ಗೌತಮ ಬುದ್ಧ ಭಾವ ಚಿತ್ರಕ್ಕೆ ಸೇವಾ ಸಮೀತಿಗಳಿಂದ ಮಾಲಾರೆ​‍್ಣ

ಗೌತಮ ಬುದ್ಧ ಭಾವ ಚಿತ್ರಕ್ಕೆ ಸೇವಾ ಸಮೀತಿಗಳಿಂದ ಮಾಲಾರೆ​‍್ಣ Gautama Buddha Bhava's image is not acceptable to the service committees

ಲೋಕದರ್ಶನ ವರದಿ 

ಹುಬ್ಬಳ್ಳಿ 05: ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಗೌತಮ ಬುದ್ಧನ ಜಯಂತಿ ಹಾಗೂ   ಬುದ್ಧಪೂರ್ಣಿಮೆಯ ಅಂಗವಾಗಿ   ಆಲೂರು ವೆಂಕಟರಾವ  ಸಾಂಸ್ಕೃತಿಕಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ   ಇಲಾಖೆ ಆಯೋಜಿಸಿದ್ದ    ಕಾರ್ಯಕ್ರಮದಲ್ಲಿ  ಜ್ಞಾನದ ಬೆಳಕನ್ನುಪಸರಿಸಿ, ಶಾಂತಿ ಮಂತ್ರವಬೋಧಿಸಿದ ಮಹಾಜ್ಞಾನಿ, ಭಗವಾನ್   ಗೌತಮ  ಬುದ್ಧ  ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಸದಸ್ಯರು  ಮಾಲಾರೆ​‍್ಣ ಮಾಡಿ  ಗೌರವದಿಂದ ಶ್ರದ್ಧಾಭಕ್ತಿಯಿಂದ ಪ್ರಣಾಮಗಳನ್ನು ಸಲ್ಲಿಸಿದರು.

ಭಗವಾನ ಗೌತಮ ಬುದ್ಧನ ಆಶೀರ್ವಾದ ಸದಾವಕಾಲ ಭಕ್ತರ ಮೇಲೆ ಇರಲಿ ಎಂದು ಆಶಯ ವ್ಯಕ್ತಪಡಿಸಿದರು. ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ಸನದಿ,   ಸೋಹನ ಸುರೇಶ ಹೊರಕೇರಿ,   ರಾಣಿಚನ್ನಮ್ಮ ಪರಿಸರ ಸೇವಾಸ ಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥ ಪಾಲಕ ಡಾ. ಸುರೇಶಡಿ. ಹೊರಕೇರಿ,   ಗ್ರಂಥಪಾಲಕ ಮಾರುತಿ ತಳಗೇರಿ, ಅನಿಲ್ಮೇತ್ರಿ, ಗಣ್ಯರು,   ಮುಂತಾದವರು ಇದ್ದರು.