ಆಧುನಿಕ ಚಿಕಿತ್ಸೆಯಿಂದ ಬಂಜೆತನ ನಿವಾರಣೆ ಸಾಧ್ಯ: ಡಾ. ಸಚೀನ ಸುಗಣ್ಣವರ

Infertility can be cured with modern treatment: Dr. Sachina Suganavara

ಕಾಗವಾಡ 23: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಬಂಜೆತನದ ಸಮಸ್ಯೆಗೆ ಚಿಂತಿಸಬೇಕಾಗಿಲ್ಲ. ಆಧುನಿಕ ಪದ್ಧತಿಯ ಚಿಕಿತ್ಸೆಯಿಂದ ಬಂಜೆತನ ನಿವಾರಿಸಬಹುದಾಗಿದೆ ಎಂದು ಮಿರಜದ ಸಚಿನ್ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನ ವೈದ್ಯ ಡಾ. ಸಚಿನ್ ಸುಗಣ್ಣವರ ಹೇಳಿದರು. 

ಮಿರಜ್‌ದ ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸನೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  

ವಿದೇಶದಲ್ಲಿ ಬಂಜೆತನ ನಿವಾರಣೆಗೆ ಬಳೆಸುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಸಚಿನ್ ಆಸ್ಪತ್ರೆಯಲ್ಲಿ ಲಭ್ಯವಿದ್ಯು, ಕರ್ನಾಟಕ, ಮಹಾರಾಷ್ಟ್ರದ ಗಡಿ ಭಾಗದ ಸಾವಿರಾರು ಜನ ಚಿಕಿತ್ಸೆ ಪಡೆದು, ಸಂತಾನ ಭಾಗ್ಯ ಪಡೆದುಕೊಂಡಿದ್ದಾರೆ. 

ಬಂಜೆತನದ ಸಮಸ್ಯೆಯಿಂದ ಬಳಲುವರು ಸಮಸ್ಯೆ ಪರಿಹಾರಕ್ಕಾಗಿ ಮೊ. 09765010834 ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ವೇಳೆ  ಡಾ. ನೇಹಾ ಸುಗಣ್ಣವರ ಇತರರು ಇದ್ದರು.