ಮತದಾನದ ಪ್ರಕ್ರಿಯೆ ಮೇಲೆ ಸೂಕ್ಷ್ಮವಾಗಿ ನಿಗಾ ವಹಿಸಿ ಕಾಲಕಾಲಕ್ಕೆ ವರದಿ ಸಲ್ಲಿಸಿ: ಗಣೇಶ್

ಹಾವೇರಿ: ಸೂಕ್ಷ್ಮ ವೀಕ್ಷಕರಾಗಿ ನೇಮಕಗೊಂಡಿರುವ ತಾವು ಆಯೋಗದ ಕಣ್ಣು ಹಾಗೂ ಕಿವಿಯಾಗಿ ಕಾರ್ಯನಿರ್ವಹಿಸಬೇಕು. ಮತದಾನ ಪ್ರಕ್ರಿಯೆ, ಮತಗಟ್ಟೆಗಳಲ್ಲಿ ವ್ಯಕ್ತಿಗಳ ಚಲನವಲನ, ಏಜೆಂಟರ್ ನೇಮಕಾತಿ, ಮತಗಟ್ಟೆ ಅಧಿಕಾರಿಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಾಲಕಾಲಕ್ಕೆ ವರದಿ ಮಾಡಿ ಎಂದು ನಿಯೋಜಿತ ಮೈಕ್ರೋ ಅಬ್ಜರ್ವರ್ಗಳಿಗೆ  ಭಾರತ ಚುನಾವಣಾ ಆಯೋಗದ ನಿಯೋಜಿತ ಕೇಂದ್ರ ವೀಕ್ಷಕರಾದ  ಹಿರಿಯ ಐ.ಎ.ಎಸ್. ಅಧಿಕಾರಿ ಗಣೇಶ್ ಅವರು ಸಲಹೆ ನೀಡಿದರು.

   ಜಿಲ್ಲಾಡಳಿತದ  ಸಭಾಂಗಣದಲ್ಲಿ  ಸೋಮವಾರ  ರಾಣೇಬೆನ್ನೂರು ಮತ್ತು ಹಿರೇಕೆರೂರು ಮತಕ್ಷೇತ್ರಕ್ಕೆ ನೇಮಕಗೊಂಡ  ಮೈಕ್ರೋ ಅಬ್ಜರವರ್ಗಳಿಗೆ ಆಯೋಜಿಸಿದ ತರಬೇತಿ ಉದ್ದೇಶಿಸಿ ಅವರು ಮಾತನಾಡಿದರು.

   ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಅನುಸಾರ ಎರಡು ಕ್ಷೇತ್ರಗಳ ಒಂದು ನೂರು ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಕೇಂದ್ರ ಸಕರ್ಾರದ ನೌಕರರಾದ ತಮ್ಮನ್ನು ಮೈಕ್ರೋ ಅಬ್ಜರವರ್ಗಳೆಂದು ನೇಮಕ ಮಾಡಲಾಗಿದೆ.ಎಂದು ಹೇಳಿದರು.

   ಮತಗಟ್ಟೆ ಅಧಿಕಾರಿಗಳು ಆಯೋಗದ ಮಾರ್ಗಸೂಚಿಯಂತೆ ಕೈಗೊಂಡಿರುವ ಮತದಾನ ವ್ಯವಸ್ಥೆಗಳು, ಅಣುಕು ಮತದಾನ ವ್ಯವಸ್ಥೆ, ಚಾಲೇಜಿಂಗ್ ವೋಟ್ ಪ್ರಕ್ರಿಯೆ, ಏಜೆಂಟರ್ ನೇಮಕಾತಿ, ಮತದಾರರೊಂದಿಗೆ ಮತಗಟ್ಟೆ ಅಧಿಕಾರಿಗಳ ನಡವಳಿಕೆ ಸೇರಿದಂತೆ ಸುಗಮ ಮತ್ತು ನೈತಿಕ ಮತದಾನ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಸೂಕ್ಷ್ಮವಾಗಿ ಅವಲೋಕಿಸಬೇಕು. ಈ ಕುರಿತಂತೆ ಚುನಾವಣಾ ಅಧಿಕಾರಿಗಳಿಗೆ, ವೀಕ್ಷಕರಿಗೆ ಮಾಹಿತಿ ಒದಗಿಸಬೇಕು ಎಂದು ಸಲಹೆ ನೀಡಿದರು.

