ರಾಷ್ಟ್ರಮಟ್ಟದ ಬೃಹತ್ತ ಕೃಷಿಮೇಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು : ಡಾ.ಎನ್.ಎ.ಮಗದುಮ್ಮ
ರಾಯಬಾಗ, 08: ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ರಾಷ್ಟ್ರಮಟ್ಟದ ಬೃಹತ್ತ ಕೃಷಿ ಮೇಳ ಆಯೋಜಿಸಿದ್ದು ಸುತ್ತ ಮುತ್ತಲಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ.ಎನ್.ಎ.ಮಗದುಮ್ಮ ಹೇಳಿದರು. ಮಂಗಳವಾರ ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದ ಆವರಣದಲ್ಲಿ 38ನೇ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣಕ್ಕಾಗಿ ವೀರಭದ್ರ ಸ್ವಾಮೀಜಿಯವರು ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಎಲ್ಲರೂ ಕೂಡಿಕೊಂಡು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಅರ್ಜುನ ನಾಯಿಕವಾಡಿ, ಜ್ಯೋತಿ ಕೆಂಪ್ಪಟ್ಟಿ, ದೀಲೀಪ ಜಮಾದಾರ, ನಿರ್ಮಲಾ ಪಾಟೀಲ, ಹರೀಶ ಕುಲಗುಡೆ, ಹಾಜಿ ಮುಲ್ಲಾ, ಮಾರುತಿ ನಾಯಿಕ, ಅಣ್ಣಾಸಾಬ ಸಮಾಜೆ, ಸುನೀಲ ಜಾಧವ, ಸಿದ್ದಲಿಂಗ ಹಿರೇಕುರುಬರ, ಸುಭಾಷ ಕೋಟಿವಾಲೆ, ಫಾರೂಕ ಮೋಮಿನ, ಶಿವಾನಂದ ಮರಾಯಿ, ಮಲ್ಲಕಾರಿ ಕೋಟ್ರೆ, ಶೈಲಜಾ ಕರಿಭೀಮಗೋಳ, ತನುಜಾ ಶಿಂಗೆ ಸೇರಿ ಅನೇಕರು ಇದ್ದರು.