ಲೋಕದರ್ಶನ ವರದಿ
ಹೊಸಪೇಟೆ 22: ತುಂಗಭದ್ರ ಜಲಾಶಯದ 113ನೇ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯಗಳು ರಾಯಬಸವಣ್ಣ ಕಾಲುವೆಯ ಸಂಪೂರ್ಣ ಬೆಳೆಗೆ ನೀರು ಕೊಡಲು ಸಭೆಯು ಒಪ್ಪಿಗೆ ಸೂಚಿಸಿದರು, ತುಂಗಭದ್ರ ಬಲದಂಡೆಯ ಕೆಳಮಟ್ಟದ ಕಾಲುವೆಯ ಮಾರ್ಚ 30ರವರೆಗೆ ನೀರು ಬಿಡಲು ಸಭೆಯು ಒಪ್ಪಿಗೆ, ತುಂಗಭದ್ರ ಬಲದಂಡೆಯ ಮೇಲ್ಮಟ್ಟದ ಕಾಲುವೆ ಡಿಸೆಂಬರ್ 20 ರಿಂದ 30ರವರೆಗೆ 10 ದಿನಗಳು ನೀರು ನಿಲುಗಡೆ ಮಾಡಿ ಜನವರಿ 15ರವರೆಗೆ ನೀರು ಬಿಡಲು ಸಭೆಯು ಒಪ್ಪಿಗೆ, ತುಂಗಭದ್ರ ಎಡದಂಡೆಯ ಕೊಪ್ಪಳ, ರಾಯಚೂರು ಕಾಲುವೆ ಮಾಚರ್್ 30ರವರೆಗೆ ನೀರು ಬಿಡಲು ಸಭೆಯು ಒಪ್ಪಿಗೆ ಸೂಚಿಸಿದೆ.
ಹೆಚ್.ಎಲ್.ಸಿ ಕಾಲುವೆಗೆ ನೀರು ನಿಲುಗಡೆ ಮಾಡಬಾರದು ಮತ್ತು ಜನವರಿ ಕೊನೆಯವರೆಗೂ ನೀರು ಕೊಡಬೇಕು ಎಂದು ತುಂಗಭದ್ರ ರೈತ ಸಂಘದಿಂದ ವಿನಂತಿಸಲಾಗಿದೆ. ಜನವರಿ ಮೊದಲನೇ ವಾರದಲ್ಲಿ ಮತ್ತೊಮ್ಮೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಈ ವಿಚಾರವಾಗಿ ನಿರ್ಣಯ ಕೈಗೊಳ್ಳಲಾಗುವುದೆಂದು ಸಭೆಯ ಅಧ್ಯಕ್ಷತೆ ವಹಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮತ್ತು ಮಾನ್ಯ ಆರೋಗ್ಯ ಮಂತ್ರಿ ಶ್ರೀರಾಮುಲು ತಿಳಿಸಿದರು.