ಮಹಿಳೆಯರು ಸಬಲೀಕರಣವಾದರೆ ದೇಶ ಅಭಿವೃದ್ಧಿ ಸಾಧ್ಯ: ಡಾ. ಬಿ. ಕೆ. ರವಿ

If women are empowered, the country can develop: Dr. B. K. Ravi

ಮಹಿಳೆಯರು ಸಬಲೀಕರಣವಾದರೆ ದೇಶ ಅಭಿವೃದ್ಧಿ ಸಾಧ್ಯ: ಡಾ. ಬಿ. ಕೆ. ರವಿ 

ಕೊಪ್ಪಳ 05: ಮಹಿಳೆಯರು ಸಬಲೀಕರಣವಾದರೆ ಮಾತ್ರ ನಮ್ಮ ದೇಶ ಅಭಿವೃದ್ಧಿವಾಗುತ್ತದೆ ಎಂದು ಕೊಪ್ಪಳ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ. ರವಿ ಅವರು ಹೇಳಿದರು. 

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು  ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ಹಮ್ಮಿಕೊಂಡಿದ್ದ  ಎಚ್‌. ಡಿ. ಎಫ್‌. ಸಿ ಬ್ಯಾಂಕ್ ನ  ಕಾಪೋರೆಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ  ಕಾಲೇಜಿನಲ್ಲಿ ನಿರ್ಮಿಸಿರುವ ಕಂಪ್ಯೂಟರ್ ಡಿಜಿಟಲ್ ಲ್ಯಾಬ್ ನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಕೌಶಲ್ಯ ಅಭಿವೃದ್ಧಿಗಳು ಮಹಿಳಾ ಸಬಲೀಕರಣಕ್ಕೆ ತಳಹದಿ ಹಾಕುತ್ತವೆ. ನಮ್ಮ ದೇಶದಲ್ಲಿ ಹೆಚ್ಜು ವಿದ್ಯಾಭ್ಯಾಸ ಪಡೆದುಕೊಂಡವರು ಸಣ್ಣ ಪುಟ್ಟ ಕೆಲಸಗಳನ್ನು  ಮಾಡಲು ಹಿಂಜರಿಕೆ ಪಡುತ್ತಿದ್ದಾರೆ. 

ಪ್ರತಿಭೆಯಿದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಮಹಿಳೆಯರಿಗೆ ಶಕ್ತಿಯಿದೆ. ಅವರಿಗೆ ಎಲ್ಲರೂ ಪ್ರೋತ್ಸಾಹ ಕೊಡಬೇಕು. ವಿದ್ಯಾರ್ಥಿಗಳು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ಉದ್ಯೋಗಗಳು ಸಿಗುತ್ತವೆ. ಕೌಶಲ್ಯಗಳು ಜೊತೆಗೆ ರಾಜಕೀಯ ಸೇರಿದಂತೆ ಇನ್ನಿತರ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರಬೇಕು ಎಂದು ಹೇಳಿದರು.ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ನ ನಾಗರಾಜು ಹುಲಿಕಟ್ಟಿ ಅವರು ಮಾತನಾಡುತ್ತ ಕಾಪೋರೆಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಎಚ್‌. ಡಿ. ಎಫ್‌. ಸಿ ಬ್ಯಾಂಕ್ ನವರು ಈ ಕಾಲೇಜಿನಲ್ಲಿ ಕಂಪ್ಯೂಟರ್ ಡಿಜಿಟಲ್ ಲ್ಯಾಬ್ ನ್ನು ನಿರ್ಮಿಸಿದ್ದಾರೆ. ದೇಶಪಾಂಡೆ ಸ್ಕಿಲಿಂಗ್ ನಿಂದ ಕಾಲೇಜಿನಲ್ಲೇ ಕೌಶಲ್ಯಗಳ ಕುರಿತು ತರಬೇತಿ ನೀಡಿ ವಿದ್ಯಾರ್ಥಿಗಳಿಗೆ ಉದ್ಯೋಗಗಳನ್ನು ಕೊಡುಸುತ್ತಿದ್ದೇವೆ. ಇದರಿಂದ ಗ್ರಾಮೀಣ ಮಕ್ಕಳಿಗೆ ಬಹಳ ಅನುಕೂಲ ಆಗುತ್ತದೆ. ಕೌಶಲ್ಯಗಳನ್ನು ಕಲಿತರೆ ಉತ್ತಮವಾದ ಉದ್ಯೋಗಳನ್ನು ಪಡೆಯಬಹುದು.  ಈ ಲ್ಯಾಬ್ ಪ್ರಾರಂಭ ಆಗುವುದಕ್ಕೆ ಕಾಲೇಜಿನ ಸಿಬ್ಬಂದಿಗಳು ನಮಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ.  ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಜ್ಞಾನ ಇರುತ್ತದೆ ಅದನ್ನು ಗುರುತಿಸಿ ನಾವು ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಎಚ್‌. ಡಿ.ಎಫ್ ಬ್ಯಾಂಕ್ ಸಿಬ್ಬಂದಿ ಹನುಮಂತ ಅವರು ಮಾತನಾಡುತ್ತ ಈ ರೀತಿಯ ಡಿಜಿಟಲ್ ಲ್ಯಾಬ್ ಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು. ನಮ್ಮ ಬ್ಯಾಂಕ್ ವತಿಯಿಂದ ಕಾರ​‍್ೊರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಬಹಳಷ್ಟು ಹಣವನ್ನು ಈ ರೀತಿಯ ಸಾಮಾಜಿಕ ಮತ್ತು ಶೈಕ್ಷಣಿಕ ಕೆಲಸಗಳಿಗೆ ವಿವಿಧ ಕಾಲೇಜುಗಳಲ್ಲಿ ಖರ್ಚು ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉದ್ಯೋಗ ಕೋಶದ ಸಂಚಾಲಕರಾದ ಡಾ. ಪ್ರದೀಪ್ ಕುಮಾರ್ ಅವರು ಮಾತನಾಡುತ್ತ ದೇಶಪಾಂಡೆ ಸ್ಕಿಲಿಂಗ್ ಯಿಂದ ನಮ್ಮ ಕಾಲೇಜಿನ ಬಹಳ ವಿದ್ಯಾರ್ಥಿಗಳು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ನಿಮ್ಮಲ್ಲಿರುವ ಜ್ಞಾನ ಮತ್ತು ಪ್ರತಿಭೆಯನ್ನು ಬಳಸಿಕೊಂಡು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಿ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಮಾತನಾಡುತ್ತ ದೇಶಪಾಂಡೆ ಮತ್ತು ನಮ್ಮ ಕಾಲೇಜಿನ ಬಾಂಧವ್ಯ ನಾಲ್ಕು ವರ್ಷ ದಿಂದ ಇದೆ. ನಮಗೆ ಸರಕಾರಿ ನೌಕಾರಿ ಸಿಗಬೇಕಾದರೆ ಶಿಕ್ಷಣ ಜೊತೆಗೆ ಕೌಶಲ್ಯಗಳನ್ನು ಕಲಿಯಬೇಕು. ನೀವು ಕಲಿಕೆ ಜೊತೆ ಕೌಶಲ್ಯಗಳನ್ನು ಕಲಿಯಬೇಕು. ದೇಶಪಾಂಡೆ ಸ್ಕಿಲಿಂಗ್ ಯಿಂದ ಗ್ರಾಮೀಣ ಬಡ ಮಕ್ಕಳಿಗೆ ಆರ್ಥಿಕವಾಗಿ ಬಹಳ ಸಹಾಯವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ದೇಶಪಾಂಡೆ ಸ್ಕಿಲಿಂಗ್ ಯಲ್ಲಿ ತರಬೇತಿ ಪಡೆದು ಟಿ. ಸಿ. ಎಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ಕೃತಿಕಾ ಮತ್ತು ಸಹಿರಾ ಅವರಿಗೆ ತಾತ್ಕಾಲಿಕ ಆದೇಶ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ದೇಶಪಾಂಡೆ ಸ್ಕಿಲಿಂಗ್ ನ ಸಿಬ್ಬಂದಿಗಳು ಶಾರದಮ್ಮ, ಸೂರನ್ನ, ಸಾನಿಯ, ಸಂತೋಷ್, ಮಹಾಂತೇಶ್ ಹಾಗೂ ಎಚ್‌. ಡಿ. ಎಫ್ ಸಿ ಬ್ಯಾಂಕ್ ನ ಸಿಬ್ಬಂದಿ ಶ್ರೀಕಾಂತ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭೂಮಿಕಾ ನುರೂಪಿಸಿದರು. ಅಕ್ಷತಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಕೃತಿಕಾ ಸ್ವಾಗತಿಸಿದರು. ಸಹಿರಾ ವಂದಿಸಿದರು.