ರಾಣೇಬೆನ್ನೂರ 01 : ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ತಾಲೂಕಿನ ಅರೇಮಲ್ಲಾಪೂರದ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದಲ್ಲಿಮುಂದಿನ ವರ್ಷ ಮಾರ್ಚ್ ಒಳಗೆ 5 ಅಡಿ ಎತ್ತರದ ನಿಂತ ಮಹಾಗಣಪತಿ ಹಾಗೂ 4 ಅಡಿ ಎತ್ತರದ ಸರ್ ಮೂರ್ತಿ ಮತ್ತು ಕೇರಳದ ಭದ್ರಕಾಳಿ(ಭಗವತಿ) ಮೂರ್ತಿ ಸೇರಿದಂತೆ ಒಟ್ಟು 108 ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದೆಂದುಶ್ರೀಮಠದ ಪೀಠಾಧಿಪತಿ ಡಾ. ಪ್ರಣವಾನಂದರಾಮ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಅರೇಮಲ್ಲಾಫುರ ಗ್ರಾಮದ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದಲ್ಲಿ ಆಯೋಜಿಸಲಾಗಿದ್ದ 108 ಮೂರ್ತಿಗಳ ಸಂಕಲ್ಪ ಪ್ರತಿಷ್ಠಾಪನೆಯ ಮೊದಲ ಹಂತವಾಗಿ ಶ್ರೀ ಶರಣಬಸವೇಶ್ವರ ದೇವರ ಗರ್ಭಗುಡಿ ಸೇರಿದಂತೆ ಶ್ರೀ ಶರಣಬಸವೇಶ್ವರ 36 ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಮಹಾ ಪ್ರತ್ಯಂಗಿರದೇವಿ ಯಾಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸಂಕಲ್ಪದ 108 ಮೂರ್ತಿಗಳ ಪೈಕಿ ಉಳಿದ 72 ಮೂರ್ತಿಗಳನ್ನು ವರ್ಷದ ಒಳಗೆ. ಗರ್ಭಗುಡಿ ಹಾಗೂ ಹೊರಗೆ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಇದು ರಾಜ್ಯದಲ್ಲಿಯೇ ವಿನೂತನ ಹಾಗೂ ಪ್ರಥಮವಾಗಿ ಎಂದು ಹೇಳಿದರು. ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪ್ರತ್ಯಂಗಿರಾದೇವಿ ಹೋಮವೊಂದೇ ಮಾರ್ಗದರ್ಶನ ಹಾಗೊ ಪರಿಹಾರವಾಗಿದೆ. ಈ ಹೋಮವನ್ನು ‘ದೇವಿ ಉಪಾಸಕರು, ಆರಾಧಕರು, ಮಾರ್ಗದರ್ಶಕರು ಮಾತ್ರ ನಡೆಸಬಹುದು ಎಂದರು.
ಈ ಹೋಮ ಮಾಡುವುದರಿಂದ ಮಾನಸಿಕ ಶಾಂತಿ, ಸ್ಥಿರತೆ ಸಿಗುವುದು. ಮನುಷ್ಯನಲ್ಲಿ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ನಮಗೆ ತೊಂದರೆಯನ್ನು ನೀಡುವುದಿಲ್ಲ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡುತ್ತೇವೋ ಆ ಸ್ಥಳದಲ್ಲಿ ಎಂದಿಗೂ ಕೂಡ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳು ನಮ್ಮಿಂದ ದೂರವಾಗುವುದು ಮಾತ್ರವಲ್ಲ. ನಮ್ಮೆಲ್ಲಾ ದುರಾದೃಷ್ಟಗಳು ದೂರವಾಗುತ್ತದೆ. ಎಂದರು. ಕೆಟ್ಟ ಕಣ್ಣಿನ ದೃಷ್ಟಿ ನಾಶವಾಗುವುದು. ಅಪಘಾತಗಳನ್ನು ಮತ್ತು ಕಾಯಿಲೆಗಳನ್ನು ತಡೆಗಟ್ಟಲು, ಉತ್ತಮ ಆರೋಗ್ಯವನ್ನು, ಸಂಪತ್ತನ್ನು, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಲು ಈ ಹೋಮವನ್ನು ಮಾಡುತ್ತಾರೆ ಎಂದು ಅವರು ವಿವರಿಸಿದರು.
ನೆಗಳೂರ ಸಂಸ್ಥಾನಮಠದ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಐರಣಿಯ ಪ್ರಭುಲಿಂಗ ಸ್ವಾಮಿಗಳು, ಚಿತ್ರದುರ್ಗದ ಕುಂಬಾರ ಗೊಂಡಯ್ಯ ಸ್ವಾಮಿಗಳು, ಶ್ರೀಮಠದ ಉತ್ತರಾಧಿಕಾರಿ ಶರಣಬಸವ ವೇದ ಪ್ರಕಾಶರವರು ನೇತೃತ್ವವನ್ನು ವಹಿಸಿದ್ದರು. ಮಾಧ್ವ ಶ್ರೀಮೀರಾ,ಎಲ್ಲಪ್ಪ ಸುರ್ವೆ, ಮಂಜುನಾಥ ಹಲವಾಗಲ, ಗಾಳೆಪ್ಪ ಮರಿಯಮ್ಮನವರ, ಬಸವಂತಪ್ಪ ಕೊಪ್ಪದ, ನಾಗರಾಜ ನಾಗರಜ್ಜಿ, ನಿಂಗಪ್ಪ ಸೇರಿದಂತೆ ನಾಡಿನ ಅನೇಕ ಹರ,ಗುರು, ಚರಮೂರ್ತಿಗಳು ಪಾಲ್ಗೊಂಡಿದ್ದರು.ಊ1-ಖಓಖ06-ಓಇಘಖ. ಂಓಆ. ಕಊಓಖಿಓ.