇಲ 15: ಅಧಿಕಾರ ಶಾಶ್ವತವಲ್ಲ ಆಧಿಕಾರದಲ್ಲಿ ಇದ್ದಾಗ ಮಾಡಿರುವ ಕೆಲಸಗಳು ಶಾಶ್ವತ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಠಣದ ಬಸ್ ನಿಲ್ದಾಣ ಸಮಿಪ ಪಪಂ ವಾಣಿಜ್ಯ ಮಳಿಗೆಗಳ ಹಿಂದೆ ಭಾನುವಾರ 2025-26 ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ 50ಲಕ್ಷ ರೂ. ವೆಚ್ಚದ ಕಾಯಿಪಲ್ಲೆ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಹಾಗೂ ರಜಪೂತ ಸಮಾಜ ಸಮುದಾಯ ಭವನಕ್ಕೆ 25 ಲಕ್ಷ ವೆಚ್ಚದ ಕಾಮಗಾರಿಗರ ಭೂಮಿ ಪೂಜಾ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿ ಕೆಲಸದಲ್ಲಿ ಯಾವದೆ ರಾಜಕೀಯ ಮಾಡದೆ ಪ್ರಾಮಾಣಿಕ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು. 59 ತಿಂಗಳ ಮಾತ್ರ ಜನರ ಸೇವೆ. 1 ತಿಂಗಳ ಚುನಾವಣೆಯಲ್ಲಿ ರಾಜಕಿಯ ಮಾಡುವದು. ಸುಳ್ಳು ಭರವಸೆಗಳನ್ನು ನೀಡುವದಿಲ್ಲ. ಪಕ್ಷಾತೀತವಾಗಿ ಜನರ ಸೇವೆ ಮಾಡುವುದು ಪಟ್ಟಣದ ಅಭಿವೃದ್ಧಿ ಇಂಡಿ ರಸ್ತೆಯಿಂದ ಹಿರೇಮಠದವರೆಗೆ 1 ಕೋಟಿ ರೂ ವೆಚ್ಚದ ಸಿಸಿ ರಸ್ತೆ ಪಟ್ಟಣದ 19 ವಾರ್ಡಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ ಹಾಗೂ ನಿಮ್ಮಲ್ಲರ ಸಹಕಾರದಿಂದ ಮತ ಕ್ಷೇತ್ರಕ್ಕೆ ಶ್ರಮಿಸೋಣ ಎಂದರು. ಪಪಂ ಅಧ್ಯಕ್ಷ ಸಾಧಿಕ ಸುಂಬಡ ಮಾಜಿ ಅಧ್ಯಕ್ಷ ಹಣಮಂತ ಹೂಗಾರ ಹಿರಿಯರಾದ ರಮೇಶ ಬಂಟನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಯಕ್ರಮದಲ್ಲಿ ಗಣ್ಯರಾದ ಗೊಲ್ಲಾಳ ಉಪ್ಪಿನ, ಯಲ್ಲಪ ಬುರುಡ, ಪ್ರಸಾಂತ ನಾಶಿ, ಶಶಿ ಗಣಿಹಾರ, ಮುನ್ನಾ ಚೌಧರಿ, ಶೌಕತ ಸುಂಬಡ, ವಿದ್ಯಾದರ ರಸ್ತಾಪೂರ ಮಠ, ಮಾಜಿ ಚೇರಮನ ಸುಭಾಸ್ ಸಾಲಕ್ಕಿ, ಬಸವರಾಜ ಹೊಸಮನಿ, ಮಲ್ಲಿಕಾರ್ಜುನ ಶ್ರೀಗಿರಿ, ದೇವಪ್ಪ ಗುಣಾರಿ, ಸಿದ್ದಲಿಂಗ ಸುಭೆದಾರ, ಪ್ರಕಾಶ ಉಪ್ಪಿನ, ಮಾಜಿ ಅಧ್ಯಕ್ಷ ಪ್ರಭು ವಾಲಿಕರ, ಪ.ಪಂ.ಸದಸ್ಯ ಅಶೋಕ ಕೋಳಾರಿ, ಮಾಜಿ ಜಿ.ಪಂ ಸದಸ್ಯ ನರಸಿಂಹ ತಿವಾರಿ, ಮುರ್ತಜ ಚೌಧರಿ, ಗುತ್ತಿಗೆದಾರ ದಾವೂದ ಬೆಣ್ಣಿ, ಶಿರೋರ ಬಾಬು ಕೊತಂಬರಿ, ಅಲ್ತಾಪ, ಸರ್. ದಾದ ಪೀರ್, ಗುರುಸಿದ್ದ ಲೋಣಿ, ಚೆಂದು ಕುರಬತಹಳ್ಳಿ, ಭಾಗ್ಯವಂತ ಆಲಮೇಲಕರ, ಮಲ್ಲಿಕಾರ್ಜುನ ಅಚಲೇರಿ, ಸೋಮು ಮೇಲಿನಮನಿ, ಗ್ರಾಮಸ್ಥರು ಇದ್ದರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 