ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನುಭಾವ ಗಾಂಧೀಜಿ: ಹಿಟ್ಟಿನಮಠ

ಲೋಕದರ್ಶನವರದಿ

ಮಹಾಲಿಂಗಪುರ : ಮಹಾತ್ಮಾ ಗಾಂಧಿಜೀಯವರು ಭಾರತಕ್ಕೆ ಸ್ವಾತಂತ್ರವನ್ನು ತಂದುಕೊಟ್ಟ ಮಹಾನುಭಾವರು ಎಂದು ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.

ಬುಧವಾರ ಮುಂಜಾನೆ ಸ್ಥಳೀಯ ಬನಶಂಕರಿದೇವಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಗಾಂಧಿಜಯಂತಿ ಕಾರ್ಯಕ್ರಮವನ್ನು ಗಾಂಧಿಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉಧ್ಘಾಟನೆ ಮಾಡಿ ಮಾತನಾಡಿದ ಅವರು ಸಾಮಾನ್ಯ ಬಾಲಕನಾಗಿದ್ದು ವಿಶಿಷ್ಟ ವ್ಯೆಕ್ತಿಯಾಗಿ ಬೆಳೆದು ವಿಶ್ವಮಾನ್ಯರೆಂದು ಹೆಸರು ಪಡೆದ ಗಾಂಧಿಜೀಯವರ ಜೀವನವು ಆದರ್ಶಮಯವಾಗಿರುವುದು, ಗಾಂಧಿಜೀಯವರ ಮನೆಯಲ್ಲಿನ ಭಜನೆ,ರಾಮಾಯಣ,ಪಾರಾಯಣ,ಉಪನ್ಯಾಸಗಳು ಚಚರ್ೆ ಇವುಗಳು ಅವರ ಮೇಲೆ ಪ್ರಭಾವ ಬೀರಿದವು ಅದೇ ರೀತಿ ಸತ್ಯ ಹರಿಶ್ಚಂದ್ರ ನಾಟಕ ನೋಡಿದಾಗ ಹರಿಶ್ಚಂದ್ರನಂತೆ ಸತ್ಯವನ್ನೆ ಹೇಳಬೇಕು ಎಂಬ ಭಾವನೆ ಅವರಲ್ಲಿ ಮೂಡಿಬಂತು.

    ಈ ಎಲ್ಲ ತತ್ವಗಳನ್ನು ಅವರು ತಮ್ಮ ಜೀವನದಲ್ಲಿ ಅನುಸರಿಸುತ್ತಾ ಬಂದಿರುವುದರಿಂದಲೇ ಅವರು ಒಬ್ಬ ನಮ್ಮ ದೇಶದ ಮಹಾನುಭಾವರಾಗಿ ಬೆಳೆಯಲು ಸಾಧ್ಯವಾಗಿದೆ. ಕಾರಣ  ನಮ್ಮ ದೇಶದಲ್ಲಿ ಗಾಂಧಿಜೀಯವರ ಹುಟ್ಟುಹಬ್ಬವನ್ನು ಅಕ್ಟೋಬರ 2 ರಂದು ಆಚರಿಸುತ್ತಾರೆ ಇಂಥ ಮಹಾತ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಕೂಡ ಸ್ವಲ್ಪ ಮಟ್ಟಿಗಾದರೂ ನಾವೇಲ್ಲರೂ ಅನುಸರಿಸಿಕೊಂಡಾಗ ಮಾತ್ರ ಈ ಜಯಂತಿ ಆಚರಣೆಗೆ ಒಂದು ಅರ್ಥ ಬರುತ್ತದೆ ಎಂದರು.

  ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಮಹಾತ್ಮಾ ಗಾಂಧಿಯವರು ಒಬ್ಬ ವ್ಯಕ್ತಿಯಾಗಿರದೆ ದೇಶದ ಎಲ್ಲ ಜನರ ಕಣ್ಮನಿಯಾಗಿ ಶಕ್ತಿಮೂಲವಾಗಿದ್ದರು.  ಅಪ್ಪಟ ಭಾರತೀಯನಾಗಿ ಸಂಸ್ಕೃತಿಯ ಆರಾಧಕನಾಗಿ, ತ್ಯಾಗಿಯಾಗಿ ಮಹಾತ್ಮ ರಾಷ್ಟ್ರಪಿತ ಎನಿಸಿದರು. ಇಂದಿಗೂ ಗಾಂಧಿಜೀಯವರ ಆಚರಣೆ ಮಾತುಗಳು,ವಿವಿಧ ತತ್ವಗಳು ಹಲವರಿಗೆ ಆದರ್ಶವಾಗಿವೆ. ಗಾಂಧಿಜೀಯವರ ನುಡಿ.ನಡೆ,ವಿಚಾರಗಳನ್ನು ಅಹಿಂಸೆ ಸತ್ಯೆ,ತ್ಯಾಗಗುಣಗಳು, ದೇಶದ ಬಗೆಗಿನ ಕಾಳಜಿ, ನಿಸ್ವಾರ್ಥ ಸೇವೆ ಭಾರತೀಯರಿಗೆಲ್ಲ ಮಾರ್ಗದರ್ಶಕ ಸೂತ್ರಗಳಾಗಿವೆ ಎಂದರು. 

   ಈ ಸಂದರ್ಭದಲ್ಲಿ ಇತ್ತಿಚೇಗೆ ಮಂತ್ರಾಲಯದಲ್ಲಿ ನಡೆದ ಹೈದ್ರಾಬಾದ ಕನರ್ಾಟಕ ಗಡಿನಾಡು ಜಾನಪದ ಉತ್ಸವದಲ್ಲಿ ಶ್ರೀಗುರುರಾಘವೇಂದ್ರ ಸಧ್ಭಾವನಾ ಪ್ರಶಸ್ತಿ ಪಡೆದ ಸ್ಥಳೀಯ ಪತ್ರಕರ್ತರಾದ ಮಹೇಶ ಆರಿ, ಚಂದ್ರಶೇಖರ ಮೋರೆ ಮತ್ತು ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ಥೀಕರಿಸಿದ ಬಾಬುರಾವ ಕಮತಗಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರಾದ ಎಸ್.ಎಸ್. ಈಶ್ವರಪ್ಪಗೋಳ, ಮೀರಾ ತಟಗಾರ,ಎಸ್.ಸಿ ಹಳ್ಳಿ, ಮುಖ್ಯ ಗುರುಗಳಾದ ಗೀತಾ ಪಾಟೀಲ,ಅನ್ನಪೂರ್ಣ ಚಿಚಖಂಡಿ, ಶಿವಲೀಲಾ ಹಿರೇಮಠ, ಸುರೇಖಾ ಕೋಳಿ, ಸೀತಾರಾ ಗಂಜಾಳೆ, ಉಮಾ ಶಿರೋಳ, ಸುನೀತಾ ಸಿಂಪಿ, ಮಾಲಾ ಮಾಳಿ, ಮಂಜುಳಾ ನಾಶಿ,ಹನಮಂತ ನಾವಿ ಸೇರಿದಂತೆ ಹಲವರು ಇದ್ದರು