ನಾಗಠಾಣ ಗ್ರಾಮದಲ್ಲಿ ದೇವರ ದಾಸಿಮಯ್ಯ ವೇಷ ಧರಿಸಿ ಎಲ್ಲರ ಗಮನ ಸೇಳೆದ ಮಕ್ಕಳು

ತಾಂಬಾ 14: ಕನ್ನಡ ನಾಡಿನ ಶಿವಶರಣರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಬಾಳಿ ಬದುಕಿದ ಶರಣರು. ಆದ್ಯ ವಚನಕಾರ, ಜನಪದ ಜಗದ್ಗುರು ಎಂಬ ಬಿರುದಾಂಕಿತ ದೇವರ ದಾಸಿಮಯ್ಯನವರ ವಚನಗಳಲ್ಲಿ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಓಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ. ಅವರು ವಿಶ್ವದ ಪ್ರಥಮ ವಚನಕಾರ. ರಾಮನಾಥ ಎಂಬ ಅಂಕಿತನಾಮದಲ್ಲಿ 176 ವಚನಗಳನ್ನು ರಚಿಸಿದ್ದಾರೆ. 

ದೇವರ ದಾಸಿಮಯ್ಯನವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ನಮಗಾಗಿ ಜೀವನದ ಸನ್ಮಾರ್ಗವನ್ನು ತಿಳಿಸಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ, ನಮ್ಮ ಬಾಳು ಬೆಳಕಾಗುವುದು. 

ದೇವರ ದಾಸಿಮಯ್ಯನವರ ಜಯಂತಿ ಆಚರಣೆ ನಿಮಿತ್ಯ   ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ದೇವರ ದಾಸಿಮಯ್ಯನವರ ವೇಷ ಧರಿಸಿ ಜಯಂತಿ ಆಚರಿಸಿದರು.