ಸಾಹಿತ್ಯ ಮತ್ತು ಸಂಗೀತ ಜೀವನಕ್ಕೆ ಪ್ರೇರಣೆ: ಪ್ರೊ. ಶಾಂತಮೂರ್ತಿ ಬಿ. ಕುಲಕರ್ಣಿ

ಸಾಹಿತ್ಯ ಮತ್ತು ಸಂಗೀತ ಜೀವನಕ್ಕೆ ಪ್ರೇರಣೆ: ಪ್ರೊ. ಶಾಂತಮೂರ್ತಿ ಬಿ. ಕುಲಕರ್ಣಿ  Literature and Music: Inspiration for Life – Prof. Shanthamurthy B. Kulkarni

ಹೂವಿನಹಡಗಲಿ 5: ಸಾಹಿತ್ಯ ಮತ್ತು ಸಂಗೀತವು ಬದುಕಿಗೆ ಪ್ರೇರಣೆಯಾಗುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಪ್ರೊ. ಶಾಂತಮೂರ್ತಿ ಬಿ. ಕುಲಕರ್ಣಿ ಹೇಳಿದರು.  

ಪಟ್ಟಣದ ಶಿಕ್ಷಕಿ ಶ್ರೀಮತಿ ವೀಣಾ ಉಮಾಪತಿ ಅವರ ನಿವಾಸದ ಆವರಣದಲ್ಲಿ ಶುಕ್ರವಾರ ಮಲ್ಲಿಗೆ ಕಲಾ ಸಂಸ್ಥೆ ಆಯೋಜಿಸಿದ್ದ 6ನೇ ’ಬೆಳದಿಂಗಳ ಗಾನಸುಧೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕಾರ್ಯಕ್ರಮದಲ್ಲಿ ಕಲಾವಿದ ಉಮಾಪತಿ ಹಾಗೂ ಬಿ. ಮೌನೇಶ್ ಮಾತನಾಡಿದರು.  ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಶಾಂತಮೂರ್ತಿ ಬಿ. ಕುಲಕರ್ಣಿ ಅವರು ಮಲ್ಲಿಗೆ ಕಲಾ ಸಂಸ್ಥೆಗೆ 10 ಸಾವಿರ ಹಾಗೂ ಕಲಾವಿದ ರಾಟಿ ನಿಂಗಪ್ಪ ಅವರು ?5 ಸಾವಿರ ದತ್ತಿನಿಧಿ ಘೋಷಿಸಿದರು.  

ವರ್ಗಾವಣೆಯಾದ ಕಲಾಶಿಕ್ಷಕಿ ಅರ್ಚನಾ ಜೋಶಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಯುವ ಪ್ರತಿಭೆ ಬಿ. ಪ್ರದೀಪ್ ಅವರ ವಯಲಿನ್ ವಾದನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವರಾಜ್ ವಹಿಸಿದ್ದರು. ಮಲ್ಲಿಗೆ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಖಾದರ್ ಬಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಡೆಸಿದ್ದೇಶ್ವರ ಸ್ವಾಗತಿಸಿದರು. ಹಡಗಲಿ ಬಸವರಾಜ್ ಬನ್ನೇಪ್ಪ ಹಾಗೂ ಎ. ಚಂದ್ರ​‍್ಪ ಕಾರ್ಯಕ್ರಮ ನಿರೂಪಿಸಿದರು.