ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
He hasn't brought rice and sorghum grown on his own land through his own hard work and sweat. I know
ಸಂಕೇಶ್ವರ : ಅಕ್ಕಿ, ಜೋಳ ತಂದು ಕೊಟ್ಟಿದ್ದೇನೆ ಎಂದು ಹೇಳುತ್ತಿರುವ ನಂದು ಮುಡಸಿ ಅವರು ತಮ್ಮ ಸ್ವಂತ ಜಮೀನಿನಲ್ಲಿ ಬೆವರು ಸುರಿಸಿ ಬೆಳೆದು ತಂದು ಕೊಟ್ಟ ಅಕ್ಕಿ ಜೋಳ ಅಲ್ಲ. ಇವರದ್ದು 50 ಎಕರೆ ಜಮೀನು ಇಲ್ಲ, ಅವರು ಅಲ್ಲಿ ಬೆಳೆಸಿ ತಂದಿದ್ದಾರೆ ಎನ್ನಲು. ಮುಡಸಿ ಎಲ್ಲಿಂದ ಅಕ್ಕಿ, ಜೋಳ ಹೇಗೆ ತಂದಿದ್ದಾರೆ. ಎಲ್ಲಿಂದ ತಂದು ಕೊಟ್ಟಿದ್ದಾರೆ ನನಗೆ ಗೊತ್ತಿದೆ. ಅವರ ಸಾತ ಬಾರಾ ಎಲ್ಲವು ನನ್ನ ಬಳಿ ಇದೆ. ಅದನ್ನು ಜನರ ಮುಂದೆ ಬಿಚ್ವಿ ಹೇಳಬೇಕು ಎಂದಾದರೆ ಬಿಚ್ವಿ ಇಡುತ್ತೇನೆ ಎಂದು ಬಸನಗೌಡಾ ಪಾಟೀಲ ಅವರು ನಂದು ಮುಡಸಿಗೆ ಎಚ್ವರಿಕೆ ನೀಡಿದ್ದಾರೆ.
ರವಿವಾರ ಪಟ್ಟಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸನಗೌಡಾ ಪಾಟೀಲ ಅವರು, ನಂದು ಮುಡಸಿ ಅವರು ಅಷ್ಟು ಅಕ್ಕಿ ಕೊಟ್ಟಿದ್ದೇನೆ, ಅಷ್ಟು ಜೋಳ ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಎಲ್ಲಿಂದ ಅಕ್ಕಿ ಜೋಳ ತಂದಿದ್ದಾರೆ ಎಲ್ಲವು ನನಗೆ ಗೊತ್ತಿದೆ. ಅವರ ಸಾತಬಾರಾ ಕೂಡಾ ನನ್ನ ಬಳಿ ಇದೆ. ಎಲ್ಲಿಂದ ಬಂದವು ಎನ್ನುವದನ್ನು ಜನರ ಮುಂದೆ ಬಿಚ್ವಿ ಹೇಳಬೇಕಾಗುತ್ತದೆ. ಜನರ ಮುಂದೆ ಮರಿಯಾದಿಯಿಂದ ಇರಬೇಕು ಎಂದು ಎಚ್ವರಿದರು.
ಅಲ್ಲದೆ ಅವರ ತಂದೆಯದ್ದು 50 ಎಕರೆ ಜಮೀನು ಇಲ್ಲ. ಅಲ್ಲಿಂದ ಬೆಳೆದು ತಂದು ಕೊಟ್ಟಿದ್ದಾನೆ ಎನ್ನಲು ಎಂದು ದೂರಿದರು.
