ಶಿಗ್ಗಾವಿ 06 : ಯುವ ಕಲಾವಿದರಿಗೆ ಬಯಲಾಟವನ್ನು ಪರಿಚಯಿಸಬೇಕು ಹಾಗೂ ಕಲಾವಿದರು ಸರಕಾರದ ಸೌಲಭ್ಯ ಪಡೆಯಲು ದಾಖಲೆಗಳನ್ನು ಹೇಗೆ ಸಿದ್ದಪಡಿಸಬೇಕು ಎಂದು ಬಯಲಾಟ ಅಕಾಡಮಿ ಸದಸ್ಯ ಬಿ ಪರಶುರಾಮ್ ಹೇಳಿದರು.
ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ವಿರಕ್ತಮಠದ ಪೂಜ್ಯ ಮ ನಿ ಪ್ರ ಸಂಗನಬಸವ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಬಯಲಾಟ ಕಲಾವಿದರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕಲಾವಿದರು ಸ್ಥಾಪನೆ ಮಾಡಿರುವ ಸಂಘ ಸಂಸ್ಥೆಗಳು ಸರ್ಕಾರದಿಂದ ಅಥವಾ ಅಕಾಡಮಿಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದ ಅನುಧಾನ ಪಡೆಯಲು ಸಂಘ ಸಂಸ್ಥೆಯ ಧಾಖಲೆಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಕ್ಕೀರೇಶ ಕೊಂಡಾಯಿ ಮಾತನಾಡಿ ಈ ಭಾಗದ ಬಯಲಾಠ ಉಳಿಯಬೇಕಾದರೆ ಆಯಾ ಜಿಲ್ಲೆಯ ಬಯಲಾಟ ಪ್ರಕಾರಗಳನ್ನು ಹೇಗೆ ಅಭಿವೃದ್ದಿಪಡಿಸಬೇಕು ಎನ್ನುವ ಕುರಿತು ಚರ್ಚೆಯಾಗಬೇಕು ಹಾಗೂ ಪ್ರತಿ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಯುವಕರಿಗೆ ಬಯಲಾಟ ತರಬೇತಿ ನೀಡುವ ಮೂಲಕ ಮುಂದಿನ ಪೀಳಿಗೆಗೆ ಕಲೆಯ ಪರಿಚಯ ಆಗಬೇಕು ಅಂದಾಗ ಬಯಲಾಟ ಉಳಿಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ರಮೇಶ ಸಾತಣ್ಣವರ, ಗಂಗಾಧರ ಬಾಣದ, ಚಂದ್ರಶೇಖರಯ್ಯ ಗುರಯ್ಯನವರ, ಶಿವನಗೌಡ ಪಾಟೀಲ, ಫಕ್ಕೀರೇಶ ಬಿಶೆಟ್ಟಿ, ಚಂದ್ರಶೇಖರ್ ಕಮಡೊಳ್ಳಿ, ಚನ್ನಬಸಪ್ಪ ಬೆಂಡಿಗೇರಿ, ಶಿವಪ್ಪ ಬಿಷ್ಟಣ್ಣವರ, ಅಶೋಕ ಕುರುಬರ, ನೀಲಪ್ಪ ಸುಣಗಾರ ಹಾಗೂ ಇತರರು ಇದ್ದರು