ಕಕ್ಕೇರಿಯಲ್ಲಿ ರೈತರ ಪ್ರತಿಭಟನೆ: ರಾಜ್ಯ ಹೆದ್ದಾರಿ ಬಂದ್

ಕಕ್ಕೇರಿ:  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಸೆ.22 ರಂದು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಸರಕಾರ ಖಾನಾಪುರ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಲು ಮತ್ತು ರೈತರ ಬೆಳೆ ಸಾಲನ್ನು ಸಂಪೂರ್ಣ ಮನ್ನಾ ಮಾಡುವ ಕುರಿತು ಬೇಡಿಕೆಗಳನ್ನು ಮಂಡಿಸಿದರು. 

ಪಕ್ಷಾತೀತವಾಗಿ ನಾನಾ ಸಂಘಟನೆಗಳು,ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷರು,ಜಿಲ್ಲಾಧ್ಯಕ್ಷರು,ತಾಲೂಕಾಧ್ಯಕ್ಷರು,ಪದಾಧಿಕಾರಿಗಳು ರೈತರ ಬದುಕಿನ ರಕ್ಷಣೆಗಾಗಿ ರೈತ ಸಮೂಹದೊಂದಿಗೆ ಸಾರಿಗೆ ಸಂಪರ್ಕ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಹತ್ತಾರು ಬಸ್ ಗಳು ಅನೇಕ ವಾಹನ ಸವಾರರು ಪರದಾಡುವಂತಾಯಿತು. 

ಮಳೆಯ ಅಭಾವದಿಂದ ಕಬ್ಬು,ಭತ್ತ ಮತ್ತು ಇತರೆ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ.ದನಕರುಗಳು ಮತ್ತು ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ.ಮತ್ತು ದನಕರುಗಳು ಗಂಟು ಬೇನೆಯ ಬಾಧೆಯಿಂದ ಸಾವನ್ನಪ್ಪಿ ರೈತನಿಗೆ ಅಪಾರ ಹಾನಿಯಾಗುತ್ತಿದೆ. 

ಸೆ. 11ರಂದು ಮುಖ್ಯಮಂತ್ರಿ ಅವರಿಗೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಮುಖಾಂತರ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲು ಹಾಗೂ ಬಾಂಕಿನಲ್ಲಿರುವ ರೈತರ ಬೆಳೆಸಾಲ ಮನ್ನಾ ಮಾಡುವಂತೆ ಸಂಕೇತಿಕವಾಗಿ ಪ್ರತಿಭಟಿಸಿ ಮನವಿ ಸಲ್ಲಿಸಲಾಗಿತ್ತು.ಆದರೂ ಸ್ಪಂದಿಸದ ರಾಜ್ಯ ಸರಕಾರದ ವಿರುದ್ಧ ಎಚ್ಚರಿಕೆ ನೀಡಲು ಇಂದು ಪ್ರತಿಭಟನೆ ಕೈಗೊಳ್ಳಲಾಯಿತು.ತಾಲೂಕಿನ ತಹಶೀಲದಾರರು ಬಂದು ಮನವಿ ಸ್ವೀಕರಿಸುವವರೆಗೆ ಪ್ರತಿಭಟನೆ ನಡೆಸುವುದಾಗಿ ರೈತರು ಘೋಷಣೆಗಳನ್ನು ಕೂಗುತ್ತ ರಸ್ತೆ ಮಧ್ಯ ಕುಳಿತು ಧರಣಿ ನಡೆಸಿದರು.ಕಕ್ಕೇರಿ ಮತ್ತು ಸುತ್ತಲಿನ ವಿವಿಧ ಗ್ರಾಮಗಳ ನೂರಾರು ರೈತರು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು. 

ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ,ಹಸಿರು ಸೇನೆ ತಾಲೂಕಾಧ್ಯಕ್ಷ ಅಶೋಕ ಯಮಕನಮರಡಿ, ಕಕ್ಕೇರಿ ಗ್ರಾಮದ ಯಲ್ಲಪ್ಪ ಚೆನ್ನಾಪುರ,ಶಿವಪ್ಪ ಅಂಬಡಗಟ್ಟಿ ಮತ್ತು ಅನೇಕ ಮಹಿಳೆಯರು ಮತ್ತು ರೈತ ಬಾಂಧವರು ಭಾಗವಹಿಸಿದ್ದರು.