ಕಂಪ್ಲಿ: ಜ.2ರಂದು ಬುಕ್ಕಸಾಗರ ಕರಿಸಿದ್ದೇಶ್ವರ ತಾತನ ರಥೋತ್ಸವ

ಲೋಕದರ್ಶನ ವರದಿ

ಕಂಪ್ಲಿ 20: ಪ್ರತಿಯೊಬ್ಬರುಪುರಾಣ ಆಲಿಸುವುದರಿಂದ ಮಾನಸಿಕ.ಮತ್ತು ಧೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ವಿಶ್ವರಾಧ್ಯ ಶಿವಾಚಾರ್ಯರು ಹೇಳಿದರು.ಸಮೀಪದ ಬುಕ್ಕಸಾಗರದ ಕರಿಸಿದ್ದೇಶ್ವರ ಮಠದಲ್ಲಿ ಬುಧವಾರ ಕರಿಸಿದ್ದೇಶ್ವರ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ,  ಮಾತನಾಡಿದರು ಪ್ರವಚಕಾರ ನಿಲೋಗಲ್ನ ಶಿವನಾಗಯ್ಯಸ್ವಾಮಿ ಸಂಗೀತ ವಾಚಕ ಲಿಂಗಸೂಗೂರಿನ ಶಾಂತನಂದ ಗವಾಯಿಗಳು, ತಬಲ ವಾದಕ ಬಳ್ಳಾರಿಯ ಸುರೇಶ್, ಪಾಠಶಾಲೆ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿಗಳು, ದಾನಶೆಟ್ಟಿ ಶಿವನಾಗಪ್ಪ, ಎಸ್.ಡಿ.ಬಸವರಾಜ, ಬುಕ್ಕಸಾಗರ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಸದ್ಭಕ್ತರು ಇದ್ದರು. 

ರಥೋತ್ಸವ: ಕರಿಸಿದ್ದೇಶ್ವರ ತಾತನವರ 7ನೇವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಡಿ.18ರಿಂದ ಜ.1 ರವರೆಗೆ ಪ್ರತಿದಿನ ಸಂಜೆ 6.30ರಿಂದ ಶ್ರೀಕರಿಸಿದ್ದೇಶ್ವರ ಪುರಾಣ ಪ್ರವಚನ ಜರುಗಲಿದೆ. ಡಿ.22ರಂದು ಶಿವದೀಕ್ಷೆ(ಅಯ್ಯಾಚಾರ)ನಡೆಯಲಿದ್ದು, ಜ.1ರಂದು ಬೆಳಿಗ್ಗೆ 7ಗಂಟೆಗೆ ಶ್ರೀಗಳ ಭಾವಚಿತ್ರ, ಪುರಾಣ ಮೆರವಣಿಗೆ, ಸಂಜೆ 6ಗಂಟೆಗೆ ಪೂಜ್ಯರ ಸಮ್ಮುಖದಲ್ಲಿ ಪುರಾಣ ಮಹಾ ಮಂಗಲಗೊಳ್ಳಲಿದೆ. ಸಂಜೆ 7ಗಂಟೆಗೆ ತಾತನ ಮುತ್ತಿನ ಪಲ್ಲಕ್ಕಿ ಉತ್ಸವ, ಭರತ ನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 

ಜ.2 ರಂದು ಬೆಳಿಗ್ಗೆ 5ಗಂಟೆಗೆ ಕರ್ತೃ  ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಿಗ್ಗೆ 10.45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುತ್ತವೆ. ಪಾಲ್ಗೊಳ್ಳುವ ವಧುವರರು ಡಿ.20 ರೊಳಗೆ ಹೆಸರು ನೋಂದಾಯಿಸಬೇಕು. ಬೆಳಿಗ್ಗೆ 11.30ಗಂಟೆಗೆ ಧಾಮರ್ಿಕಸಭೆ ಜರುಗಲಿದ್ದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯಸಾನ್ನಿಧ್ಯವಹಿಸಲಿದ್ದಾರೆ.