ಕುರುಗೋಡು: ಬುದ್ಧಿಮಾಂದ್ಯ ಮಕ್ಕಳನ್ನು ತಾತ್ಸಾರದಿಂದ ಕಾಣದಿರಿ

ಲೋಕದರ್ಶನ ವರದಿ

ಕುರುಗೋಡು 12: ಬುದ್ಧಿಮಾಂದ್ಯ ಮಕ್ಕಳನ್ನು ಪಾಲಕರು ತಾತ್ಸಾರ ಮನೋಭಾವದಿಂದ ಕಾಣುತ್ತಾರೆ, ಆದರೆ ಈ ಮಕ್ಕಳನ್ನು ಪರಿವರ್ತನೆ ಮಾಡದೆ ಬಾರ ಎಂದು ನೋಡುವುದು ಸರಿಯಲ್ಲ ಎನ್ನುವದಕ್ಕೆ ಸಾಕ್ಷಿಯಾಗಿ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ, ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಲೆಯ ಕಾರ್ಯದಶರ್ಿ ಕೆಎಂ.ಉಮಾಪತಿಗೌಡ ತಿಳಿಸಿದರು.

ಪಟ್ಟಣದ ದೊಡ್ಡಬಸವೇಶ್ವರ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತೋರಣಗಲ್ಲಿನಲ್ಲಿ ನಡೆಸಿದ ಸ್ಫರ್ದಾಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಬುದ್ಧಿಮಾಂಧ್ಯ ಮಕ್ಕಳ ಬಾಳನ್ನು ಬೆಳಗಿಸುವ ಪ್ರಯತ್ನ ಪ್ರತಿಯೊಬ್ಬ ಬುದ್ಧಿಮಾಂದ್ಯ ಮಕ್ಕಳ ಪಾಲಕರ ಕರ್ತವ್ಯವಾಗಿದೆ. ಏಕೆಂದರೆ ಅದು ಅವರಿಗೆ ಶಾಪವೇನು ಅಲ್ಲ, ಅವರನ್ನು ಸಾಮಾನ್ಯ ಮಕ್ಕಳಂತೆ ಕಾಣಬೇಕು, ಇಂತಹ ಮಕ್ಕಳಿಗಾಗಿ ವಿಶೇಷ ಶಾಲೆಗಳಿವೆ ಆಗಾಗಿ ಅವರಿಗೆ ನಿರಂತರ ಚೈತನ್ಯ ಮೂಡಿಸುವಂತ ಕಾರ್ಯಚಟುವಟಿಕೆಗಳು ಶಾಲೆಯಲ್ಲಿ ಮಾಡುವದರಿಂದ ಮಕ್ಕಳು ಕ್ರೀಯಾಶೀಲರಾಗುತ್ತಾರೆ ಎಂದರು.

ಸ್ಮೈಲ್ ಸಂಸ್ಥೆಯ ಸಂಯೋಜಕ ಫಣಿರಾಜ್ ಮಾತನಾಡಿ, ತೋರಣಗಲ್ಲು ಗ್ರಾಮದ ಜಿಂದಲ್ ಸಂಸ್ಥೆಯು ತಮನ್ನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಸ್ಫಧರ್ೆಗಳಲ್ಲಿ ಕುರುಗೋಡಿನ ಶ್ರೀ ದೊಡ್ಡಬಸವೇಶ್ವರ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯ ವಿದ್ಯಾರ್ಥಿ ಗಳು ವೇಷಭೂಷಣ ಸ್ಪರ್ದೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಶ್ಲಾಘನೀಯ ಎಂದರು.

ಸ್ಪರ್ದಾಯಲ್ಲಿ ದ್ವಿತೀಯ ಸ್ಥಾನ ಪಡೆದ ಬುದ್ಧಿಮಾಂದ್ಯ ಮಕ್ಕಳಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಗೀತಾ, ಜಾನೂರು ರಾಜಸಾಬ್, ಬಸವನಗೌಡ, ಪ್ರಭುರಾಜಗೌಡ, ಯೋಗೀಶ್ ಹೂಗಾರ್, ಸುಧಾ, ಚಂದ್ರಮ್ಮ ಹಾಗೂ ವಿದ್ಯಾಥರ್ಿಗಳು ಇದ್ದರು.