ಕಿತ್ತೂರ ಚನ್ನಮ್ಮ ದೇಶದ ಹೆಮ್ಮೆಯ ಪ್ರತೀಕ: ಲಿಂಗಣ್ಣವರ

ಯಲಬುರ್ಗಾ: ದೇಶದ ಪ್ರಥಮ ಮಹಿಳಾ ಸ್ವತಂತ್ರ ಸೇನಾನಿ ಕಿತ್ತೂರ ಚನ್ನಮ್ಮನವರು ದೇಶದ ಹೆಮ್ಮೆಯ ಪ್ರತೀಕ ಎಂದು ಕರಮುಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ ಹೇಳಿದರು. ಅವರು ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಗ್ರಾಮದ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ವೀರಮಾತೆ ಕಿತ್ತೂರ ಚನ್ನಮ್ಮನವರ 244ನೇ ಜಯಂತಿ ಮತ್ತು 199ನೇ ವಿಜಯೋತ್ಸವ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.

ಮುಂದುವರೆದು ಮಾತನಾಡಿದವರು ಇಂದು ಸರಕಾರ ಎಲ್ಲ ರಂಗಗಳಲ್ಲಿಯೂ ಹಿಂದೂಳಿದಿರುವ ಕೃಷಿಯನ್ನೇ ನಂಬಿಕೊಂಡಿರುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದರು, ಈ ಸಂಧರ್ಬದಲ್ಲಿ ಗ್ರಾಮದ ಪ್ರಮುಖರಾದ ಬಸವರಾಜ ಬ. ಪಟೇದ, ರಾಮನಗೌಡ ಮಳಗೌಡ್ರ. ಶಂಕರ ದಿಂಡೂರ, ಉಪನ್ಯಾಸಕರಾದ ಎಸ್.ಬಿ. ಅಂಗಡಿ, ಶರಣಪ್ಪ ವಿ. ಕಂಠಿ. ಕೊಟ್ರೇಶ ಶ್ರೀಗಿರಿ. ಬಸವರಾಜ ಬೂದಿಹಾಳ, ಮಲ್ಲಪ್ಪ ಬೂದಿಹಾಳ. ಬಸವರಾಜ ಲಿಂಗಣ್ಣವರ, ವಿರೇಶ ಬಂಡ್ರೀ, ಚನ್ನಪ್ಪ ಬೂದಿಹಾಳ, ಶಿಕ್ಷಕ ರುದ್ರಗೌಡ ಗೋಣಿ, ವೀರನಗೌಡ ಗೋಣಿ, ಕಳಕಪ್ಪ ನಿಡಗುಂದಿ, ಗಣೇಶಪ್ಪ ಚಿಗರಿ, ದೊಡ್ಡಕಳಕಪ್ಪ ಶ್ರೀಗೀರಿ, ಬಸಪ್ಪ ಸಂಗಣ್ಣವರ, ಪ್ರೇಮಲತಾ ನಾಯಕನೂರ, ಮಹೇಶ್ವರಿ ಲಿಂಗಣ್ಣವರ, ನಾಗರತ್ನಾ ಲಿಂಗಣ್ಣವರ, ಅಕ್ಕಮಹಾದೇವಿ ಉಪಸ್ಧಿತರಿದ್ದರು.