ಜೆ.ಎಸ್.ಎಸ್ ಐ.ಟಿ.ಐ ವಿದ್ಯಾರ್ಥಿಗಳು ಟೋಯೋಟಾ ಕಿರ್ಲೋಸ್ಕರ ಕಂಪನಿಗೆ ಆಯ್ಕೆ
JSS ITI students selected for Toyota Kirloskar Company
ಲೋಕದರ್ಶನ ವರದಿ
ಧಾರವಾಡ 10: ಜನತಾ ಶಿಕ್ಷಣ ಸಮಿತಿಯಿಂದ ನಡೆಸಲ್ಪಡುವ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನ 40 ವಿದ್ಯಾರ್ಥಿಗಳು ಮತ್ತು ಸವದತ್ತಿ ರಸ್ತೆಯ ಜೆ.ಎಸ್.ಎಸ್ ಕೌಶಲ್ಯ ಐ.ಟಿ.ಐ ಕಾಲೇಜಿನ 25 ವಿದ್ಯಾರ್ಥಿಗಳು ಸೇರಿ ಒಟ್ಟು 65 ವಿದ್ಯಾರ್ಥಿಗಳು ಬೆಂಗಳೂರಿನ ಬಿಡದಿಯ ಬಳಿಯ ಟೋಯೋಟಾ ಕಿರ್ಲೋಸ್ಕರ ಕಂಪನಿಯ ವಾಹನ ತಯಾರಿಕಾ ಘಟಕಕ್ಕೆ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು, ಆಡಳಿತಾಧಿಕಾರಿಯಾದ ಶ್ರೀ ಅರಿಹಂತ ಪ್ರಸಾದ, ಪ್ರಾಚಾರ್ಯರುಗಳಾದ ಶ್ರೀ ಮಹಾವೀರ ಉಪಾದ್ಯೆ, ಶ್ರೀ ರಾಹುಲ ಉಪಾದ್ಯೆ ಅಭಿನಂದಿಸಿದ್ದಾರೆ.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 