ವಕೀಲರ ಕೊಲೆ :ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ಹುನಗುಂದ 08; ಜಿಲ್ಲಾ ಸ್ಥಳ ಕಲಬುರ್ಗಿ ನಗರದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ವಕೀಲರ ದುರ್ಘಟನೆಯನ್ನು ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನ ವಕೀಲರು ಖಂಡಿಸಿ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಇಲ್ಲಿನ ನ್ಯಾಯಾಲಯದಿಂದ ಬೈಕ ರಾ​‍್ಯಲಿ ಮೂಲಕ ನಗರದ ಮಹಾಂತ ವೃತ್ತದಲ್ಲಿ ಮಾನವ ಸರಳಿ ನಿರ್ಮಿಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಿಕ್ಕಾರದ ಘೋಷಣೆಗಳನ್ನು ಕೂಗುತ್ತ ತಹಶಿದಲ್ದಾರ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ನ್ಯಾಯವಾದಿ ಎಂ.ಎಚ್‌. ಮಳ್ಳಿ ಮಾತನಾಡಿ ಸಮಾಜ ಸುಗಮ ದಾರಿಯಲ್ಲಿ ನಡೆಯಲು, ನ್ಯಾಯ ಕೇಳಲು ಬಂದ ಪ್ರತಿಯೊಬ್ಬ ವ್ಯಕ್ತಿಗೆ ಬೆನ್ನಲುಬಾಗಿ ನಿಂತು ನ್ಯಾಯ ಕೊಡಿಸುವ ವಕೀಲರನ್ನೆ ಮಾರಕಾಸ್ತ್ರಗಳಿಂದ ಬರ್ಭರ ಕೊಲೆ ಮಾಡಿದಾಗ ಜನಸಾಮಾನ್ಯರ ಪರಿಸ್ಥಿತಿ ಹೇಗೆ? ಈ ದುಷ್ಕರ್ಮಿಗಳಿಗೆ ನೀಡುವ ಶಿಕ್ಷೆಯಿಂದ ಮತ್ತೊಮ್ಮೆ ಇಂಥ ಘಟನೆ ನಡೆಯಬಾರದು. ಈಗಾಗಲೆ ವಕೀಲರ ರಕ್ಷಣೆಗೆ ಪ್ರತ್ಯೇಕ ಕಾನೂನು ನಿರ್ಮಿಸುವಂತೆ ಎಲ್ಲ ಸರ್ಕಾರಕ್ಕೂ ಸಾಕಷ್ಟು ಸಲ ಮೌಖಿಕವಾಗಿ ಮತ್ತು ಲಿಕಿತವಾಗಿ ಮನವಿಗಳನ್ನು ಸಲ್ಲಿಸಿದಾಗ್ಯೂ ವಕೀಲರ ಮೇಲೆ ಬರ್ಭರ ಹತ್ಯೆ ಪ್ರಕರಣಗಳು ಆಗಾಗ ನಡೆಯುತ್ತಲೆ ಇವೆ. ಇನ್ನುಂದು ಅವಕಾಶ ಕೊಡುವದಿಲ್ಲ. ಸಧ್ಯ ನಡೆದಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣೆಗೆ ಪ್ರತ್ಯೇಕ ಕಾನೂನು ರಚಿಸಬೇಕೆಂದು ಮಳ್ಳಿ ವಕೀಲರು ಒತ್ತಾಯಿಸಿದರು.                                 