  ಹಿರೇಕೆರೂರು ಕ್ಷೇತ್ರದ ಕೇಂದ್ರ ಚುನಾವಣಾ ವೀಕ್ಷಕರಾದ ಹಿರಿಯ ಐ.ಎ.ಎಸ್.ಅಧಿಕಾರಿ ಚಕ್ರವತರ್ಿ ಅವರು ಮಾತನಾಡಿ, ಮತದಾನ ಪ್ರಕ್ರಿಯೆ ಕುರಿತಂತೆ ಮತಗಟ್ಟೆಯಲ್ಲಿ ಸೂಕ್ಷ್ಮ ನಿಗಾವಹಿಸಿ ಅಗತ್ಯ ಮಾಹಿತಿಯನ್ನು ಕಾಲಕಾಲಕ್ಕೆ ಆಯೋಗಕ್ಕೆ ಮಾಹಿತಿ ಒದಗಿಸಿ ಎಂದು ಸಲಹೆ ನೀಡಿದರು.

  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಸೂಕ್ಷ್ಮ ಮತಗಟ್ಟೆಗಳಿಗೆ ಕೇಂದ್ರ ಸಕರ್ಾರದ ಬ್ಯಾಂಕ್ ನೌಕರರನ್ನು ಮೈಕ್ರೋ ಅಬ್ಜರವರ್ಗಳನ್ನಾಗಿ ನೇಮಕ ಮಾಡಲಾಗಿದೆ. ನಿಸ್ಪಪಕ್ಷಪಾತವಾಗಿ ಕಾರ್ಯನಿರ್ವಹಿಸುವ ನಂಬಿಕೆಯಿಂದ ಆಯೋಗದ ತಮ್ಮನ್ನು ನೇಮಕ ಮಾಡಿದೆ.  ಆಯೋಗದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.

  ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ತರಬೇತಿಗೆ ನಿಯೋಜನೆಗೊಂಡ ಮೈಕ್ರೋ ಅಬ್ಜರವರ್ಗಳಿಗೆ ಮತದಾನ ಪ್ರಕ್ರಿಯೆ ಸುಮಗಮ ಮತದಾನಕ್ಕೆ ವಿವಿಧ ಅಧಿಕಾರಿಗಳ ಕರ್ತವ್ಯ, ಮೈಕ್ರೋ ಅಬ್ಜರ್ಗಳ ಪಾತ್ರ ಕುರಿತಂತೆ ಸವಿವರವಾಗಿ ಮಾಹಿತಿ ನೀಡಿದರು.ಶಬ್ಬೀರ  ಮಣಿಯಾರ ಅವರು ವಿವಿ ಪ್ಯಾಟ್, ಇವಿಎಂ ಕಾರ್ಯನಿರ್ವಹಣೆ ಕುರಿತಂತೆ ಪ್ರಾತ್ಯಕ್ಷಿತೆ ನೀಡಿದರು.   ಪರೀಕ್ಷಾರ್ಥ ಐ.ಎ.ಎಸ್. ಅಧಿಕಾರಿಗಳಾದ ಕುಮಾರಿ ನೇಹಾ ಜೈನ್ ಹಾಗೂ ಈಶ್ವರಕುಮಾರ ಕಾಂದೂ, ಚುನಾವಣಾ ತರಬೇತಿ ಅಧಿಕಾರಿ ಕೃಷಿ ಇಲಾಖೆ ಉಪನಿದರ್ೆಶಕ ಕರಿಯಲ್ಲಪ್ಪ ಇತರರು ಉಪಸ್ಥಿತರಿದ್ದರು