ಕುರುಗೋಡು: 10 ವರ್ಷ ಹೋರಾಟದ ಫಲ ಬಡವರಿಗೆ ನಿವೇಶ

ಲೋಕದರ್ಶನ ವರದಿ

ಕುರುಗೋಡು 27: ಸಿಪಿಐಎಂ ಪಕ್ಷದ ವತಿಯಿಂದ ನಿವೇಶನ ರಹಿತ ಕುಟುಂಬದವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ 10 ವರ್ಷಗಳಿಂದ ಹೋರಾಟ ನಡೆಸಿದ ಪ್ರತಿಫಲವಾಗಿ ಸರಕಾರ 20 ಎಕರೆ ಜಮೀನನ್ನು ಪಟ್ಟಣದಲ್ಲಿ ಗುರುತಿಸಿದ್ದು, ಇದನ್ನು ಬಡವರಿಗೆ ಅನ್ಯಾಯವಾಗದಂತೆ ಹಂಚಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಪಕ್ಷದ ಜಿಲ್ಲಾಧ್ಯಕ್ಷ ವಿಎಸ್.ಶಿವಶಂಕರ್ ಶನಿವಾರ ತಿಳಿಸಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮತ್ತು ನಿವೇಶನ ರಹಿತರ ತಾಲೂಕು ಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಿನೇ ದಿನ ಭೂಮಿಗಳ ಬೆಲೆ ಏರಿಕೆ ಗಗನಕ್ಕೆ ಏರುತ್ತಿವೆ ಆಗಾಗಿ ಇಂದಿನ ನಿವೇಶನ ರಹಿತ ಬಡವರು ನಿವೇಶನ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದ್ದರಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಪಕ್ಷದ ವತಿಯಿಂದ ನಿವೇಶನ ರಹಿತ ಕುಟುಂಬದವರಿಗಾಗಿ ಆನೇಕ ಹೋರಾಟಗಳನ್ನು ಹಮ್ಮಿಕೊಂಡ ಪ್ರತಿಫಲವಾಗಿ ಸರಕಾರ ಭೂಮಿಯನ್ನು ಗುರಿತಿಸಿ, ನಿವೇಶನ ನೀಡಲು ಮುಂದಾಗಿದೆ. ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಯಾವುದೇ ತಾರತಮ್ಯಯಾಗದಂತೆ ಪ್ರತಿಯೊಬ್ಬ ನಿವೇಶನ ರಹಿತ ಕುಟುಂಬಗಳಿಗೂ ಹಂಚಿಕೆಯಾಗಬೇಕು ಇಲ್ಲದಿದ್ದಾರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ  ಆರ್ಎಸ್.ಬಸವರಾಜ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸರಕಾರ ಖಾಲಿ ನಿವೇಶನ ಹಂಚಿಕೆ ಮಾಡಿದ ನಂತರ ರಾಜೀವಗಾಂಧಿ ಕಾರ್ಪೋರೇಷನ್ ವತಿಯಿಂದ ಮನೆ ನಿಮರ್ಾಣ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದಶರ್ಿ ಗಾಳಿ ಬಸವರಾಜ, ಸದಸ್ಯರಾದ ಸೋಮಪ್ಪ, ಕೆಂಚಪ್ಪ, ಪಕ್ಕಿರಮ್ಮ, ಜಯರಾಮ, ತಿಮ್ಮಪ್ಪ, ಕೆ.ಮಂಜುನಾಥ ಹಾಗೂ ನೂರಾರು ಸಂಖ್ಯೆಯಲ್ಲಿ ನಿವೇಶನ ರಹಿತರು ಉಪಸ್ಥಿತರಿದ್ದರು. ಅಂಜಿನಯ್ಯ ಕಾರ್ಯಕ್ರಮ ನಿರ್ವಹಿಸಿದರು.