ವಿಶ್ವ ಮಾನವ ಪರಿಕಲ್ಪನೆ ಎಲ್ಲೆಡೆ ಸಾಕಾರಗೊಳ್ಳಲಿ

ಹಾವೇರಿ : ಮಾನವರಲ್ಲಿ ಪರಸ್ಪರ ಧರ್ಮ, ಜಾತಿ, ದ್ವೇಷ ಹಾಗೂ ವೈಮನಸ್ಸುಗಳ ಕಂದಕ ದೂರವಾಗಿ ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ ಎಲ್ಲೆಡೆ ಸಾಕಾರಗೊಳ್ಳಲಿ ಎಂದು ಬಸವಕೇಂದ್ರ ಹೊಸಮಠದ ಬಸವಶಾಂತಲಿಂಗ ಶ್ರೀ ಹೇಳಿದರು.

       ನಗರದ ಬಸವಕೇಂದ್ರ ಹೊಸಮಠದಲ್ಲಿ ಎಸ್ಜೆಎಂ ಪ್ರಾಧಮಿಕ ಹಾಗೂ ಫ್ರೌಡಶಾಲೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸುವ ಮೂಲಕ ಅವರು ಮಾತನಾಡಿದರು.

          ಕುವೆಂಪು ಅವರು ರಚಿಸಿದ ನಾಟಕ, ಕಾದಂಬರಿ, ಗ್ರಂಥಗಳು ಹಾಗೂ ಅವರ ಆತ್ಮ ಕಥನ ಮಾನವನ ವ್ಯಕಿತ್ವ, ಅವನ ಮನಸ್ಸಿನ ಒಳಗಿನ ಸಂಘರ್ಷಗಳಿಂದ ಹೊರಬಂದು ಮಾನವ ಜಾತಿ ತಾನೊಂದೆ ವಲಂ ಎಂಬ ಸತ್ಯದ ಅರಿವಾಗಿ ಮನುಜ ಮತ ವಿಶ್ವ ಪಥದಲ್ಲಿ ನಡೆಯುವ ಹಾದಿಯನ್ನು ತೋರುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್ಜೆಎಂ ಶಾಲೆಯ ಶಿಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.