ಸಮಾಜಸೇವಾ ಭೂಷಣ ಪ್ರಶಸ್ತಿ ಪುರಸ್ಕೃತ ಕಾಯಕ ಜೀವ ಪ್ರೋ.ಪಟ್ಟಣಶೆಟ್ಟರ ಸನ್ಮಾನ
ಗದಗ 28 : ಅಥಣಿ ಮೋಟಗಿಮಠದ ಪ್ರತಿಷ್ಠಿತ ಸಮಾಜಸೇವಾ ಭೂಷಣ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಅವಿರತ ಕಾಯಕ ಜೀವ,ಶಿಕ್ಷಣ ತಜ್ಞ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅವರನ್ನು ಗದಗ ಜಿಲ್ಲಾ ವಿವಿಧ ಸಂಘಟನೆಗಳ ಪ್ರಮುಖರು ಸನ್ಮಾನಿಸಿ ಗೌರವಿಸಿದರು. ಸಂಘದ ಪ್ರಮುಖ ಮುಖಂಡರು ಪ್ರೊ,ಪಟ್ಟಣಶೆಟ್ಟರ ಅವರ ನಿವಾಸದ ಕಚೇರಿಗೆ ಸೋಮವಾರ ತೆರಳಿ ಸನ್ಮಾನಿಸಿ ಗೌರವಿಸಿದರು. ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ.ಬಳಿಗೇರ, ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಅದ ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಲಮಾಣಿ, ಜಿಲ್ಲಾ ಉಪಾಧ್ಯಕ್ಷ ಬೂದಪ್ಪ ಅಂಗಡಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಗದಗ ಶಹರ ಘಟಕದ ಅಧ್ಯಕ್ಷ ಬಿ.ಕೆ.ನಿಂಬನಗೌಡರ ಸೇರಿದಂತೆ ಪ್ರಮುಖರು ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅವರನ್ನು ಅಭಿಮಾನದಿಂದ ಶಾಲು ಹೊದಿಸಿ ಸತ್ಕರಿಸಿದರು. ಈ ವೇಳೆ ಸಂಘದ ಮುಖಂಡರು ಮಾತನಾಡಿ, ಪ್ರೊ, ಪಟ್ಟಣಶೆಟ್ಟರ ಅವರ ಸಮಾಜಮುಖಿ ಅವಿರತ ಕಾಯಕ ಅನುಪಮವಾಗಿವೆ.ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಕಾರ್ಯದರ್ಶಿಯಾಗಿ, ಶ್ರೀಮಠದ ಆಡಳಿತಾಧಿಕಾರಿಗಳಾಗಿ ಅಪರಿಮಿತ ಅಭಿವೃದ್ಧಿ ಕೆಲಸ,ಕಾರ್ಯಗಳನ್ನು ಗೈದು ಮಠ,ಸಂಸ್ಥೆ ಉನ್ನತೀಕರಿಸಿದ್ದಾರೆ. ಪ್ರೊ, ಪಟ್ಟಣಶೆಟ್ಟರ ಅವರಲ್ಲಿ ಅದ್ಬುತ ಶಕ್ತಿಯಿದೆ. ತೋಂಟದ ಲಿಂ,ಡಾ.ಸಿದ್ದಲಿಂಗ ಪೂಜ್ಯರ ಕೃಪಾಭಾವ,ಪ್ರೀತಿ,ವಿಶ್ವಾಸ ಸದಾ ಅವರ ಮೇಲಿದೆ.ಜೊತೆಗೆ ತೋಂಟದ ಡಾ. ಸಿದ್ದರಾಮ ಶ್ರೀಗಳವರ ಪ್ರೇರಣೆ, ಸ್ಪೂರ್ತಿಯೂ ಇದೆ. ತೋಂಟದ ದಿವ್ಯಾತ್ಮಾ ಪೂಜ್ಯರ ದಯೆಯಿಂದ ಪ್ರೊ, ಪಟ್ಟಣಶೆಟ್ಟರ ಸದಾಕಾಲವೂ ಲವಲವಿಕೆಯಿಂದ ಓಡಾಡಿ ಇನ್ನಷ್ಟು ಅಭಿವೃದ್ಧಿ ಶಕೆಯ ಕಾರ್ಯ ಕೈಗೊಳ್ಳಲಿ ಎಂದು ಶುಭ ಹಾರೈಸಿದರು. ಪೋಟೋ : ಅಥಣಿ ಮೋಟಗಿಮಠದವರು ಈಚೆಗೆ ಕೊಡಮಾಡಿದ ರಾಜ್ಯಮಟ್ಟದ ಸಮಾಜಸೇವಾ ಭೂಷಣ ಪ್ರಶಸ್ತಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ,ಕಾಯಕ ಜೀವ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅವರು ಪಡೆದ ಪ್ರಯುಕ್ತ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಮುಖರು ಪ್ರೊ, ಪಟ್ಟಣಶೆಟ್ಟರ ಅವರನ್ನು ಸನ್ಮಾನಿಸಿ ಗೌರವಿಸಿದರು.