ಸಂಸತ್ ಭವನದ ಮೂಲಕ ಬಸವಣ್ಣನವರ ಅನುಭವ ಮಂಟಪ ಪರಿಚಯ : ಕರಡಿ ಸಂಗಣ್ಣ

ಸಿರುಗುಪ್ಪ 15- ವಿಶ್ವದ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ಅನುಭವ ಮಂಟಪದ ಮೂಲಕ ಪರಿಚಯಿಸಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನವ ದೆಹಲಿಯ ನೂತನ ಸಂಸತ್ ಭವನದಲ್ಲಿ ಅನುಭವ ಮಂಟಪವನ್ನು ಪರಿಚಯಿಸುವ ಮೂಲಕ ನಮ್ಮ ಶರಣ ತತ್ವಗಳನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸತ್ ಕರಡಿ ಸಂಗಣ್ಣ ಅವರು ಹೇಳಿದರು.

ನಗರದ ಬಳ್ಳಾರಿ ರಸ್ತೆಯಲ್ಲಿರುವ ಎ ವಿ ಎಸ್ ಕಲ್ಯಾಣ ಮಂಟಪದಲ್ಲಿ 17ನೇ ರಾಜ್ಯ ಮಟ್ಟದ ಶರಣ ತತ್ವ ಕಮ್ಮಟ ಅಕ್ಟೋಬರ್ 12ರಿಂದ 15ರ ಕಾರ್ಯಕ್ರಮದಲ್ಲಿ  ಬಸವಣ್ಣನವರ ಮೂರ್ತಿಗೆ ಪುಷ್ಪ ಸಮರ್ಪಿಸುವ ಮೂಲಕ ಬಸವ ಬಳಗ ವೀರಶೈವ ಸಂಘಟನೆಗಳಿಂದ ಆಯೋಜಿಸಿದ ಸಮಾರಂಭದಲ್ಲಿ ಅವರು ಮಾತನಾಡುತ್ತಾ ನಮ್ಮ ಶರಣರು ತಿಳಿಸಿದಂತೆ ಕಾಯಕ ಇಲ್ಲದ ವ್ಯಕ್ತಿ ಪ್ರಸಾದಕ್ಕೆ ಅರ್ಹನಲ್ಲ ಶರಣರು ತಮ್ಮ ವಚನಗಳ ಮೂಲಕ ಶರಣರು ಅನುಭವ ಮಂಟಪದಲ್ಲಿ ತಮ್ಮ ಕಾಯಕದಲ್ಲಿ ಕಂಡುಕೊಂಡ ಅನುಭವಗಳನ್ನು ಚರ್ಚಿಸಿ ಕಾಯಕ ದಾಸೋಹ ಜಂಗಮ ಪರಿ ಕಲ್ಪನೆಯನ್ನು ನಮ್ಮೆಲ್ಲರಿಗೂ ನೀಡಿದ್ದಾರೆ. ಸರ್ವರಿಗೂ ಸಮಾಜದಲ್ಲಿ ಸಮಾನತೆ ಪರಿಶುದ್ಧತೆ ಕಾಯಕ ಅಭಿವೃದ್ಧಿಗೆ ಬಹು ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ ಎಂದರು.

ಶಾಸಕ ಬಿ ಎಂ ನಾಗರಾಜ್, ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ, ಪ್ರಮುಖರಾದ ಎನ್ ಜಿ ಬಸವರಾಜಪ್ಪ, ಉಂತಗಲ್ಲು ಅಮರೇಶಪ್ಪ, ಎನ್ ಎಂ ಶಿವಪ್ರಕಾಶ್, ಅಬ್ದುಲ್ ನಬಿ,ಬಿ ಮುತ್ಯಾಲಯ್ಯ ಶೆಟ್ಟಿ, ಮಹಾಸ್ವಾಮಿಗಳು ಭಕ್ತರು ಸಾವಿರಾರು ಜನ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಶರಣರ ವಿಚಾರಗೋಷ್ಠಿ ವಿಚಾರ ಸಂಕಿರಣ  ಸಂವಾದ ನಡೆದವು.