ಹಾಕಿ ಪಂದ್ಯಾವಳಿಯಲ್ಲಿ ಕಿತ್ತೂರು ಬಾಲಕಿಯರ ಅದ್ಭುತ ಸಾಧನೆ
Kittur girls' remarkable achievement in the hockey tournament
ಲೋಕದರ್ಶನ ವರದಿ
ಕಿತ್ತೂರ 15: ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರು ಜುಲೈ 6 ರಿಂದ ಜುಲೈ 11, 2026 ರವರೆಗೆ ಹರಿಯಾಣದ ಹಿಸ್ಸಾರ್ನ ವಿದ್ಯಾದೇವಿ ಜಿಂದಾಲ್ ಶಾಲೆಯಲ್ಲಿ ಆಯೋಜಿಸಲಾದ ಅಖಿಲ ಭಾರತ ಐಪಿಎಸ್ಸಿ ಹಾಕಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ 14 ವರ್ಷ, 17 ವರ್ಷ ಮತ್ತು 19 ವರ್ಷ ವಿಭಾಗಕ್ಕೆ ಒಳಪಟ್ಟ ಬಾಲಕಿಯರ ತಂಡಗಳು ಭಾಗವಹಿಸಿದ್ದವು.. ಈ ಕ್ರೀಡಾಕೂಟದಲ್ಲಿ ದೇಶದ ಸುಮಾರು 15 ಪ್ರತಿಷ್ಠಿತ ಬಾಲಕಿಯರ ಶಾಲೆಗಳು ಭಾಗವಹಿಸಿದ್ದವು. ನಮ್ಮ ಶಾಲೆಯು 17 ವರ್ಷ ವಿಭಾಗದಲ್ಲಿ ರನ್ನರ್ ಆಫ್ ಟ್ರೋಫಿಯನ್ನು ಪಡೆದುಕೊಂಡಿತು.
ತಂಡದ ನಾಯಕಿ ಕೆಡೆಟ್ ತನೀುಷಾ ಯು ತಂಡವನ್ನು ಮುನ್ನಡೆಸಿದರೆ ಕೆಡೆಟ್ ಅನ್ನಪೂರ್ಣೇಶ್ವರಿ ಪಿ. “ಬೆಸ್ಟ್ ಅಟ್ಯಾಕರ್” ಪ್ರಶಸ್ತಿ ಪಡೆದಳು. 17 ವರ್ಷ ವಿಭಾಗದಲ್ಲಿ ಕೆಡೆಟ್ ಸಂಭ್ರಮಾ ಎಸ್. ಎಂ, ಅನ್ನಪೂರ್ಣೇಶ್ವರಿ ಪಿ., ಪ್ರಜ್ಞಾ ಪಿ ಮತ್ತು ನಮ್ರತಾ ಎಚ್ ಡಿ ಇವರು ಎಸ್ಜಿ ಎಫ್ಆಯ್ (ಖಉಈಋ) ಗೆ ಆಯ್ಕೆಯಾಗಿದ್ದಾರೆ. 19 ವರ್ಷ ವಿಭಾಗದಲ್ಲಿ ಕೆಡೆಟ್ ತನೀುಷಾ ಯು ಶ್ರಾವಣಿ ಪಿ. ಕೆ, ಸಹನಾ ಕೆ ಮತ್ತು ಲಕ್ಞಣಾ ಎಸ್ಎಚ್ ಇವರು ಎಸ್ಜಿ ಎಫ್ಆಯ್ (ಖಉಈಋ) ಗೆ ಆಯ್ಕೆಯಾಗಿದ್ದಾರೆ.
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ 