ಕುರುಗೋಡು: ಪರಂಪರಾಗತ ಕನ್ನಡ ನಾಡಿನ ಉಳಿವಿಗಾಗಿ ಯುವಕರ ಪಾತ್ರ ಮುಖ್ಯ

ಲೋಕದರ್ಶನ ವರದಿ

ಕುರುಗೋಡು 12: ಪುರಾತನ ಇತಿಹಾಸ ಹೊಂದಿದ ಕನ್ನಡ ನಾಡು ನುಡಿಗೆ ಕನ್ನಡ ಜೀವಂತವಾಗಿ ಊಳಿಸಲು ಇಂದಿನ ಯುವಕರು ಶ್ರಮೀಸಬೇಕು, ಭಾಷೆಯ ಅಭಿವೃದ್ದಿಯೇ ನಾಡಿನ ಅಭಿವೃದ್ದಿ ಎಂದು ಮಾಜಿ ಸೈನಿಕ ಪಂಪಾಪತಿ ತಿಳಿಸಿದರು.

ಪಟ್ಟಣದ ದೋಡ್ಡಬಸವೇಶ್ವರ ದೇವಸ್ಥಾನದ ಅವರಣದಲ್ಲಿ ಕನರ್ಾಟಕ ರಕ್ಷಣ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೋಮವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಭಾಷೆ ಎಂದರೆ ಒಂದು ಸಮುದಾಯದ ಸಂಸ್ಕೃತಿಯ ಪ್ರತೀಕ, ಆ ಸಮುದಾಯದ ಜನರ ಅಭಿವೃದ್ದಿಯೇ ಭಾಷೆಯ ಅಭೀವೃದ್ದಿ ಎಂದರು.

ರಾಜ್ಯ ಸಂಘಟನಾ ಕಾಯಧಶರ್ಿ ಎಸ್.ಸುರೇಶ್ ಮಾತನಾಡಿ, ಅಭಿವೃದ್ದಿಯ ಪ್ರಶ್ನೆಗಳು ಯುವಕರನ್ನು ಕಾಡಬೇಕಿದೆ, ಕನ್ನಡವನ್ನು ಸಮರ್ಪಕ ಆಡಳಿತ ಭಾಷೆಯಾಗಿಸಬೇಕು ಇದರಿಂದ ಜನ ಸಮಾನ್ಯರು ಆಡಳಿತ ನೀತಿಯನ್ನು ಆರ್ಥ ಮಾಡಿಕೊಳ್ಳುಲು ಸಾಧ್ಯವಾಗುತ್ತದೆ ಹಾಗೂ ಸಕರ್ಾರದ ನಾನಾ ಅಭಿವೃದ್ದಿ ಯೋಜನೆಗಳನ್ನು ಪಡೆಯಲು ಸುಲಭವಾಗುತ್ತದೆ ಎಂದರು.

ನಂತರ ರಾಜ್ಯ ಮಟ್ಟದ ಕರಾಟೆಗೆ ಆಯ್ಕೆಗೊಂಡ ವಿದ್ಯಾಥರ್ಿಗಳಿಗೆ, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಗೊಂಡು ವಿದ್ಯಾರ್ಥಿಗಳಿಗೆ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ಹಾಗೂ ಉತ್ತಮ ಸಮಾಜ ಸೇವೆ ಸಲ್ಲಿಸಿದ ಕೆ.ವೀರಭಧ್ರಗೌಡ ರವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು. 

ಪಟ್ಟಣದ ಎಲ್ಲಾ ಶಾಲಾ ಕಾಲೇಜು ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಮಕ್ಕಳ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಸಾವಿರಾರು ಜನರ ಗಮನ ಸೆಳೆದವು.

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ರವಿ, ಸತೀಶ್, ಸುರೇಶ್, ರಮೇಶ್, ವೆಂಕಟೇಶ್, ಶೇಖರ್ ಹಾಗೂ ಇನ್ನಿತರರು ಇದ್ದರು. ಶಿಕ್ಷಕ ನೆಣಕಿ ಬಸವರಾಜ್ ಹಾಗೂ ಜಾನೂರು ರಾಜಸಾಬ್ ಕಾರ್ಯಕ್ರಮ ನಿರ್ವಹಿಸಿದರು.