ಕುರುಗೋಡು: ಧಾರಾಕಾರ ಮಳೆಯಿಂದ ತತ್ತರಿಸಿದ ಜನ

ಲೋಕದರ್ಶನ ವರದಿ

ಕುರುಗೋಡು 18: ಪಟ್ಟಣದ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಮಂಗಳವಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆವರೆಗೂ ದಾರಾಕಾರ ಮಳೆ ಸುರಿದಿದ್ದು ಎಲ್ಲಂದರಲ್ಲಿ ಹಳ್ಳ ಕೊಳ್ಳಗಳು ಭರ್ತಿiಗೊಂಡು ಹೊಲಗದ್ದೆಗಳಲ್ಲಿ ಹಾಗೂ ಸೇತುವೆ ಮೇಲೆ ಮಳೆ ನೀರು ಹರಿದು ವಾಹನಗಳ ಸಂಚಾರ ಸ್ವಲ್ಪವತ್ತು ಸ್ಥಗಿತಗೊಂಡಿವೆ.

ಪಟ್ಟಣ ಸಮೀಪದ ಮದಿರೆ ಹಾಗೂ ಕೋಳೂರು ಹಳ್ಳದ ಸೇತುವೆ ಮೇಲೆ ಮಳೆ ನೀರು ಹರಿದು ರೈತರ ಹೋಲಗದ್ದೆಗಳಲ್ಲಿ ನೀರು ಹೊಕ್ಕು ಆಪಾರ ನಷ್ಟ ಸಂಭವಿಸಿದೆ ಮತ್ತು ಮದಿರೆ ಗ್ರಾಮದಲ್ಲಿ ಮಳೆ ನೀರು ಬರಬಹುದು ಎಂಬ ಭಯದಲ್ಲಿ ಗ್ರಾಮಸ್ಥರು ಅತಂಕಗೊಂಡಿದ್ದರು. ಬಾದನಹಟ್ಟಿ ಮತ್ತು ಎರ್ರಂಗಳಿಗಿ ಗ್ರಾಮಗಳ ಮಧ್ಯೆ ಇರುವ ಹಳ್ಳದ ಸೇತುವೆ ಮತ್ತು ಸಿದ್ದಮ್ಮನಹಳ್ಳಿ ಹಳ್ಳದ ಸೇತುವೆ ಮೇಲೆ ಅಪಾರ ಪ್ರಮಾಣದ ಮಳೆ ನೀರು ರಭಸದಿಂದ ಹರಿದು ಬರುತ್ತಿರುವ ಹಿನ್ನಲೇ ಸ್ವಲ್ಪ ಸಮಯಗಳ ಕಾಲ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇದರಿಂದ ಬಳ್ಳಾರಿ ಮತ್ತು ಕುಡಿತಿನಿ ಪಟ್ಟಣಕ್ಕೆ ತೆರಳವು ಸಾರ್ವಜನಿಕರು ಹಾಗೂ ಕೆಲಸಕ್ಕೆ ಹೋಗುವ ಕೂಲಿಕಾರ್ಮಿಕರು ಪರದಾಡುವಂತಾಯಿತು. ಅದರಲ್ಲಿ ಕೆಲ ವಾಹನಗಳು ಭಯದಿಂದ ಸಂಚಾರಿಸುತ್ತಿರುವ ಕ್ಷಣಗಳು ಕಂಡುಬಂದವು. ಗುತ್ತಿಗೆನೂರು ಗ್ರಾಮದ ಹಳ್ಳದಲ್ಲಿ ಮಳೆ ನೀರು ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದ್ದು ಹಳ್ಳಕ್ಕೆ ಹೊಂದಿಕೊಂಡಿರುವ ಹರಿಗಳ ತುಂಬ ನೀರು ಹೆಚ್ಚಾಗಿ ಗ್ರಾಮದ ಮನೆಗಳ ಪಕ್ಕದಲ್ಲಿ ನೀರು ನುಗ್ಗಿವೆ. 

ಇನ್ನೂ ಹಳ್ಳಗಳ ಪಕ್ಕದಲ್ಲಿ ರೈತರು ನಾಟಿ ಮಾಡಿದ ಹೊಲ ಗದ್ದೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಇದಲ್ಲದೆ ನೀರಿನ ರಭಸಕ್ಕೆ ವಿದ್ಯುತ್ ಕಂಭಗಳು ವಾಲಿವೆ. ರಾತ್ರಿಯಿಂದ ಬೆಳಿಗ್ಗೆ 11 ಗಂಟೆ ತನಕ ಮಳೆ ಸುರಿದಿದ್ದರಿಂದ ಪ್ರತಿಯೊಬ್ಬರು ಹೊರಗಡೆ ಹೊಗದೆ ಮನೆಯಲ್ಲಿ ಜಾಗರಣೆ ಮಾಡಿ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಯಿತು. ಹಳ್ಳದ ತುಂಬ ಹರಿದು ಬರುವ ನೀರನ್ನು ನೋಡಲು ಜನರು ತಂಡೋಪ ತಂಡವಾಗಿ ಅಗಮಿಸಿತ್ತು.

ತಹಶೀಲ್ದಾರ್ರ ಬೇಟಿ: 

ಮಂಗಳವಾರ ರಾತ್ರಿ ಸುರಿದ ಮಳೆಗೆ ಪಟ್ಟಣ ಸಮೀಪದ ಮದಿರೆ ಗ್ರಾಮದ ಹಳ್ಳ ತುಂಬಿ ಹರಿದು ಗ್ರಾಮದೊಳಗೆ ನೀರು ಹೋಗಬಹುದೆಂದು ಮುಂಜಾಗೃತಿಯಿಂದ ತಹಶೀಲ್ದಾರ್ ಎಸ್.ಪದ್ಮಾಕುಮಾರಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.