ಗೃಹ ಘಟಕಾಧಿಕಾರಿ ಹೆಚ್‌.ಗಿರಿಧರ್‌ಗೆ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ

ಗೃಹ ಘಟಕಾಧಿಕಾರಿ ಹೆಚ್‌.ಗಿರಿಧರ್‌ಗೆ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ Home Department Officer H. Giridhar receives Bharat Bhushan National Award

ಲೋಕದರ್ಶನ ವರದಿ

ಕಂಪ್ಲಿ 24:  ಬುಧವಾರದಂದು ಬಾಗಲಕೋಟೆ ನಗರದ ಲಯನ್ಸ್‌ ಕ್ಲಬ್‌ನಲ್ಲಿ ಅಂತರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕ ವಿಜಯಪುರ ಜಿಲ್ಲಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಕೃತಿಕ ಸಿರಿ ಉತ್ಸವ ಹಾಗೂ ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭದ್ರತೆ ಸಮಾಜ ಸೇವಾ ಕ್ಷೇತ್ರದಲ್ಲಿನ ಅಪಾರ ಸೇವೆಯನ್ನು ಗುರುತಿಸಿ, ಕಂಪ್ಲಿ ಗೃಹ ರಕ್ಷಕದಳದ ಘಟಕಾಧಿಕಾರಿ ಹೆಚ್‌.ಗಿರಿಧರ್ ಇವರಿಗೆ 2026ರ ಪ್ರಸ್ತುತ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಪ್ರಶಸ್ತಿ ಪುರಸ್ಕೃತ ಹೆಚ್‌.ಗಿರಿಧರ್ ಮಾತನಾಡಿ, ಹಲವು ವರ್ಷಗಳಿಂದ ಗೃಹ ರಕ್ಷಕದಳದಲ್ಲಿ ಸೇವೆ ಮಾಡುವ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ.

ಎಲೆಮರೆ ಕಾಯಿಯಂತಿರುವ ನಮ್ಮ ಸೇವೆಯನ್ನು ಗುರುತಿಸಿ, ಅಂತರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕ ವಿಜಯಪುರ ಜಿಲ್ಲಾ ಪರಿಷತ್‌ನವರು ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ ನೀಡಿರುವುದು ತುಂಬ ಖುಷಿದಾಯಕವಾಗಿದೆ. ಇದರಿಂದ ಇನ್ನಷ್ಟು ಸೇವೆಗೆ ಉತ್ಸುಕನಾಗಿದ್ದೇನೆ. ಇದೇ ತರನಾಗಿ ಇನ್ನೂ ಬಹಳಷ್ಟು ಜನರು ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿದ್ದು, ಅಂತವರನ್ನು ಸಹ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದರು.  ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ರಾಜಾಧ್ಯಕ್ಷ ಸಾಗರ ಆರ್‌.ಕಲದಿಗಿ, ಸಾಹಿತ್ಯ ಕಲಾವಿದ ಡಾ.ಬಸವರಾಜ ಗವಿಮಠ ಸೇರಿದಂತೆ ಗಣ್ಯರಿದ್ದರು.