ಲೆಕ್ಕಪತ್ರ ಪಾರದರ್ಶಕ; ಅಧ್ಯಕ್ಷ ಸ್ಥಾನಕ್ಕಾಗಿ ರಾಜಕಾರಣ: ಅಮರ ನಲವಡೆ
2016ರಲ್ಲಿ ನಡೆದ ಜಾತ್ರೆಯ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದೆ ಮಂಡಿಸಲಾಗಿದೆ. ಜುಲೈ 18ರಂದು ನಡೆದ ಸಭೆಯಲ್ಲಿಯೂ ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಲೆಕ್ಕ ಕೇಳಿದವರಿಗೆ ಆಗಿನ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಅವರಿಂದಲೇ ಲೆಕ್ಕಪತ್ರ ನೀಡಲಾಗಿದೆ. 2027ರ ಜಾತ್ರೆಯ ಸುಸೂತ್ರ ನಿರ್ವಹಣೆಗಾಗಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಆದರೆ ಕೆಲವರು ಅಧ್ಯಕ್ಷ ಸ್ಥಾನವನ್ನು ಗುರಿಯಾಗಿಸಿಕೊಂಡು ಜಾತ್ರೆಯ ಲೆಕ್ಕಪತ್ರ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಜಾತ್ರೆ ಸಮಿತಿ ಉಪಾಧ್ಯಕ್ಷ ಅಮರ ನಲವಡೆ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ಸಮಿತಿಯ ಲೆಕ್ಕಪತ್ರ, ಸಮಿತಿ ರಚನೆ ಹಾಗೂ ಇತ್ತೀಚೆಗೆ ಕೇಳಿಬಂದ ಆರೋಪಗಳಿಗೆ ಸ್ಪಷ್ಟನೆ ನೀಡಿದರು."ಸಂಕೇಶ್ವರದ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಜಾತ್ರೆಯನ್ನು ಯಶಸ್ವಿಯಾಗಿ ನಡೆಸುವುದು ನಮ್ಮ ಉದ್ದೇಶ. ನಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಉತ್ತರ ನೀಡುವ ಸಲುವಾಗಿ ಈ ಪತ್ರಿಕಾಗೋಷ್ಠಿ ನಡೆಸಲಾಗಿದೆ. ನಾವು ಸಂಪೂರ್ಣ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅಮರ ನಲವಡೆ ಹೇಳಿದರು.
"ಆರೋಪ ಮಾಡುವುದು ಸುಲಭ. ಆದರೆ ಅದನ್ನು ಸಾಬೀತುಪಡಿಸುವುದು ಕಷ್ಟ. ನಮ್ಮ ವಿರುದ್ಧ ಬ್ಲ್ಯಾಕ್‌ಮೇಲ್ ಮಾಡುವಂತಹ ಯಾವುದೇ ನಕಲಿ ವ್ಯವಹಾರಗಳಿಲ್ಲ. ನಾವು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು.
ಜುಲೈ 18ರಂದು ನಡೆದ ಸಭೆಯಲ್ಲಿ ಎಲ್ಲ ಸಮಾಜಗಳ ಪ್ರತಿನಿಧಿಗಳನ್ನು ಸೇರಿಸಿ ಉಪಸಮಿತಿಗಳನ್ನು ರಚಿಸಲು ಹೆಸರುಗಳನ್ನು ಸೂಚಿಸುವಂತೆ ತಿಳಿಸಲಾಗಿತ್ತು. ಅಲ್ಲದೆ, ಕಮಿಟಿ ಪದಾಧಿಕಾರಿಗಳು ಮನೆ-ಮನೆಗೆ ತೆರಳಿ ಎಲ್ಲ ಸಮಾಜದವರ ಅಭಿಪ್ರಾಯ ಸಂಗ್ರಹಿಸಿ, ಎಲ್ಲರನ್ನೂ ಒಳಗೊಂಡ ಸಮಿತಿಗಳು ಹಾಗೂ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸಂಜಯ ಶಿರಕೋಳಿ, "ಪಟ್ಟಣದ ಜನರ ಮುಂದೆ ಲೆಕ್ಕಪತ್ರ ಮಂಡಿಸಲಾಗಿದೆ. ಆದರೂ ಕೆಲವರು ಅದನ್ನು ಒಪ್ಪಿಕೊಳ್ಳುತ್ತಿಲ್ಲ, ನಮಗೆ ನಾಲ್ಕು ಜನರ ಮುಂದೆ ಲೆಕ್ಕ ಮಂಡಿಸದೆ ಪಟ್ಟಣದ ಎಲ್ಲ ನಾಗರಿಕರ ಮುಂದೆ ಮಂಡಿಸಲಾಗಿದೆ ಎಂದು ಹೇಳಿದರು.
