ಇನ್ನರ್ ವೀಲ್ ಕ್ಲಬ್ಬಿನ ಕಟ್ಟಡ ಉದ್ಘಾಟನೆ : ಹೇಮಲತಾ
ಕೊಪ್ಪಳ 01: ನಗರದಲ್ಲಿರುವ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಚೇರಿಯ ಮೊದಲನೇ ಮಹಡಿ ಕಟ್ಟಡದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ(ಶಾಸಕಿ) ಹೇಮಲತಾ ನಾಯಕ್ ರವರು ನೆರವೇರಿಸಿದರು, ನಂತರ ಸರಳ ಸಾಂಕೇತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ತನ್ನ ಬೆಳವಣಿಗೆ ಏಕತೆ ಹಾಗೂ ಸಮಾಜ ಸೇವೆಯ ಪರಿಪೂರ್ಣ ಸಂಕೇತವಾಗಿರುವ ನವ ನಿರ್ಮಿತ ಮೊದಲನೇ ಮಹಡಿಯ ಕಚೇರಿಯ ಕಟ್ಟಡ ಇಂದು ಲೋಕಾರೆ್ಣ ಗೊಂಡಿರೋದು ನನಗೆ ಸಂತಸ ಉಂಟು ಮಾಡಿದೆ ಎಂದರು, ಮುಂದುವರೆದು ಮಾತನಾಡಿ ಇದೊಂದು ಐತಿಹಾಸಿಕ ಕ್ಷಣ ಅನುಭವಿಸಿದಂತಾಗಿದೆ ಎಂದ ಅವರು ಕ್ಲಬ್ಬಿನ ಸಮಾಜಮುಖಿ ಸೇವೆಗಳಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಕ್ಲಬ್ಬಿನ ಸೇವಾ ಪಯಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ,ಈ ನವೀನ ಕಚೇರಿ ಯಲ್ಲಿ ಪದಾಧಿಕಾರಿಗಳು ಸೇರಿಕೊಂಡು ಸಮಾಜಕ್ಕೆಎಲ್ಲಾ ಸೇವಾ ಯೋಜನೆ ಕಾರ್ಯಗಳನ್ನು ರೂಪಿಸಿ ಯಶಸ್ವಿಯಾಗಿ ನೈಜಿಕರಿಸಲು ಒಂದು ಶಕ್ತಿ ಕೇಂದ್ರವಾಗಿ ಸೇವೆ ಸಲ್ಲಿಸಲಿಕ್ಕೆ ಈ ಕಟ್ಟಡ ಪ್ರೇರಣೆ ಸಿಗುವಂತಾಗಲಿ, ಕ್ಲಬ್ಬಿನ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಸಂತೋಷ ಮತ್ತು ಹೆಮ್ಮೆ ಪಟ್ಟು ಕೆಲಸ ನಿರ್ವಹಿಸಲು ನವ ಚೈತನ್ಯ ಅವರಲ್ಲಿ ಉಂಟಾಗಲಿ ಎಂದು ಹೇಳಿದವರು ,ಬಲವಾದ ನಾಯಕತ್ವ ಮತ್ತು ಒಗ್ಗಟ್ಟಿನ ಸಂಕೇತ ವಾಗಿ ಈ ಅಭಿವೃದ್ಧಿಪರ ಕಾರ್ಯಗಳು ಇಂದು ಲೋಕಾರೆ್ಣಗೊಳ್ಳುತ್ತಿರುವುದು ಎಲ್ಲರಿಗೂ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಶಾಸಕಿ ಹೇಮಲತಾ ನಾಯಕರವರು ಹೆಮ್ಮೆಯ ಮಾತುಗಳನ್ನಾಡಿ ಕ್ಲಬ್ಬಿನ ಪದಾಧಿಕಾರಿಗಳಲ್ಲಿ ಇನ್ನಷ್ಟು ಪ್ರೋತ್ಸಾಹ ತುಂಬಿದರು, ಸಮಾರಂಭದ ಅಧ್ಯಕ್ಷತೆ ವಹಿಸಿದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಮಾತನಾಡಿ ನಮ್ಮ ಕ್ಲಬ್ ಗೆ ಇದು ಒಂದು ಹೆಮ್ಮೆಯ ಸಂದರ್ಭ ಈ ದಿನವನ್ನು ಇತಿಹಾಸದಲ್ಲಿ ಒಂದು ಅಮೂಲ್ಯ ಕ್ಷಣವಾಗಿ ನೆನಪಿಸಿ ಕೊಳ್ಳುವಂತಾಗಿದೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಕ್ಲಬ್ ಫಣ ತೊಟ್ಟು ಶ್ರಮಿಸುತ್ತಿದೆ ಇಂದಿನ ಈ ಕಾರ್ಯಕ್ರಮ ನಮ್ಮೆಲ್ಲರಿಗೆ ಮತ್ತಷ್ಟು ಬಲ ಪಡಿಸಿದೆ ಎಂದು ಹೇಳಿದರು ಇದೇ ವೇಳೆ ಹೇಮಲತಾ ನಾಯಕ ರವರಿಗೆ ಕ್ಲಬ್ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ ವಿಲ್ ಕ್ಲಬ್ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್, ಖಜಾಂಚಿ ಆಶಾ ಕವಲೂರು ,ಮಧು ನಿಲೋಗಲ್, ಸಂಪಾದಕಿ ನಾಗವೇಣಿ, ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಸದಸ್ಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು