ವ್ಯವಸ್ಥೆಯ ‘ಒತ್ತಡ’ಕ್ಕೆ ಬಲಿಯಾದರೇ ಪಿಡಿಒ?
Is the PDO a victim of the system's 'pressure'?
ಲೋಕದರ್ಶನ ವರದಿ
ಹಕ್ಕುಗಳ ರಕ್ಷಣೆಗಾಗಿ ಬಾಗಲಕೋಟೆಯಲ್ಲಿ ಪಿಡಿಓ ಅಧಿಕಾರಿಗಳ ಪ್ರತಿಭಟನೆ
ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿಽ ಮೀನಾಕ್ಷಿ ಸುಂದರಂ ಸಮಿತಿ ವರದಿ ಜಾರಿಗೆ ಆಗ್ರಹ
ಬಾಗಲಕೋಟೆ 05: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಅತಿಯಾದ ಕೆಲಸದ ಒತ್ತಡ, ತಿಂಗಳುಗಟ್ಟಲೆ ವೇತನ ವಿಳಂಬ ಹಾಗೂ ಮೇಲಧಿಕಾರಿಗಳ ಕಿರುಕುಳದಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಿಡಿಒ ಮುಕ್ತಂಹುಸೇನ ಕರಡಿಗುಡ್ಡ ಅವರ ಸಾವು ಇದು ’ಸಹಜ ಸಾವಲ್ಲ, ವ್ಯವಸ್ಥಿತ ಕೊಲೆ’ ಎಂದು ಅಧಿಕಾರಿಗಳ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಜಿಲ್ಲೆಯ ನೂರಾರು ಪಿಡಿಒಗಳು, ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಬಾಗಲಕೋಟೆ ಘಟಕದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾ ಪಂಚಾಯತ್ ಸಿಇಒ ಅನೂಪಸ್ಥಿತಿಯಲ್ಲಿ ಎನ್.ವಾಯ್ ಬಸರಗಿಡದ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು.
ದುರಂತಕ್ಕೆ ಕನ್ನಡಿ ಹಿಡಿದ ಗದಗ ಘಟನೆ
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕೊತಬಾಳ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದ ಮುಕ್ತಂಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆಗೆ ನಿರಂತರ ಸಭೆಗಳು, ಗುರಿ ಬೆನ್ನಟ್ಟುವ ಒತ್ತಡ ಹಾಗೂ ಕಳೆದ 8-9 ತಿಂಗಳಿಂದ ವೇತನ ಸಿಗದೇ ಕರಡಿಗುಡ್ಡ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿತ್ತೆಂದರೆ, ಅವರ ಪತ್ನಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುವಂತಾಗಿತ್ತು. ಇಡೀ ಇಲಾಖೆಯ ಆಡಳಿತಾತ್ಮಕ ವಿಳಂಬ ಧೋರಣೆಗೆ ಸಿಕ್ಕ ಬಲಿ ಎಂದು ಪ್ರತಿಭಟನಾಕಾರರು ದೂರಿದ್ದಾರೆ
ಮೇಲ್ಮಟ್ಟದ ಕಚೇರಿಗಳಲ್ಲಿ ‘ಬೇರುಬಿಟ್ಟಅಧಿಕಾರಿಗಳು
ಆಯುಕ್ತಾಲಯ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಕನಿಷ್ಠ ಸೇವಾ ಅವಧಿಯನ್ನು ನಿಗದಿಪಡಿಸಿ. ಕಡ್ಡಾಯ ವರ್ಗಾವಣೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪ್ರಸ್ತುತ ಈ ಮೇಲಿನ ಕಚೇರಿಗಳಲ್ಲಿ ಹಲವು ಸಿಬ್ಬಂದಿಗಳು 5 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಬೇರುಬಿಟ್ಟಿದ್ದಾರೆ. ಇಂತಹವರಿಂದ ಕೆಳಹಂತದ ಪಿಡಿಒಗಳಿಗೆ ವಿನಾಕಾರಣ ಕಿರುಕುಳ ನೀಡುವುದು ಹಾಗೂ ಕಡತಗಳನ್ನು ವಿಳಂಬ ಮಾಡುವ ಕೆಲಸವಾಗುತ್ತಿದೆ" ಎಂದು ಸಂಘದ ಪದಾಧಿಕಾರಿಗಳು ದೂರಿದರು.
