ವಕೀಲ ಸಂತೋಷ ಪಾಟೀಲ ಅಪಹರಣ

Lawyer Santosh Patil kidnapped

ರಾಯಬಾಗ 09: ತಾಲೂಕಿನ ಸವಸುದ್ದಿ ಗ್ರಾಮದ ವಕೀಲ ಸಂತೋಷ ಅಶೋಕ ಪಾಟೀಲ ಇವರನ್ನು ಏ.29 ರಂದು ಮುಂ.10.30ರ ಸುಮಾರಿಗೆ ರಾಯಬಾಗ ನ್ಯಾಯಾಲಯಕ್ಕೆ ಬೈಕ್ ಮೇಲೆ ಹೋಗುವಾಗ ರಾಯಬಾಗ-ಕಂಕಣವಾಡಿ ರಸ್ತೆಯ ಶಾಹುಪಾರ್ಕ ಗ್ರಾಮ ಹದ್ದಿಯ ಬಸ್ ನಿಲ್ದಾಣ ಹತ್ತಿರ ಅಪಹರಣ ಮಾಡಿರುವದಾಗಿ ಆತನ ಪತ್ನಿ ರೇಖಾ ಪಾಟೀಲ ರಾಯಬಾಗ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಅಪಹರಣಕ್ಕೊಳಗಾದ ಸಂತೋಷ ಪಾಟೀಲ ಅವರು 33 ವಯಸ್ಸಿನವರಾಗಿದ್ದು, 5ಫೂಟ್ 6ಇಂಚ್ ಎತ್ತರವಿದ್ದು, ಸದೃಢ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ ಹೊಂದಿರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ.  

ಇವರು ಬಿಳಿ ಬಣ್ಣದ ಶರ್ಟ, ಕಪ್ಪು ಚೆಕ್ಸ್‌ ಪ್ಯಾಂಟ್ ಧರಿಸಿದ್ದು, ಇವರ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ, ರಾಯಬಾಗ ಪೊಲೀಸ ಠಾಣೆ ದೂರವಾಣಿ ಸಂಖ್ಯೆ: 08331-225333, 9480804060ಗೆ ಸಂಪರ್ಕಿಸಲು ಕೋರಲಾಗಿದೆ.