ಬ್ಯಾಡಗಿ 09 : . ಅಗತ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಾರ್ಮಿಕರಿಗೆ ಕಾನೂನಿನ ಅರಿವು ಅಗತ್ಯವಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಜೆ ಹೀರೆಕುಡಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಬ್ಯಾಡಗಿ ಹಾಗೂ ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದವರು.
ಕಾರ್ಮಿಕರು ಕಾಯಿದೆಗೆ ಅನುಗುಣವಾಗಿ ತಮಗೆ ಸಿಗಬೇಕಾದ ಕನಿಷ್ಠ ವೇತನ ಹಾಗೂ ಸೌಲಭ್ಯಗಳನ್ನು ನೀಡಲು ಸಂಬಂಧಿಸಿದ ಏಜೆನ್ಸಿ ಅಥವಾ ಮಾಲಕರ ಬಗ್ಗೆ ಇಲಾಖೆ ಅಧಿಕಾರಿಗಳು ಅದಕ್ಕೆ ಅಗತ್ಯ ಬಯಸಬೇಕು ಮತ್ತು ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳಾದ ವಿಶ್ರಾಂತಿ ಕುಠಡಿ ಶೌಚ ಗೃಹ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಏನಾದರೂ ಸಮಸ್ಯೆಗಳು ಕಾರ್ಮಿಕ ಅಧಿಕಾರಿಗಳು ಪ್ರಾಧಿಕಾರಕ್ಕೆ ತಿಳಿಸುವ ಮೂಲಕ ಕಾನೂನು ನೆರವು ಪಡೆದು ಕೊಳ್ಳುವಂತೆ ನ್ಯಾಯಾಧೀಶರು ಸಲಹೆ ನೀಡಿದರು.ಇದೇ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಒಪ್ಪತ್ತಿನ ಊಟಕ್ಕಾಗಿ ಬೇರೆ ರಾಜ್ಯಗಳಿಂದ ಉದ್ಯೋಗ ಆರಿಸಿ ಬಂದಿರುವ ಕಾರ್ಮಿಕರನ್ನು ಕಾರ್ಮಿಕ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು ರಾಜಣ್ಣ ನ್ಯಾಮತಿ. ಕೆಆರ್ ಲಮಾಣಿ ಹಾಗೂ ವಕೀಲ ಸಂಘದ ಅಧ್ಯಕ್ಷರಾದ ಆರ್ ಸಿ ಶೀಡೆನೂರ.ಉಪಾಧ್ಯಕ್ಷ ಜಿಬಿ ಯಲಗಚ್ ಕಾರ್ಯದರ್ಶಿ ಎಚ್ ಜಿ ಮುಳಗುಂದ.ಸಹಕಾರ್ಯದರ್ಶಿ ಎಮ್ ಎಸ್ ಕುಮ್ಮೂರ . ಎಂ ಜೆ ಮುಲ್ಲಾ.ಭಾರತಿ ಎಸ್ ಕುಲಕರ್ಣಿ.ಹಾಗೂ ಅನೇಕ ವಕೀಲರು ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.