ನ್ಯಾಯವದಿ ರಾಜಕುಮಾರ ಬಾದವಾಡಗಿ ಮಾತನಾಡಿ ಕೊಲೆಗೀಡಾದ ವಕೀಲರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಜೊತೆಗೆ ಪರಿಹಾರ ಕೊಡಿಸಬೇಕು. ದುಷ್ಕರ್ಮಿಗಳಿಗೆ ಘೋರ ಶಿಕ್ಷೆ ನೀಡಬೇಕು. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡುವದು ಕಾನೂನು, ಅದನ್ನು ಗೌರವದಿಂದ ನ್ಯಾಯಾಲದಲ್ಲಿ ಬಳಸಿ ಅನ್ಯಾಯಕ್ಕೊಳಗಾಗಿ ಉಸಿರು ಕಟ್ಟಿದವನಿಗೆ ನ್ಯಾಯ ಒದಗಿಸುವ ವಕೀಲರಿಗೆ ಸಮಾಜದಲ್ಲಿ ಬೆಲೆ ಇಲ್ಲದೆ, ಅವನನ್ನು ಬರ್ಭರ ಹತ್ಯೆ ಮಾಡುವದು ಯಾವ ನ್ಯಾಯ? ಸಧ್ಯದ ಸ್ಥಿತಿಯಲ್ಲಿ ನ್ಯಾಯ ಕೊಡುವ ಪೊಲಿಸ್ ಇಲಾಖೆಯಲ್ಲಿ ವಕೀಲರಿಗೆ ಗೌರವ ಸಿಗುತ್ತಿಲ್ಲ, ಇನ್ನು ಜನಸಾಮಾನ್ಯರ ಸ್ಥಿತಿ ದೇವರೆ ಬಲ್ಲ. ನಮ್ಮ ನ್ಯಾಯ ವೃತ್ತಿ ಬೆಳಿಗ್ಗೆಯಿಂದ ಸಂಜೆ ವರೆಗೆ ಕಕ್ಷಿದಾರರ ಸೇವೆ ಮಾಡುವದೆ ನಮ್ಮ ಕೆಲಸ, ಹೀಗಿರುವಾಗ ರಾತ್ರಿ ಸಮಯದಲ್ಲಿ ನಮ್ಮ ಜೀವಕ್ಕೆ ಹೊಣೆ ಯಾರು? ಕಾನೂನು ಮತ್ತು ಸಚಿವರು ಸರ್ಕಾರದೊಂದಿಗೆ ಚರ್ಚಿಸಿ ನಡೆದಂತ ಅಧಿವೇಶನದಲ್ಲಿ ವಕೀಲರ ರಕ್ಷಣೆಗೆ ಪ್ರತ್ಯೇಕ ಕಾನೂನು ರಚನೆಯಗಬೇಕು ಎಂದು ಬಾದವಾಡಗಿ ತಿಳಿಸಿದರು. ಪ್ರತಿ ಕಕ್ಷಿದಾರರು ದ್ವೇಷಮುಕ್ತರಾಗಿ ನಾಯ ಪಡೆಯಲು ಕೋರ್ಟಿಗೆ ಬಂದಿರುತ್ತಾರೆ. ನಾವು ನಿಷ್ಠೆಯಿಂದ ನ್ಯಾಯ ಕೊಡಿಸುವ ಪ್ರಯತ್ನದಲ್ಲಿದ್ದಾಗ ತಮ್ಮತಮ್ಮ ವಯಕ್ತಿಕ ದ್ವೇಷ ನಮ್ಮ ಕೊಲೆಯಲ್ಲಿ ಅಂತ್ಯ ಕಾಣುವದು ಯಾವ ನ್ಯಾಯ? ಪ್ರತ್ಯೇಕ ಕಾನೂನು ಜಾರಿ ಮಾಡಿ ನಮ್ಮ ರಕ್ಷಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವದೆಂದು ಅವರು ತಿಳಿಸಿದರು.  ವಕೀಲ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ, ಬಿ.ಎ. ಆವಟಿ, ಪಿ.ಬಿ. ಹುಲ್ಯಾಶ, ಎಸ್‌.ಎಂ. ಉಪ್ಪಾರ, ಎಂ.ಎ. ಸಂಗಮಕರ, ಮಾಧವ ದೇಶಪಾಂಡೆ, ವ್ಹಿ.ಆರ್‌. ಜನಾದ್ರಿ, ಈ ವೇಳೆ ಸಿ.ಬಿ.  ಸಜ್ಜನ, ಪ್ರಧೀಪ ತಾರಿವಾಳ, ಎನ್‌. ಈ ಮಡಿಕಾರ, ವ್ಹಿ.ಬಿ. ದೇಶಪಾಂಡೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.                                                                                      ಬಾಕ್ಸ್‌; ಕಲಬುರ್ಗಿಯಲ್ಲಿ ವಕೀಲರಾದ ಈರಣ್ಣ ಪಾಟೀಲ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮತ್ತೊಮ್ಮೆ ಈ ಘಟನೆ ನಡೆಯದಂತೆ ಸಂಬಂಧಪಟ್ಟ ಪೊಲಿಸ್ ಇಲಾಖೆಗೆ ಸರ್ಕಾರ ನಿರ್ದೇಶನ ನೀಡಬೇಕು.