ತಾಯಿಯ ಪಾದ ಸ್ಪರ್ಶದಿಂದ ಬದುಕು ಪಾವನ: ನಂದನೂರ

ಮುಧೋಳ 17: ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ತಾಯಂದಿರ ಪಾತ್ರ ದೊಡ್ಡದು, ಕಣ್ಣಿಗೆ ಕಾಣುವ ಮೊದಲು ದೇವರು ತಾಯಿ ಅವರ ಪಾದ ಸ್ಪರ್ಶದಿಂದ  ನಮ್ಮೆಲ್ಲರ ಬದುಕು ಪಾವನವಾಗುತ್ತದೆ, ದೇವರು ತನ್ನ ಭಾರವನ್ನು ಕಡಿಮೆ ಮಾಡಿಕೊಳ್ಳಲು ತಾಯಿಯನ್ನು ಸೃಷ್ಟಿಸಿದ್ದಾನೆ ತಾಯಿ ಮನಸ್ಸು ಮಾಡಿದರೆ ತಮ್ಮ ಮಕ್ಕಳನ್ನು ಅದ್ಭುತ ಸಾಧಕರನ್ನಾಗಿಸಬಲ್ಲಳು ವಿದ್ಯಾರ್ಥಿಗಳು ನೀವೆಲ್ಲರೂ ಚೆನ್ನಾಗಿ ಅಭ್ಯಾಸ ಮಾಡಿ ಒಳ್ಳೆಯ ಫಲಿತಾಂಶವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾದಾಗ ಮಾತ್ರ ತಾಯಿ-ತಂದೆ ಹಾಗೂ ಗುರು ಹಿರಿಯರ ಋಣ ತೀರಿಸಿದಂತಾಗುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಉಪ ನಿರ್ದೇಶಕ ಬಿ ಕೆ ನಂದನೂರ ಹೇಳಿದರು. 

ಅವರು ಮುಧೋಳ ತಾಲೂಕಿನ ಪಿ ಎಂ ಬುದ್ನಿಯ  ಸರ್ಕಾರಿ ಪ್ರೌಢಶಾಲೆಯ ಮಾತೃ ವಂದನಾ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.  

ಎಸ್‌ಎಸ್‌ಎಲ್‌ಸಿಯ ಎಲ್ಲ ಮಕ್ಕಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಸಿಹಿ ಹಂಚಿ ಕೃತಜ್ಞರಾದರು. ತಾಯಂದಿರ ಮುಖದಲ್ಲಿ ಧನ್ಯತಾಭಾವ ಕಾಣುತ್ತಿತ್ತು.  

ಕಾರ್ಯಕ್ರಮಕ್ಕೆ ಆಗಮಿಸಿದ ಮುಧೋಳ ತಾಲೂಕಿನ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಸಂಗಮೇಶ್ ನೀಲಗುಂದ ರವರು ಇಂತಹ ಕಾರ್ಯಕ್ರಮವನ್ನು ಏರಿ​‍್ಡಸಿದ ಶಾಲೆಯ ಎಲ್ಲಾ ಗುರು ವೃಂದಕ್ಕೂ ಹಾಗೂ ಊರಿನ ಸಮಸ್ತ ಜನತೆಗೆ ತುಂಬಾ ಧನ್ಯವಾದಗಳು ಏಕೆಂದರೆ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ತಂದೆ ತಾಯಿಯ ಮಹತ್ವ ಹಾಗೂ ಗುರು ಹಿರಿಯರ ಬಗ್ಗೆ ಕಾಳಜಿ ಹಾಗೂ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವಂತಹ ಕಾರ್ಯಕ್ರಮವಾಗಿದೆ ಎಂದರು.  

ಮುಧೋಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯಾಧಿಕಾರಿಗಳಾದ ಎ ಆರ್ ಛಬ್ಬಿ ಅವರು  ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ಆಚಾರ ವಿಚಾರ ಶುದ್ಧ ನಡತೆಯನ್ನು ಕಲಿಸಿಕೊಡುತ್ತದೆ ಎಂದರು.  

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ ವೈ ಲಂಗೋಟಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗೀರೀಶ್ ರಡ್ಯಾರಟ್ಟಿ, ಶಿಕ್ಷಣ ಪ್ರೇಮಿಗಳಾದ ಸುಭಾಷ್ ಕೊರಡ್ಡಿ,ಗ್ರಾಮ ಪಂಚಾಯತ್ ಸದಸ್ಯರಾದ ರಾಜುಗೌಡ ದೊಡ್ಡಮನಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಸ್  ಭಜಂತ್ರಿ  ಶಿಕ್ಷಕರಾದ ಎಸ್ ಎಸ್ ಗೌರಗೊಂಡ, ಎಸ್ ಎಸ್ ಚಿತ್ತರಗಿ, ಅರವಿಂದ್ ಚಿಂತಾಮಣಿ, ಡಿ ಕೆ ಟಕ್ಕಳಕಿ, ಪಿ ಎಲ್ ಬಗಲಿ, ಅಸಿನಾಬಿ ಹಾಜರಿದ್ದರು ಕಾರ್ಯಕ್ರಮವನ್ನು ಎಸ್ ಎಸ್ ಗೌರಗೊಂಡ ನಿರೂಪಿಸಿ ಪಿ ಎಸ್ ಅವಟಿ ವಂದಿಸಿದರು.