ಹಂತಕನಿಗೆ ಉಗ್ರ ಶಿಕ್ಷೆ ನೀಡಿ ನೇಹಾಳ ಆತ್ಮಕ್ಕೆ, ಕುಟುಂಬಕ್ಕೆ ನ್ಯಾಯ ಒದಗಿಸಲಿ: ಪಾಟೀಲ(ನಡಹಳ್ಳಿ)

ಮುದ್ದೇಬಿಹಾಳ 24: ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹೀರೇಮಠ ಅವರು ದುಶ್ಕರ್ಮಿ ಫಯಾಜ ಎನ್ನುವ ಕೆಟ್ಟ ವ್ಯಕ್ತಿಯಿಂದ ಬರ್ಬರವಾಗಿ ಕೊಲೆಯಾಗಿದ್ದು ಇಡೀಕುಲವೇ ತಲೆ ತಗ್ಗಿಸುವಂತಾಗಿದೆ. ಇದರಿಂದ ಅವರ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿನ ಮಹಿಳಾ ವರ್ಗಕ್ಕೂ ತುಂಬಲಾರದ ನಷ್ಟವಾಗಿದೆ. ಪಧವಿಧರೆಯಾಗಿ ಹೆತ್ತವರ ಕನಸು ನನಸು ಮಾಡುವ ಸಾಕಷ್ಟು ಅವಳ ಸಾಧನೆಯ ದಾರಿ ಮದ್ಯದಲ್ಲಿಯೇ ಕೇವಲ ತನ್ನ 23ನೇ ವಯಸ್ಸಿನಲ್ಲಿಯೇ ಎಲ್ಲರಿಂದ ದೂರವಾಗಿದ್ದು ನಿಜಕ್ಕೂ ನೋವನ್ನುಂಟು ಮಾಡಿದೆ. ಈ ಹಿನ್ನೇಲೆಯಲ್ಲಿ ಭಗವಂತನು ಅವಳ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಅವಳನ್ನು ಕಳೆದುಕೊಂಡು ದುಃಖದ ಮಡಿಲಲ್ಲಿರುವ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಪ್ರಾರ್ಥಿಸಿದರು.   

ಹುಬ್ಬಳ್ಳಿಯ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಫೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಎನ್ನುವ ಯುವತಿಯನ್ನು ಫಯಾಜ ಎನ್ನುವ ಆರೋಪಿ ಚಾಕುವಿನಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ರಾಘವೇಂದ್ರ ಮಂಗಲಭವನದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನೇಹಾಳ ಭಾವಪೂರ್ಣ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. 

ನೇಹಾಳ ಕೊಲೆ ಬಗ್ಗೆ ಪ್ರಸ್ತುತ ರಾಜ್ಯ ಸರಕಾರ ಎಲ್ಲ ಹಂತಗಳಲ್ಲೂ ಸಮಗ್ರ ತನಿಖೆ ನಡೆಸಿ ಆರೋಪಿ ಫಯಾಜನಿಗೆ ಜೊತೆಗೆ ಈ ಕೃತ್ಯದ ಹಿಂದೆ ಲವ್ ಜಿಹಾದದಂತಹ ಸಂಘಟನೆಗಳು ಸೇರಿದಂತೆ ಯಾರಾ​‍್ಯರ ಕುಮ್ಮಕ್ಕು ಇದೇ ಎಂಬುದನ್ನು ಪತ್ತೆ ಹಚ್ಚಿ ಉಗ್ರ ಹಾಗೂ ಕಠಿಣ ಶಿಕ್ಷೆಗೊಳಪಡಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡುವುದರ ಜೊತೆಗೆ ನೇಹಾಳ ಆತ್ಮಕ್ಕೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು. 