ಬಸನಗೌಡ ಪಾಟೀಲ ಮಾತನಾಡಿ, "ಕೆಲವು ರಸೀದಿ ಪುಸ್ತಕಗಳು ಇಲ್ಲವೆಂದು ಹೇಳುವವರು ಬ್ಯಾಲೆನ್ಸ್ ಶೀಟ್‌ಗಳನ್ನು ಒಪ್ಪಿಕೊಳ್ಳದಿರುವುದು ಆಶ್ಚರ್ಯದ ಸಂಗತಿ. ಅನುಮಾನವಿದ್ದರೆ ತಮ್ಮ ಪರದ ಚಾರ್ಟರ್ಡ್ ಅಕೌಂಟೆಂಟ್‌ರನ್ನು ಕರೆತಂದು ಲೆಕ್ಕ ಪರಿಶೀಲನೆ ಮಾಡಿಸಲಿ. ಎಂಪಿ ಸೊಸೈಟಿಯ ಸಿಬ್ಬಂದಿ 10 ವರ್ಷದ ಲೆಕ್ಕವನ್ನು ಬದಲಾಯಿಸುವುದು ಸಾಧ್ಯವೇ?" ಎಂದು ಪ್ರಶ್ನಿಸಿದರು.
ಅಪ್ಪಾಸಾಹೇಬ ಶಿರಕೋಳಿ ಅವರ ಹೆಸರನ್ನು ಕೆಡಿಸಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, "ಎಲ್ಲರೂ ಒಂದಾಗಿ ಜಾತ್ರೆ ನಡೆಸುವ ಮನೋಭಾವ ನಮ್ಮಲ್ಲಿದೆ," ಎಂದರು.
ರೋಹನ್ ನೇಸರಿ ಅವರು ಲಕ್ಷ್ಮೀ ದೇವಸ್ಥಾನಕ್ಕೆ ಯಾರೂ ಪೂಜೆಗೆ ಬರುವುದಿಲ್ಲ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ, "ಮೊದಲು ಅವರು ಯಾವಾಗ ಲಕ್ಷ್ಮೀ ದೇವಸ್ಥಾನಕ್ಕೆ ಬರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ," ಎಂದು ಹೇಳಿದರು.
ಇತ್ತೀಚೆಗೆ ಮಾಡಲಾಗಿರುವ ಆರೋಪಗಳಿಗೆ ಉತ್ತರ ನೀಡುವ ಉದ್ದೇಶದಿಂದಲೇ ಈ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಎಂದು ಬಸನಗೌಡ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಗಿರೀಶ್ ಕುಲಕರ್ಣಿ ಮಾತನಾಡಿ, "ಜುಲೈ 21ರಂದು ಮಂಗಳವಾರ ಜಾತ್ರೆಯ 'ಕೋಣ ಬಿಡುವ' ಕಾರ್ಯಕ್ರಮ ನಡೆಯಲಿದೆ," ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರೆ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಶ್ರೀಕಾಂತ ಹತನೂರೆ, ಕುನಾಲ್ ಪಾಟೀಲ, ಮಲ್ಲಿಕಾರ್ಜುನ ದೇಶಾಯಿ, ಅಶೋಕ್ ಪಾಟೀಲ ಹಾಗೂ ಬಸಗೌಡ ಪಾಟೀಲ ಉಪಸ್ಥಿತರಿದ್ದರು.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 