ಲೋಕದರ್ಶನ ವರದಿ
ಸಂಕೇಶ್ವರ : ಇಲ್ಲಿಗೆ ಘೋಡಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಬೆಂಬಲಿತ ರೈತ ಸಹಕಾರಿ ಪೆನಲ್ ಅಭ್ಯಥರ್ಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ಅಪ್ಪುನಾಯ್ಕ ಯಲನಾಯ್ಕ ಪಾಟೀಲ, ಅಪ್ಪಣ್ಣಾ ಬಾಳಗೌಡ ಮುಗಳಿ, ಗಂಗಾಧರ ಮಲ್ಲಪ್ಪ ಕಡೇಲಿ, ಬಸವಣ್ಣೆಪ್ಪಾ ನಾಗಪ್ಪ ಭಂಗಿ, ಮಲ್ಲಯ್ಯ ಗದಿಗೆಯ್ಯ ಗೂಗಿಕೊಳ್ಳ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಶಿವಲಿಂಗ ದಾದಬಾನಟ್ಟಿ, ಶ್ರೀಮತಿ ಶಾರವ್ವ ಭೂಶಿ, ಸತ್ಯವ್ವಾ ಬಡಕುಂದ್ರಿ, ಮಲಿಕಸಾಬ ಮೋಕಾಶಿ, ಶಾನಪ್ಪ ತಳವಾರ, ನಿವರ್ಾಣಿ ಸನದಿ, ಯಲ್ಲಪ್ಪ ತುರಮುರಿ 7 ಜನರು ಅವಿರೋಧ ಆಯ್ಕೆಯಾಗಿದ್ದಾರೆ.
ಹಿರಾಶುಗರ ವೈಸ-ಚೇರಮನ್ ಶ್ರೀಶೈಲಪ್ಪ ಮಗದುಮ್ಮ, ಮುಖಂಡ ಹಣಮಂತನಾಯ್ಕ ಪಾಟೀಲ, ಜಿ.ಪಂ. ಸದಸ್ಯ ಅಜರ್ುನನಾಯ್ಕ ಪಾಟೀಲ, ರಾಚಯ್ಯ ಹಿರೇಮಠ, ಸಿದ್ರಾಮ ಮುಗಳಿ, ಮಲ್ಲಿಕಾಜರ್ುನ ಅಂಕಲಗಿ ಮುಖಂಡರುಗಳ ನೇತೃತ್ವದಲ್ಲಿ ಹಾಗೂ ಎಲ್ಲ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತಿಯಲ್ಲಿ ಈ ಚುನಾವಣೆ ನಡೆಯಿತು. ತಾ.ಪಂ. ಅಧಿಕಾರಿ ರಿಯಾಜ ಮುಲ್ತಾನಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.