ಪಟ್ಟಣದ ಅಡತ ಮರ್ಚಂಟ ಅಸೋಶಿಯೇಷನ್, ಕಿರಾಣಾ ವ್ಯಾಪಾರಸ್ಥರ ಸಂಘ, ಸ್ಟೇಷನರಿ ವ್ಯಾಪಾರಸ್ಥರು, ಬುಕ್ ಸ್ಟಾಲ್, ಹಾರ್ಡವೇರ, ವ್ಯಾಪಾರಸ್ಥರು ಸೇರಿದಂತೆ ಇತರೇ ಎಲ್ಲ ವ್ಯಾಪಾರಸ್ಥರು, ನಾಗರಿಕ ಬಂಧುಗಳು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ಅರ್ಧ ದಿನ ಸ್ವಯಂಪ್ರೇರಿತವಾಗಿ ಬಂದ ಮಾಡಿ ಹೋರಾಟವನ್ನು ಯಶಸ್ವಿಗೊಳಿಸಿದರು.  

 ವಿಶ್ವ ಹಿಂದೂ ಪರಿಷತ್ ವಿಭಾಗಿಯ ಪ್ರಮುಖ ಶ್ರೀಮಂತ ದುದ್ದಗಿ,  ಕೆಂಚಪ್ಪ ಬಿರಾದಾರ, ಗಣ್ಯ ಉದ್ಯಮಿಗಳಾದ  ವಾಸುದೇವ ಶಾಸ್ತ್ರೀ, ವಿಕ್ರಮ ಓಸ್ವಾಲ್, ಪಟೇಲ ಸಮಾಜದ ಅಧ್ಯಕ್ಷ ಉಮಾರಾಮ ಪಟೇಲ್, ದಲಿತ ಮುಖಂಡ ಹರೀಷ ನಾಟಿಕಾರ,  ಡಾ, ವಿರೇಶ ಪಾಟೀಲ, ನ್ಯಾಯವಾದಿ ಎಂ ಆರ್ ಪಾಟೀಲ,  ಸಿದ್ದರಾಜ ಹೊಳಿ,  ಅಶೋಕ ಚಿನಿವಾರ, ರಾಜು ಬಳ್ಳೋಳಿ, ರಾಜಶೇಖರ ಹೊಳಿ, ಸಹನಾ ಬಡಿಗೇರ, ಪ್ರೀತಿ ಕಂಬಾರ, ಸಂಗಮ್ಮ ದೇವರಳ್ಳಿ, ಕಾವೇರಿ ಕಂಬಾರ, ಗೌರಮ್ಮ ಹುನಗುಂದ, ಎಂ ಎ ಹಡಲಗೇರಿ, ರವೀಂದ್ರ ಬಿರಾದಾರ, ಶ್ರೀಶೈಲ ದೊಡಮನಿ, ಪ್ರಭುಗೌಡ ಪಾಟೀಲ, ಬಸಲಿಂಗಪ್ಪ ರಕ್ಕಸಗಿ,  ಶಿವಯೋಗೆಪ್ಪ ರಾಂಪೂರ, ರಜಪೂತ ಸಮಾಜದ ಮದನಸಿಂಗ್ ರಾಜಸ್ಥಾನ, ಪರುಶುರಾಮ ನಾಲತವಾಡ, ಪರುಶುರಾಮ ಪವಾರ, ಲಕ್ಷ್ಮೀಚಂದ ಓಸ್ವಾಲ್, ಸಂಜು ಬಾಗೇವಾಡಿ, ಅಶೋಕ ರಾಠೋಡ, ಪುನಿತ ಹಿಪ್ಪರಗಿ, ಉದಯ ರಾಯಚೂರ, ಸೇರಿದಂತೆ ಕಿರಾಣ ಮರ್ಚಂಟ ಅಸೋಶಿಯೇಷನ್, ಸ್ಟೇಷನರಿ ವ್ಯಾಪಾರಸ್ಥರ, ಸಂಘ, ಬುಕ್ ಸ್ಟಾಲ್ ಅಸೋಸಿಯೇಷನ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕರ್ತರು ಇದ್ದರು.