ಧಾರವಾಡ 06: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಅತ್ಯಂತ ಯಶಸ್ವಿಯಾಗಿ ಜರುಗಿದ ನಿಮಿತ್ತ ಮತ್ತು ಮಿಷನ್ ವಿದ್ಯಾಕಾಶಿಯ ಕೊಡುಗೆಯನ್ನು ಸ್ಮರಿಸಿ, ಧಾರವಾಡ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿ ರಾಮಚಂದ್ರ ಸದಲಗಿ ಹಾಗೂ ಗ್ರಾಮೀಣ ವಲಯದ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಇಂದು ಬೆಳಿಗ್ಗೆ ಜಿಲ್ಲಾಧಿಗಳ ಕಚೇರಿ ನೂತನ ಸಭಾಭವನದಲ್ಲಿ, ಮಿಷನ್ ವಿದ್ಯಾಕಾಶಿ ಯೋಜನೆಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಗೌರವಿಸಿ, ಅಭಿನಂದಿಸಿರು. ಮಿಷನ್ ವಿದ್ಯಾಕಾಶಿಯ ಕೊಡುಗೆಯನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.