ಅಧಿಕಾರಿಗಳ ಪ್ರಮುಖ ಬೇಡಿಕೆಗಳು:
ಪಿಡಿಒಗಳ ಮೇಲೆ ಹೇರಲಾಗುತ್ತಿರುವ ಅನಗತ್ಯ ಮಾನಸಿಕ ಒತ್ತಡವನ್ನು ತಕ್ಷಣ ನಿಲ್ಲಿಸಬೇಕು. ಮೃತಪಟ್ಟ ಸಹೋದ್ಯೋಗಿಯ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಆರ್ಥಿಕ ಪರಿಹಾರ ನೀಡಬೇಕು. ಆಡಳಿತಾತ್ಮಕ ವಿಳಂಬ ನೀತಿ ಕೈಬಿಟ್ಟು, ಅಧಿಕಾರಿಗಳು ಆತ್ಮಗೌರವದಿಂದ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಿಸಬೇಕು. ದೀರ್ಘಕಾಲದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು.
ಇದೇ ವೇಳೆ ಸಂಘಟನಾ ಕಾರ್ಯಾದರ್ಶಿ ರಂಜಿತಾ ಹತ್ತಿ, ಜಿಲ್ಲಾ ಕಾರ್ಯದರ್ಶಿ ಕವಿತಾ ಬಾರಕೋಲ, ಸಾಂಸಕೃತಿಕ ಕಾರ್ಯದರ್ಶಿ ವಿಮಲಾ ಕಲ್ಮನಿ, ರಾಜ್ಯ ಪರಿಷತ್ ಸದಸ್ಯ ಶಿವಾನಂದ ನರಸನ್ನವರ, ಕಜಾಂಚಿ ಖುಬಾಸಿಂಗ ಜಾಧವ, ಸೇರಿದಂತೆ ಜಿಲ್ಲೆಯ ಮತ್ತು ತಾಲೂಕ ಪದಾಧಿಕಾರಿಗಳು, ನೂರಾರು ಪಿಡಿಒಗಳು ಉಪಸ್ಥಿತರಿದ್ದರು
"ನಮ್ಮ ಸಹೋದ್ಯೋಗಿಯ ಅಕಾಲಿಕ ನಿಧನ ನಮಗೆ ಕೇವಲ ನೋವು ತಂದಿಲ್ಲ, ಆತಂಕವನ್ನೂ ಸೃಷ್ಟಿಸಿದೆ. ಇದು ಕೇವಲ ಸಾವು ಅಲ್ಲ, ವ್ಯವಸ್ಥೆಯ ಒತ್ತಡಕ್ಕೆ ಸಿಲುಕಿದ ಬಲಿ. ನಾವೀಗ ಕೇವಲ ಕಣ್ಣೀರು ಹಾಕುತ್ತಾ ಕೂರುವ ಸ್ಥಿತಿಯಲ್ಲಿಲ್ಲ. ನಮ್ಮ ಆತ್ಮ ಗೌರವ ಮತ್ತು ಹಕ್ಕುಗಳ ರಕ್ಷಣೆಗಾಗಿ ಹೋರಾಟ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ನೀಡಬೇಕು.
ಸಿದ್ಧಾರ್ಥ ಗೊಠೆ,
ಜಿಲ್ಲಾ ಅಧ್ಯಕ್ಷರು, ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ, ಬಾಗಲಕೋಟೆ.
ಕೋಟ್......
ಪಿಡಿಒಗಳು ಸರ್ಕಾರದ ಯೋಜನೆಗಳನ್ನು ಹಳ್ಳಿಗೆ ತಲುಪಿಸುವ ಕೊಂಡಿಗಳು. ಆದರೆ ಇಂದು ಅವರು ದಬ್ಬಾಳಿಕೆ ಮತ್ತು ಮಾನಸಿಕ ಯಾತನೆಗೆ ಸಿಲುಕಿದ್ದಾರೆ. ವಿಚಾರಣೆ ಹೆಸರಿನಲ್ಲಿ ತಿಂಗಳುಗಟ್ಟಲೆ ವೇತನ ತಡೆಹಿಡಿದು ಅಧಿಕಾರಿಗಳನ್ನು ಉಪವಾಸ ಕೆಡವುವ ವ್ಯವಸ್ಥೆ ಬದಲಾಗಬೇಕು ಮತ್ತು ಕೂಡಲೇ ಮೀನಾಕ್ಷಿ ಸುಂದರಂ ಸಮಿತಿಯಿಂದ ವರದಿಯನ್ನು ಪೇದು ಅದರಲ್ಲಿನ ಶಿಪಾರಸ್ಸುಗಳನ್ನು ಜಾರೀಗೀಳಿಸುವ ಮೂಲಕ ನೌಕರರ ಸಂರಕ್ಷತೆ ಮತ್ತು ಹಿತ ರಕ್ಷಣೆ ಕೈಗೋಳ್ಳಬೇಕು.
ಸುರೇಶ ನಾಯ್ಕ,
ಪ್ರಧಾನ ಕಾರ್ಯದರ್ಶಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘ ಬಾಗಲಕೋಟೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 