ಈದ ಮಿಲಾದ ಅಂಗವಾಗಿ ಬುದ್ದಿಮಾಂದ್ಯ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಲೋಕದರ್ಶನ ವರದಿ

ಬೈಲಹೊಂಗಲ,21: ಈದ ಮಿಲಾದ ಹಜರತ ಮಹಮದ ಪೈಗಂಬರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮಾಜ ಬಾಂಧವರು ಬುಧವಾರ ಪಟ್ಟಣದ ಕಾಮರ್ೆಲ್ ಶಾಲೆಯ ಬುದ್ದಿಮಾಂದ್ಯ ಮಕ್ಕಳಿಗೆ  ಹಾಗೂ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. 

ಮುಖಂಡ ರಫೀಕ ಬಡೇಘರ ಮಾತನಾಡಿ, ಮಹಮದ ಪೈಗಂಬರು ಸರ್ವರನ್ನು ಸರಿ ಸಮಾನವಾಗಿ ಕಂಡು ಸಮಾಜದ ಸುಧಾರಣ ಮಹತ್ವದ ಪಾತ್ರ ನಿರ್ವಹಿಸಿದವರು. ಅವರ ಮಾರ್ಗದರ್ಶನದ ಅಡಿಯಲ್ಲಿ ಎಲ್ಲರೂ ಕೂಡಿಕೊಂಡು ಜೀವನ ನಡೆಸಿದ್ದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಕಲರಿಗೂ ಲೇಸನ್ನು ಬಯಸಿದ ಅವರ ಜನ್ಮದಿನದಂದು ಸಮಾಜದ ವತಿಯಿಂದ ಬುದ್ದಿಮಾಂದ್ಯ ಹಾಗೂ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ ಎಂದರು. 

ಮಹಮದ ಪೈಗಂಬರರು ತಮ್ಮ ಜೀವಿತಾವಧಿಯಲ್ಲಿ ಹೇಳಿದ ಮಾತುಗಳು ಇಂದು ಮುಸ್ಲಿಂ ಸಮಾಜದ ಕಾನೂನುಗಳಾಗಿ ರೂಪುಗೊಂಡಿದ್ದು ದೂರದೃಷ್ಠಿ ಹೊಂದಿದ್ದ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸಮಾಜದ ಮುಂಚೂಣಿಗೆ ಬರಬೇಕೆಂದರು. 

ಈ ಸಂದರ್ಭದಲ್ಲಿ ಲತೀಫ ತೋಲಗಿ, ಇಸ್ಮಾಯಿಲ್ ಬಡೇಘರ, ಆಶೀಫ ಗೋವೆ, ಇಕ್ಬಾಲ ಜಮಾದಾರ, ಇಲಾಯಿ ಹುಬ್ಬಳ್ಳಿ, ಜಾಫರ ಕೌಜಲಗಿ, ಐಜಾಜ ಫಿರಜಾದೆ, ಇರಫಾನ ತಿಗಡಿ, ಫಾರೂಕ ಮುಲ್ಲಾ, ನಿಜಾಮ ಗುರ್ಲಹೊಸೂರ, ಬಾಬುಸಾಬ ಸುತಗಟ್ಟಿ, ಸಯ್ಯದ ಸುಭಾನಿ, ಶರೀಫ ಮೊಖಾಶಿ, ಮಹಮ್ಮದ ಹನೀಫ ಬಾಗವಾನ ಫಕ್ರುಸಾಬ ಕುಸಲಾಪುರ ಬುಡ್ಡೇಸಾಬ ಮನಿಯಾರ ಮುಂತಾದವರು ಇದ್ದರು.