ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ
MLA Ashok Managuli launches road construction work
ಲೋಕದರ್ಶನ ವರದಿ
ಸಿಂದಗಿ 23 : ರೇಣುಕಾ ನಗರದ ಜನತೆಯ ಬಹುದಿನಗಳ ಬೇಡಿಕೆಗಳೊಂದಾದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ರೂ 50 ಲಕ್ಷಗಳ ಕಾಮಗಾರಿಗೆ ಚಾಲನೆ ನೀಡಿಲಾಗಿದೆ ಅಲ್ಲದೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಮಸ್ಯೆ ಸೇರಿದ ಞಂತೆ ಮೂಲಭೂತ ಸೌಕರ್ಯಗಳನನು ಒದಗಿಸುವ ನಿಟ್ಟಿನಲ್ಲಿ ಮೂಂದೆ ಇನ್ನೂ ರೂ 50 ಲಕ್ಷ ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು. ನಗರದ ರೇಣುಕಾ ನಗರದ ಗೊಲ್ಲರ ಓಣಿಯಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ 50 ಲಕ್ಷಗಳ ಆಂತರಿಕ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರವಿ ಶಿರಗುಪ್ಪಿ, ಜೆಇ ಅಜರ ನಾಟೀಕಾರ, ಪುರಸಭೆ ಮಾಜಿ ಉಪಾಧ್ಯಕ್ಷರಾದ ರಾಜಣ್ಣಿ ನಾರಾಯಣಕರ, ಸಂದೀಪ ಚೌರ, ಎಂ.ಎ.ಖತೀಬ, ಕೆಡಿಪಿ ಸದಸ್ಯೆ ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ, ಸುನಂದಾ ಯಂಪೂರೆ, ಮೋಶಿನ ಬಿಳಗಿ, ಅಂಬ್ರಿಶ ಚೌಗಲೆ, ಗುತ್ತಿಗೆದಾರ ನಾರಾಯಣ ಕುಲಕಣೀರ್, ಪ್ರತಿಭಾ ಚಳ್ಳಗಿ, ಶಶಿಕಲಾ ಅಂಗಡಿ, ರಾಜು ಮೋರಟಗಿ, ರಾಮು ಮೋರಟಗಿ, ಯಂಕಪ್ಪ ಯಾದವ, ಶಾಂತೂ ರಾಣಾಗೋಳ, ಜಿಲಾನಿ ನಾಟೀಕಾರ ಸೇರಿದಂತೆ ಅನೇಕರಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 