ಹೊಳಗುಂದಿ : ಯೂರಿಯಾ ಗೊಬ್ಬರಕ್ಕೆ ರೈತರ ಪರದಾಟ
Holagundi: Farmers' scramble for urea fertilizer
ಲೋಕದರ್ಶನ ವರದಿ
ಹೂವಿನಹಡಗಲಿ 29: ಮುಂಗಾರು ಬಿತ್ತನೆಗೆ ರೈತರು ಮುಂದಾಗಿದ್ದು .ಕೃತಕ ಅಭಾವದಿಂದ ಮುಂಗಡವಾಗಿ ರೈತರು ಯೂರಿಯಾ ಸಂಗ್ರಹ ಮಾಡುತ್ತಿದ್ದಾರೆ.ತಾಲ್ಲೂಕಿನ ಹೊಳಗುಂದಿ ಗ್ರಾಮದಲ್ಲಿ ಶುಕ್ರವಾರ ಸೊಸೈಟಿ 650 ಚೀಲ ಬಂದಿದ್ದು,ಚೀಲಕ್ಕೆ ? 300 ರೂ.ಕೊಡಲಾಗಿದೆ. ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಡಿದರು.ಸರ್ವರ್ ಸಮಸ್ಯೆ ಯಿಂದ ಸ್ವಲ್ಪ ಗಲಾಟೆ ಯಿಂದ ಗೊಬ್ಬರ ವಿತರಿಸಲು ನಿಲ್ಲಿಸಲಾಗಿದೆ ನಂತರ ಸ್ಥಳಕ್ಕೆ ಕೃಷಿ ಸಹಾಯಕ ನಿರ್ದೇಶಕ ಕೆ.ಟಿ.ಮಂಜುನಾಥ ಮಾತನಾಡಿ ಪಹಣಿ, ಆಧಾರ ಕಾರ್ಡ್ ತೆಗೆದುಕೊಂಡು ವಿತರಿಸಲು ಹೇಳಿದರು.ಇದೇ ವೇಳೆ ಸೊಸೈಟಿ ಅದ್ಯಕ್ಷ ಕಾತ್ರಿಕಿ ಕರಿಬಸವರಾಜ, ಕಾರ್ಯದರ್ಶಿ ವೀರೇಶ, ಗ್ರಾ.ಪಂ.ಮಾಜಿ ಸದಸ್ಯ ಸ್ವರೂಪನಾಂದ ಇದ್ದರು.ಕೃಷಿ ಇಲಾಖೆ ಸಹಕಾರ ಸಂಘಗಳ ಮೂಲಕ ಯೂರಿಯಾ ಪೂರೈಸುತ್ತಿದೆ. ಆದರೆ ಗೊಬ್ಬರವನ್ನು ಯಾರಿಗೆ ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ ಕೃಷಿ ಇಲಾಖೆ ಮುತುವರ್ಜಿ ವಹಿಸಿಲ್ಲ.
ಹಾಗಾಗಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೆ ಜತೆಗೆ ತಾಲೂಕಿನ ನಾನಾ ಸಹಕಾರ ಸಂಘಗಳಲ್ಲಿನ ಯೂರಿಯಾ ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿದೆ ಎಂಬುದು ದೂರುಗಳು ಕೇಳಿ ಬರುತ್ತಿದೆ. ಖಾಸಗಿ ಮಾರಾಟಗಾರರ ಬಳಿ ಹೋದರೆ ಗೊಬ್ಬರ ಇಲ್ಲ ಎನ್ನುತ್ತಿದ್ದಾರೆ. ಸಂಗ್ರಹಿಸಿ ಇಟ್ಟುಕೊಂಡಿರುವವರು ಬೇರೆ ಕಡೆಯಿಂದ ತರಿಸಿದ್ದೇವೆ ಎಂದು ಹೇಳಿ ರೈತರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರೈತರ ನೆರವಿಗೆ ಬಾರದ ಕೃಷಿ ಇಲಾಖೆ ಮತ್ತು ಅದರ ಅಧಿಕಾರಿಗಳು ಇದ್ದರೂ ಯಾರಿಗೆ ಪ್ರಯೋಜನ ಎಂದು ರೈತರು ಅಸಮಾಧಾನ ತೋಡಿಕೊಂಡರು.ವರ್ತಕರು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಈ ವಿಷಯವನ್ನು ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ದೂರುಗಳು ರೈತರಿಂದ ಕೇಳಿಬಂದಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 