ಸರ್ಕಾರಗಳು ತಮ್ಮ ಅಧಿಕಾರ ಅವಧಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವಲ್ಲಿ ವಿಫಲ

Governments have failed to compensate farmers who lost their land during their tenure

ಹಾವೇರಿ  28:  ಜಿಲ್ಲೆಯ ರೈತರ ಜಮೀನುಗಳನ್ನು ಸನ್ 2001 ರಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ನಿರ್ಮಾಣ ಮಾಡಲು ಭೂ ಸ್ವಾಧೀನ ಮಾಡಿಕೊಂಡು 25 ವರ್ಷ ಗುರುತಿಸಿದ್ದು. ಆ ಸಮಯದಲ್ಲಿ ಭೂ ಸ್ವಾಧೀನ ಮಾಡಿಕೊಂಡ ರೈತರ ಜಮೀನಿಗೆ 25 ಸಾವಿರದಿಂದ 30 ಸಾವಿರ ದರ ನಿಗದಿ ಮಾಡಿ ಭೂ ಪರಿಹಾರ ಕೊಟ್ಟಿದ್ದು. ಇದರಲ್ಲಿ ಅನೇಕ ರೈತರಿಗೆ ಇಲ್ಲಿಯವರೆಗೂ ಭೂ ಪರಿಹಾರ ಕೊಡದೆ ಅನಾವಶ್ಯಕವಾಗಿ ವಿಳಂಬ ಮಾಡುತ್ತಿದ್ದು ಅನೇಕ ರೈತರು ಭೂ ಸ್ವಾಧೀನ ಅಧಿಕಾರಿಗಳ ಕಛೇರಿ ಹಾಗೂ ನೀರಾವರಿ ಇಲಾಖೆಗೆ ಸುತ್ತಾಡಿ ಪರಿಹಾರ ಕಾಣದೆ ಕಂಗಾಲಾಗಿದ್ದಾರೆ. ಇನ್ನೂ ಅನೇಕ ರೈತರು ವಯಸ್ಸು ಕಳೆದು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಬಾರಿ ಪ್ರತಿಭಟನೆ ಮಾಡಿದರು ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಆಡಳಿತ ಮಾಡುವ ಸರ್ಕಾರಗಳು ತಮ್ಮ ಅಧಿಕಾರ ಅವಧಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವಲ್ಲಿ ವಿಫಲವಾಗಿವೆ.  

ಅದಕ್ಕೆ ಮುಖ್ಯ ಕಾರಣ ವಿಶೇಷ ಭೂಸ್ವಾಧೀನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ರೈತರಿಗೆ ಪ್ರಾಮಾಣಿಕವಾಗಿ ಖಾಯಂ ಕಾರ್ಯ ನಿರ್ವಹಿಸುವ ವಿಶೇಷ ಭೂಸ್ವಾಧೀನ ಅಧಿಕಾರಿ ನೇಮಕ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತಾ.ಸದ್ಯದ ಪರಿಸ್ಥಿತಿಯಲ್ಲಿ ಹಾವೇರಿಯಲ್ಲಿ ಅಸಿಸ್ಟೆಂಟ್ ಕಮಿಷನರ್ ( ಂಅ ) ಪ್ರಭಾರ ಭೂಸ್ವಾದಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಹಾಗೂ ರಾಣೇಬೆನ್ನೂರಿನ ಭೂ ಸ್ವಾಧೀನ ಕಚೇರಿಗೆ ಸಿಬ್ಬಂದಿಗಳಿಲ್ಲದೆ  ಕೆಲಸ ಕಾರ್ಯ ನಡೆಯುತ್ತಿಲ್ಲ ಜಿಲ್ಲೆಯಲ್ಲಿ ಕಲಂ 28 ಂ ಪ್ರಕರಣಗಳು ಸುಮಾರು 800 ರೈತರ ಕೇಸುಗಳು ಬಾಕಿ ಇದ್ದು ಹಾಗೂ ಕಲಂ 64 ಪ್ರಕರಣಗಳು 1850 ಕ್ಕಿಂತ ಹೆಚ್ಚಿದ್ದು ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಅನಾವಶ್ಯಕವಾಗಿ ರೈತರಿಗೆ ತೊಂದರೆಯಾಗುತ್ತಿದೆ . 

ಹಾಗೂ ಇತ್ಯರ್ಥ ಪಡಿಸಿದ ರೈತರಿಗೆ ಬಡ್ಡಿ ಕೊಡಲಾಗುವುದಿಲ್ಲ ಎಂದು ನೀರಾವರಿ ಇಲಾಖೆ ಹೈಕೋರ್ಟ್‌ ಮೆಟ್ಟಿಲೇರಿ ರೈತರಿಗೆ ದ್ರೋಹ ಮಾಡಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ ಅದಕ್ಕೆ ಸರಿಯಾದ ಸಿಬ್ಬಂದಿ ಇಲ್ಲ ಇದರ ಜೊತೆ ಇನ್ನೂ ಅನೇಕ ಸಮಸ್ಯೆಗಳಿದ್ದು. ಉಪ ಕಾಲುವೆಗಳನ್ನು ಮಾಡದೆ ಇರುವ ಕಾರಣ ನೀರು ಮುಖ್ಯ ಕಾಲುವೆಯ ಮುಖಾಂತರ ತುಂಗಭದ್ರಾ  ನದಿಗೆ  ಸೇರುತ್ತಿದೆ. ರೈತರ ಹೊಲಕ್ಕೆ ನೀರುಣಿಸುವ ಯೋಜನೆ ನೆನೆಗುದಿಗೆ ಬಿದ್ದಿದ್ದು ರೈತರ ಜಮೀನುಗಳಿಗೆ ನೀರಿಲ್ಲದೆ ಹಾಗೂ ಪರಿಹಾರ ಕೂಡ ಇಲ್ಲದೆ ಅವ್ಯವಸ್ಥೆಯಾಗಿದೆ ಅನವಶ್ಯಕ ವಿಳಂಬ ನೀತಿಯನ್ನು ವಿರೋಧಿಸಿ ಎಸಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ರೈತ ಸಂಘ ತೀರ್ಮಾನ ತೆಗೆದುಕೊಂಡಿದ್ದು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ರೈತರ ಜ್ವಲಂತ ಸಮಸ್ಯೆಗಳಿಗೆ ನ್ಯಾಯ ಒದಗಿಸಬೇಕೆಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಜಿಲ್ಲಾ ಘಟಕ ಹಾವೇರಿ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಯಿತು ಈ ಸಂದರ್ಭದಲ್ಲಿ ರಾಮಣ್ಣ ಕೆಂಚಳ್ಳೆರ. ಮಲ್ಲಿಕಾರ್ಜುನ ಬಳ್ಳಾರಿ. ಶಿವಬಸಪ್ಪ ಗೊವಿ. ಸುರೇಶ ಚಲವಾದಿ. ಶಂಕ್ರಣ್ಣ ಶಿರಗೂಂಬಿ. ಶಿವಯೋಗಿ ಹೊಸಗೌಡ್ರ. ರಾಜು ತರ್ಲಗಟ್ಟ. ಚನ್ನಪ್ಪ ಮರಡೂರ. ಅಬ್ದುಲ್ ಬುಡಂದಿ. ರಾಜು ಮುತಗಿ. ನಂದೀಶ ಮಾಳಗಿ. ಮಹೇಂದ್ರ​‍್ಪ ತಳವಾರ. ಪರಮೇಶಗೌಡ ಲಕ್ಕನಗೌಡ್ರ . ಮುಂತಾದವರು ಉಪಸ್ಥಿತರಿದ್ದರು